ಹುಚ್ಚಮ್ಮ ದೇಗುಲದಲ್ಲಿ ಚಂಡಿಕಾ ಹೋಮ

| Published : Jul 25 2024, 01:16 AM IST

ಸಾರಾಂಶ

ಹಾರನಹಳ್ಳಿ ಸಮೀಪದ ಯಳವಾರೆ ಗ್ರಾಮ ದೇವತೆ ಹುಚ್ಚಮ್ಮ ದೇವಿ ಮೂಲ ಸನ್ನಿಧಾನದಲ್ಲಿ ಜು. 28ರಂದು ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಹೋಮ ನಡೆಯಲಿದೆ. ಕೋಡಿಮಠ ಪೀಠಾಧ್ಯಕ್ಷರಾದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕೆಎಂ ಶಿವಲಿಂಗೇಗೌಡರು ಅಧ್ಯಕ್ಷರು ಕರ್ನಾಟಕ ಗೃಹ ಮಂಡಳಿ ಶಾಸಕರು ಅರಸೀಕೆರೆ ಕ್ಷೇತ್ರ ಶ್ರೇಯಸ್ ಪಟೇಲ್ ಲೋಕಸಭಾ ಸದಸ್ಯರು ಹಾಸನ ಮಾಜಿ ಅಡ್ವೋಕೆಟ್ ಜನರಲ್ ಅಶೋಕ್ ಹಾರನಹಳ್ಳಿ ಇವರು ಭಾಗವಹಿಸಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಹಾರನಹಳ್ಳಿ

ಸಮೀಪದ ಯಳವಾರೆ ಗ್ರಾಮ ದೇವತೆ ಹುಚ್ಚಮ್ಮ ದೇವಿ ಮೂಲ ಸನ್ನಿಧಾನದಲ್ಲಿ ಜು. 28ರಂದು ಲೋಕಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಹೋಮ ನಡೆಯಲಿದ್ದು, ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ, ಶ್ರೀ ಹುಚ್ಚಮ್ಮ ದೇವಿ, ಶ್ರೀ ಕೋಡಮ್ಮ ದೇವಿ ಯವರ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಳಗ್ಗೆ 7.30ಕ್ಕೆ ಮಹಾ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹಃ, ಯಳವಾರಮ್ಮ ಮೂಲ ಸನ್ನಿಧಿಯಲ್ಲಿ ಅಮ್ಮನವರಿಗೆ ಅಭಿಷೇಕ, ಕಳಶ ಸ್ಥಾಪನೆ, ಮಂಡಲ ರಚನೆ, ಅರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಸುಮಂಗಲಿ ಪೂಜೆ, ಆರತಿ, ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿದ್ದು ಹಾಸನದ ವೇದ ಬ್ರಹ್ಮ ಶ್ರೀ ಎಂ ವಿ ಕೃಷ್ಣಮೂರ್ತಿ ಘನಪಾಠಿಗಳ ಆಚಾರ್ಯತ್ವದಲ್ಲಿ ಚಂಡಿಕಾ ಹೋಮ ನಡೆಯಲಿದೆ.

ಸಂಜೆ 5 ಗಂಟೆಯಿಂದ ಶ್ರೀದೇವಿಯ ಸಮಸ್ತ ಭಕ್ತಾದಿಗಳು ಮತ್ತು ಗ್ರಾಮಸ್ಥರು ಹಾಗೂ ರೈತಬಾಂಧವರು ಕನ್ನಡ ಸಂಸ್ಕೃತಿ ಇಲಾಖೆ ಹಾಸನ ಇವರ ಸಹಕಾರದೊಂದಿಗೆ ಸಕಲ ಬಿರುದಾವಳಿಗಳಿಂದ ಮಂಗಳವಾದ್ಯಗಳೊಂದಿಗೆ ಮತ್ತು ಸಾಂಸ್ಕೃತಿಕ ಜನಪದ ಕಲಾತಂಡಗಳೊಂದಿಗೆ ಬೋರನ ಕೊಪ್ಪಲು ಶ್ರೀ ರಾಮಮಂದಿರದಿಂದ ಯಳವಾರೆ ಶ್ರೀ ಹುಚ್ಚಮ್ಮ ದೇವಿ ಮೂಲ ಸನ್ನಿಧಾನದವರಿಗೆ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಹುಚ್ಚಮ್ಮ ದೇವಿ ಮತ್ತುಹಾರನಹಳ್ಖಿ ಗ್ರಾಮದ ಶ್ರೀ ಕೋಡಮ್ಮ ದೇವಿಯವರ ಅದ್ಧೂರಿ ಆನೆ ಅಂಬಾರಿ ಉತ್ಸವ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಕೋಡಿಮಠ ಪೀಠಾಧ್ಯಕ್ಷರಾದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕೆಎಂ ಶಿವಲಿಂಗೇಗೌಡರು ಅಧ್ಯಕ್ಷರು ಕರ್ನಾಟಕ ಗೃಹ ಮಂಡಳಿ ಶಾಸಕರು ಅರಸೀಕೆರೆ ಕ್ಷೇತ್ರ ಶ್ರೇಯಸ್ ಪಟೇಲ್ ಲೋಕಸಭಾ ಸದಸ್ಯರು ಹಾಸನ ಮಾಜಿ ಅಡ್ವೋಕೆಟ್ ಜನರಲ್ ಅಶೋಕ್ ಹಾರನಹಳ್ಳಿ ಇವರು ಭಾಗವಹಿಸಲ್ಲಿದ್ದಾರೆ. ಅಂದು ಭಕ್ತರಿಗೆ ಹುಚ್ಚಮ್ಮ ದೇವಿ ದೇವಾಲಯದಲ್ಲಿ ಅನ್ನಸಂತರ್ಪಣೆ ಸೇವೆ ನಡೆಯಲಿದೆ. ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು, ಗ್ರಾಮಸ್ಥರು ಆಗಮಿಸುವಂತೆ ಹುಚ್ಚಮ್ಮ ದೇವಿ ಟ್ರಸ್ಟ್‌ನವರು ಕೋರಿದ್ದಾರೆ.