ಸರ್ಕಾರಕ್ಕೆ ಎಚ್ಚರಿಸಲು ಚಾಮುಂಡಿ ಚಲೋ: ಅಶೋಕ್‌

| N/A | Published : Aug 31 2025, 01:08 AM IST / Updated: Aug 31 2025, 10:24 AM IST

Karnataka LoP R Ashoka (File photo/ANI)
ಸರ್ಕಾರಕ್ಕೆ ಎಚ್ಚರಿಸಲು ಚಾಮುಂಡಿ ಚಲೋ: ಅಶೋಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಪದೇ ಪದೆ ಹಿಂದೂಗಳನ್ನು ಕೆಣಕುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಲು ‘ಚಾಮುಂಡಿ ಚಲೋ‘ ಮಾಡುವ ಚಿಂತನೆಯಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಾನು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

  ಬೆಂಗಳೂರು :  ಪದೇ ಪದೆ ಹಿಂದೂಗಳನ್ನು ಕೆಣಕುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಲು ‘ಚಾಮುಂಡಿ ಚಲೋ‘ ಮಾಡುವ ಚಿಂತನೆಯಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಾನು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ತಿಳಿದುಕೊಂಡು ಮಾಧ್ಯಮಕ್ಕೆ ತಿಳಿಸುತ್ತೇನೆ. ಚಾಮುಂಡಿ ಚಲೋ ಮಾಡುವ ಚಿಂತನೆಯಿದೆ. ರಾಜ್ಯಾದ್ಯಂತ ಎಲ್ಲಾ ಹಿಂದೂ ಸಂಘಟನೆಗಳು ಈ ಚಲೋದಲ್ಲಿ ಸೇರಲಿದ್ದಾರೆ. ಒಂದೊಂದೇ ಹಿಂದೂ ದೇವಸ್ಥಾನ ಮುಟ್ಟುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನಾವು ಎಚ್ಚರಿಕೆ ಸಂದೇಶ ನೀಡಲಿದ್ದೇವೆ ಎಂದರು.

ಸಿಎಂ ಸಿದ್ದು ಹಿಂದೂ ವಿರೋಧಿ ಕೆಲಸ:

ಸಿದ್ದರಾಮಯ್ಯ ದಸರಾದಲ್ಲೂ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರು ಹಿಂದೂಗಳ ವಿರೋಧಿಯಾಗಿ ಕಾಣುತ್ತಿದ್ದಾರೆ. ಮಾತು ತೆಗೆದರೆ ನಾನು ಹಿಂದೂ ಎನ್ನುವ ಸಿದ್ದರಾಮಯ್ಯ ಹಿಂದೂ ವಿರೋಧಿ ಕೆಲಸ ಮಾಡುವುದರಲ್ಲಿ ಎತ್ತಿ ಕೈ. ಇದನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು. ಇದೆಲ್ಲ ಮುಸ್ಲಿಂ ವೋಟ್‌ ಬ್ಯಾಂಕ್‌ ರಾಜಕಾರಣ ಎಂದು ಹಲವು ಮುಸ್ಲಿಂ ನಾಯಕರೇ ಹೇಳಿದ್ದಾರೆ. ಮುಸ್ಲಿಮರು ಮೂರ್ತಿ ಪೂಜೆ ಮಾಡುವುದಿಲ್ಲ. ಆದರೂ ಮುಸ್ಲಿಂ ವ್ಯಕ್ತಿಯಿಂದ ದಸರಾ ಉದ್ಘಾಟನೆ ಮಾಡಿಸುತ್ತಿರುವುದು ಏಕೆ? ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ಮತ್ತು ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಮುಸ್ಲಿಂ ನಾಯಕರೇ ಹೇಳುತ್ತಿದ್ದಾರೆ. ಅವರು ಮುಸ್ಲಿಂ ಸಮುದಾಯಕ್ಕೆ ಏನೂ ಮಾಡಿಲ್ಲ. ಈ ರೀತಿ ಪ್ರಚೋದನೆ ಮಾಡಿ ವೋಟ್‌ ಪಾಲಿಟಿಕ್ಸ್‌ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಧರ್ಮಸ್ಥಳದಲ್ಲಿ ಸಮಾವೇಶ

ಹಿಂದೂಗಳ ಕಾರ್ಯಕ್ರಮ

ಧರ್ಮ ಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ಭಾನುವಾರ ನಾನು ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ. ಇದು ಯಾವುದೇ ಪೊಲಿಟಿಕಲ್‌ ಪಾರ್ಟಿ ಕಾರ್ಯಕ್ರಮವಲ್ಲ. ಇದು ಹಿಂದೂಗಳಿಗೆ ಸಂಬಂಧಪಟ್ಟಿದ್ದು. ಧರ್ಮಸ್ಥಳ ಅಪವಿತ್ರ ಮಾಡಬೇಕು ಎಂದು ಕೆಲ ವಿದೇಶಿ ಶಕ್ತಿಗಳು ರಾಜ್ಯ ಹಾಗೂ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿದ್ದಾರೆ. ಇಂಥವರನ್ನು ಸರ್ಕಾರ ಮಟ್ಟ ಹಾಕಬೇಕಿತ್ತು. ಅದರೆ, ಸರ್ಕಾರದ ಎಡ ಬಿಡಂಗಿತದಿಂದ ಇದು ದೊಡ್ಡ ವಿಚಾರವಾಗಿಬಿಟ್ಟಿದೆ. ಈ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.

Read more Articles on