ಸಾರಾಂಶ
ಯಲ್ಲಾಪುರ: ಪುಣ್ಯದ ಗಾಳಿ ಬೀಸಿದರೆ ಬದಲಾವಣೆ ಆಗುತ್ತದೆ. ಎಷ್ಟೋ ಕಾಲದಿಂದ ಜಡ್ಡುಗಟ್ಟಿತ್ತು. ಬೀಸಿದ ಹೊಸ ಗಾಳಿ ಬದಲಾವಣೆಯ ಪರ್ವ ಹಾಡಿದೆ. ನಾವು ಕೊಡುವುದು ನಶ್ವರ. ಆತ ಕೊಡುವುದು ಈಶ್ವರ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗಳು ನುಡಿದರು.
ಪಟ್ಟಣದ ನಾಯಕನಕೆರೆಯ ದತ್ತಮಂದಿರ ಲೋಕಾರ್ಪಣಾ ಕಾರ್ಯಕ್ರಮದ ಮೂರನೇ ದಿನ ಬ್ರಹ್ಮ ಕಲಶಾಭಿಷೇಕದಲ್ಲಿ ಸಾನ್ನಿಧ್ಯ ವಹಿಸಿ, ಕಾರ್ಯಕರ್ತರರು, ಶಿಷ್ಯರು, ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.ಶಿವಾನಂದರ ಗುರುಮೂರ್ತಿಗೆ ಸುಂದರ ಆವರಣವಾಗಬೇಕು. ಇದಕ್ಕೆ ಹಣ, ಸ್ಥಳ ಗೌಣ. ಜನ ಬೇಕು. ದತ್ತನ ಕರುಣೆ, ಜನರ ಸಹಕಾರ ಬೇಕು. ಇದೇ ಓಘ ತಡೆಯಾಗದೇ ಮುಂದುವರಿದು ಮುಂದಿನ ದತ್ತ ಜಯಂತಿಗೆ ಭಿಕ್ಷಾ ಮಂದಿರ ನಿರ್ಮಾಣವಾಗಬೇಕು ಎಂದು ಆದೇಶ ನೀಡಿದರು.
ದತ್ತಮಂದಿರ ಯಲ್ಲಾಪುರದ ಪುಷ್ಪಕ ವಿಮಾನ. ಎಲ್ಲದಕ್ಕೂ ಎಲ್ಲರಿಗೂ ಅವಕಾಶ ಇಲ್ಲಿದೆ. ನಿದ್ದೆಗೆಟ್ಟು, ಬಿಸಿಲು, ಮಳೆ ಲೆಕ್ಕಿಸದೇ ಶ್ರಮಪಟ್ಟವರಿಗೆ ಹಾರ ತುರಾಯಿ ಬೇಳಬೇಕಿತ್ತು. ಇದ್ದಕ್ಕಿದ್ದಂತೆ ಬಂದ ಕ್ಷೇತ್ರದ ಜತೆಯ ಬಾಂಧವ್ಯ ದತ್ತನ ಮಹಿಮೆ. ಒಂದು ಹಂತದ ಕಾರ್ಯವಾಗಿದೆ. ಭಕ್ತರಿಗೆ ನೆರಳಾಗಬೇಕು. ಅನ್ನದಾನ, ಗೋಸೇವೆ ನಡೆಯಬೇಕು. ದತ್ತ ಭಿಕ್ಷೆ ನಿರಂತರವಾಗಿನಡೆಯಬೇಕು. ದತ್ತ ಜಯಂತಿಯಂದು ನಡೆಯುವ ದತ್ತ ಯಾತ್ರೆ ಮೊದಲು ಯಲ್ಲಾಪುರ, ನಂತರ ಎಲ್ಲ ಪುರಗಳನ್ನು ತಲುಪಲಿ ಎಂದು ಆಶಿಸಿದರು.ಸಿವಿಲ್ ಕಾಮಗಾರಿಗಳ ಕಾಮಗಾರಿ ನಿರ್ವಹಿಸಿದ ನರಸಿಂಹ ಗಾಂವ್ಕರ ಮಾತನಾಡಿ, ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಹಗಲಿರುಳು ಕಾರ್ಮಿಕರು ಶ್ರಮಿಸಿದ್ದಾರೆ. ಶೀಘ್ರವಾಗಿ ನಿರ್ಮಿಸುವ ಸವಾಲು ಸಾಧ್ಯವಾಗುವುದಕ್ಕೆ ಇದಕ್ಕೆ ಶಕ್ತಿ ಶ್ರೀಗಳ ಆಶೀರ್ವಾದದಿಂದಲೇ ಬಂದಿದೆ ಎಂದರು.
ದತ್ತ ಮಂದಿರದ ಉಸ್ತುವಾರಿ ಮಹೇಶ ಚಟ್ನಳ್ಳಿ ನಿರೂಪಿಸಿದರು.20ರಂದು ಮುಖ್ಯಪ್ರಾಣ ದೇವರ ಮಹಾಬ್ರಹ್ಮರಥೋತ್ಸವಹೊನ್ನಾವರ: ಗೇರುಸೊಪ್ಪ ಸೀಮೆಯಲ್ಲಿಯೇ ಪ್ರಪ್ರಥಮವಾಗಿ ರಥೋತ್ಸವ ಪ್ರಾರಂಭಗೊಂಡಿರುವ ಹೆಗ್ಗಳಿಕೆ ಇರುವ ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರಗಳಲ್ಲೊಂದಾದ ಬೆಳ್ಳಿಮಕ್ಕಿಯ ಪಂಚಮುಖಿ ಮುಖ್ಯಪ್ರಾಣ ದೇವರ ಮಹಾ ಬ್ರಹ್ಮರಥೋತ್ಸವವು ಡಿ. 20ರಂದು ವರ್ಷಂಪ್ರತಿಯಂತೆ ವಿಜೃಂಭಣೆಯಿಂದ ನಡೆಯಲಿದೆ.ಡಿ. 19ರಂದು ಧಾರ್ಮಿಕ ಕಾರ್ಯಕ್ರಮಗಳ ಪ್ರಾರಂಭ, ಪಲ್ಲಕ್ಕಿ ಉತ್ಸವ ಹಾಗೂ ಸಾರ್ವಜನಿಕ ಸತ್ಯಮಾರುತಿ ಕಥೆ, ಡಿ. 20ರಂದು ಮಹಾಕುಂಭಾಭಿಷೇಕ, ದೇವರ ಮಹಾಬ್ರಹ್ಮರಥೋತ್ಸವ ಅನ್ನಸಂತರ್ಪಣೆ, ಪಲ್ಲಕ್ಕಿ ಉತ್ಸವ, ಯಕ್ಷಗಾನ ಸೇವೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ.
ಡಿ. 21ರಂದು ಪೂಜೆ, ಮಹಾಪೂರ್ಣಾಹುತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮಂಗಲ ಸಮಾರಂಭ ಸಂಪನ್ನವಾಗಲಿದೆ. ಅದೇ ದಿನ ರಾತ್ರಿ 9 ಗಂಟೆಯಿಂದ ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಮೇಲಿನ ಮಣ್ಣಿಗೆ, ಇವರಿಂದ ಶ್ರೀಧರ ಸ್ವಾಮಿಗಳ ಜೀವನಾಧಾರಿತ ನಾಟಕ ವರದಯೋಗಿ ಶ್ರೀಧರ ಪ್ರದರ್ಶನ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.