ನಿಡುಗಲ್ ಮಠಕ್ಕೆ ಚಂದ್ರಪ್ಪ ಭೇಟಿ

| Published : Apr 25 2024, 01:07 AM IST

ಸಾರಾಂಶ

ಪ್ರಸಿದ್ಧಿ ಪಡೆದಿರುವ ವಾಲ್ಮೀಕಿ ಸಮುದಾಯದ ನಿಡುಗಲ್ ಮಠಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಚಿತ್ರದುರ್ಗ: ಪ್ರಸಿದ್ಧಿ ಪಡೆದಿರುವ ವಾಲ್ಮೀಕಿ ಸಮುದಾಯದ ನಿಡುಗಲ್ ಮಠಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಪಾವಗಡ ತಾಲೂಕಿನಲ್ಲಿನಲ್ಲಿರುವ ನಿಡುಗಲ್ಲು ಮಹಾಸಂಸ್ಥಾನಕ್ಕೆ ಬುಧವಾರ ಭೇಟಿ ನೀಡಿದಾಗ ಬರಮಾಡಿಕೊಂಡ ಶ್ರೀ ವಾಲ್ಮಿಕಿ ಸಂಜಯ ಕುಮಾರ ಸ್ವಾಮೀಜಿ ಆಶೀರ್ವದಿಸಿ ಮಾತನಾಡಿದರು. ಸರಳ, ಸಜ್ಜನಿಕೆ, ಜನರ ಜೊತೆ ನಿರಂತರ ಒಡನಾಟ ಹೊಂದಿರುವವರು, ಧಾರ್ಮಿಕ ಕ್ಷೇತ್ರವನ್ನು ಗೌರವಿಸುವಂತಹವರು ರಾಜಕೀಯ ಕ್ಷೇತ್ರದಲ್ಲಿ ಇರಬೇಕೆಂದು ಅಪೇಕ್ಷೆ ಪಡುತ್ತೇವೆ ಎಂದರು.

ವಾಲ್ಮಿಕಿ ಸಮುದಾಯದ ಹಿರಿಯ ನಾಯಕ, ಸಚಿವ ಎನ್.ರಾಜಣ್ಣ ಹಾಗೂ ನೂರಾರು ಮುಖಂಡರು ಚಂದ್ರಪ್ಪ ಅವರನ್ನು ಗೆಲ್ಲಿಸಲು ಶ್ರಮಿಸುತ್ತಿರುವ ವಿಷಯ ನಮ್ಮ ಗಮನಕ್ಕೆ ಇದೆ. ನಾಡಿನ ಮಠ, ಮಾನ್ಯಗಳು ಹಾಗೂ ಜನರ ಕುರಿತು ಹೆಚ್ಚು ಗೌರವ ಭಾವನೆ ಹೊಂದಿರುವ ವಿನಯವಂತಿಕೆಯ ಚಂದ್ರಪ್ಪ ಪ್ರಜಾಪ್ರಭುತ್ವ ರಕ್ಷಣೆಗೆ ಬದ್ಧರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಲ್ಮೀಕಿ ಸಮುದಾಯದ ಮುಖಂಡರಾದ ರಾಮಾಂಜನೇಯ, ರಾಜೇಶ್, ರವಿ, ಚಂದ್ರು ಇತರರು ಇದ್ದರು.