ಸಾರಾಂಶ
ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಚಂದ್ರಶೇಖರ್, ನಾಗರಾಜು ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ಸಹ ನಾಮಪತ್ರವನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶೋಭಾ ಘೋಷಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕನಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಚಂದ್ರಶೇಖರ್, ನಾಗರಾಜು ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಚಂದ್ರಶೇಖರ್, ನಾಗರಾಜು ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ಸಹ ನಾಮಪತ್ರವನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶೋಭಾ ಘೋಷಿಸಿದರು.
ನೂತನ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ನಾಗರಾಜು ಅವರನ್ನು ಎಲ್ಲಾ ನಿರ್ದೇಶಕರು, ಮುಖಂಡರು ಅಭಿನಂಧಿಸಿದರು.ಚಿನಕುರಳಿ ಡೇರಿ ಅಧ್ಯಕ್ಷ ಸಿ.ಶಿವಕುಮಾರ್ ಮಾತನಾಡಿ, ಹೈನುಗಾರಿಕೆ ಗ್ರಾಮೀಣ ಪ್ರದೇಶದ ರೈತರ ಬದುಕು ನಿರ್ವಹಣೆಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರು ಸೇರಿ ಡೇರಿ ಅಭಿವೃದ್ದಿಗೆ ಪೂಕರವಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಈ ವೇಳೆ ತಾಪಂ ಮಾಜಿ ಸದಸ್ಯ ಸಿ.ಎಸ್.ಗೋಪಾಲಗೌಡ, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಅಂಕೇಗೌಡನಕೊಪ್ಪಲು ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಪುಟ್ಟಸ್ವಾಮಿ(ಪಾಪಣ್ಣ), ಮಹಮದ್ ಇಮ್ತೀಯಾಜ್ ಪಾಷ್, ನಿರ್ದೇಶಕರಾದ ರಾಜೇಶ್, ಯೋಗೇಶ್, ನಿಂಗರಾಜು, ಮಂಜುನಾಥ್, ಟಿ.ಸತೀಶ್, ಪ್ರಕಾಶ್, ಯೋಗೇಂದ್ರ, ಮಂಜುಳ, ನಾಗಮ್ಮ, ಎಸ್.ಸ್ವಾಮಿ, ಕಾರ್ಯದರ್ಶಿಲೋಕೇಶ್, ಗ್ರಾಪಂ ಸದಸ್ಯರಾದ ನಾಗೇಗೌಡ, ಹೇಮಣ್ಣ, ಕೃಷ್ಣೇಗೌಡ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.