ಸಾರಾಂಶ
ಜೀವ ವೈವಿಧ್ಯದಿಂದ ಕೂಡಿರುವ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಪ್ರಭೇದದ ಪರಾವಲಂಬಿ ಕಣಜವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಚಾಮರಾಜನಗರ: ಜೀವ ವೈವಿಧ್ಯದಿಂದ ಕೂಡಿರುವ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಪ್ರಭೇದದ ಪರಾವಲಂಬಿ ಕಣಜವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಇದೇ ಮೊದಲ ಬಾರಿಗೆ ಹೊಸ ಪ್ರವೇಧದ ಪರವಲಾಂಬಿ ಕಣಜ ಇದಾಗಿದ್ದು ಏಟ್ರಿ (ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕೊಲೊಜಿ ಮತ್ತು ಎನ್‌ವಿರಾನ್ಮೆಂಟ್) ಸಂಸ್ಥೆಯ ಸಂಶೋಧಕರಾದ ರಂಜಿತ್ ಎ.ಪಿ. ಮತ್ತು ಪ್ರಿಯದರ್ಶಿನ್ ಧರ್ಮರಾಜನ್ ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಪರವಾಲಂಬಿ ಕಣಜ ಪ್ರಭೇದ ಕಂಡು ಹಿಡಿದಿದ್ದಾರೆ.
ಬಿಳಿಗಿರಿರಂಗನಬೆಟ್ಟದ ಜೊತೆಗೆ ದೇಶದ 4 ಕಡೆ ಹೊಸ ಪ್ರಭೇದದ ಪರಾವಲಂಬಿ ಕಣಜ ಪತ್ತೆ ಹಚ್ಚಿ ಸಂಶೋಧನಾ ವರದಿ ಪ್ರಕಟಿಸಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ಜೊತೆಗೆ ತಮಿಳುನಾಡಿನ ಕಲಕಾಡ್ ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶ, ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆ ಮತ್ತು ಉತ್ತರಾಖಂಡದ ತೆಹ್ರಿಯಲ್ಲಿ ಕಣಜಗಳನ್ನು ಪತ್ತೆ ಹಚ್ಚಿದ್ದಾರೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಕಣಜಕ್ಕೆ ಕಾಳಿಂಗ ಸರ್ಪದ ಸಂಶೋಧನೆ ಮತ್ತು ಸಂರಕ್ಷಣೆಗೆ ದುಡಿದಿರುವ ಡಾ.ಪಿ.ಗೌರಿಶಂಕರ್ ಅವರ ಹೆಸರಿಡಲಾಗಿದೆ. ಈ ಬಗ್ಗೆ ಕೆಲ ತಿಂಗಳ ಹಿಂದೆಯಷ್ಟೇ ಇದೇ ಸಂಶೋಧನಾ ತಂಡವು ಹೊಸ ಪ್ರಭೇದದ ಹಲ್ಲಿ ಹಾಗೂ ಕಣಜವನ್ನು ಪತ್ತೆ ಹಚ್ಚಿದ್ದರು.