ಸಾರಾಂಶ
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಆವರಣದಲ್ಲಿ ಶ್ರೀ ಮಹಾಗಣಪತಿದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಮೌಲ್ಯಸುಧಾ ಮಾಲಿಕೆ-೪೨ರಲ್ಲಿ ‘ದೀಪ ಹಚ್ಚುವ ಮೊದಲು’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನಡೆಯಿತು.
ಕಾರ್ಕಳ: ಇದ್ದ ಬದುಕನ್ನು ಬಿದ್ದು ಹೋಗದಂತೆ, ಸಮಸ್ಯೆಯನ್ನುಒದ್ದು, ಎಲ್ಲವನ್ನೂಗೆದ್ದು ಬರಬೇಕು. ಅದೇಜೀವನ, ಅದೇ ಸಂಜೀವನ.ವ್ಯಕ್ತಿದೃಷ್ಟಿಕೋನದದಲ್ಲಿ ಬದಲಾವಣೆತಂದುಕೊಂಡು ಅವಮಾನವನ್ನು ಸವಾಲಾಗಿ ಸ್ವೀಕರಿಸಿ ಸಕರಾತ್ಮಕ ಯೋಚನೆಯ ಹಠ ನಮ್ಮದಾದಾಗ ಗೆಲುವು ಚಟವಾಗಲು ಸಾಧ್ಯ ಎಂದು ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಕೋಟ ನರೇಂದ್ರಕುಮಾರ್ ವಿದ್ಯಾರ್ಥಿಗಳಿಗೆಅರಿವು ಮೂಡಿಸಿದ್ದಾರೆ.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಆವರಣದಲ್ಲಿ ಶ್ರೀ ಮಹಾಗಣಪತಿದೇವಸ್ಥಾನ ಹಾಗೂಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-೪೨ರಲ್ಲಿ ‘ದೀಪ ಹಚ್ಚುವ ಮೊದಲು’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.ನಾವೆಷ್ಟೂ ಎಷ್ಟು ಬಾಗುತ್ತೇವೋ ಅಷ್ಟು ಜಾಣರಾಗುತ್ತೇವೆ. ಹಿರಿಯರನ್ನು, ಗುರುಗಳನ್ನು ಗೌರವಿಸುವ ಗುಣ ನಮ್ಮದಾಗಲಿ. ಉತ್ತಮ ಕೇಳುಗರಾದರೆ ಅತ್ಯುತ್ತಮ ಮಾತುಗಾರರಾಗುತ್ತೇವೆ. ನಾವು ಸಂಬಂಧಗಳನ್ನು ಬೆಸೆಯುವ ಸೂಜಿಗಳಾಗ ಬೇಕು ಎಂದರು.
ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಅನಿಲ್ ಕುಮಾರ್‌ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರ್, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲ ಸಾಹಿತ್ಯ ಉಪಸ್ಥಿತರಿದ್ದರು. ಪ್ರಥಮ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಧನ್ಯಾ ಜಿ. ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು;Resize=(128,128))
;Resize=(128,128))
;Resize=(128,128))