ಮಹಿಳೆಯರನ್ನು ಸಮಾಜದಲ್ಲಿ ನೋಡುವ ದೃಷ್ಟಿಕೋನ ಬದಲಾಗಲಿ

| Published : May 19 2024, 01:50 AM IST

ಸಾರಾಂಶ

ಭಾರತೀಯರು ಪುರಾತನ ಕಾಲದಿಂದಲೂ ಹೆಣ್ಣನ್ನು ದೇವಿ ಸ್ವರೂಪವಾಗಿ ಕಂಡಿದ್ದಾರೆ. ಹೆಣ್ಣು ಎಲ್ಲ ಕ್ಷೇತ್ರದಲ್ಲಿಯೂ ಸಮಾನಳಾಗಿ ಕಾರ್ಯ ನಿರ್ವಹಿಸುತ್ತಾಳೆ ಎಂದು ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ನಳಿನ ಎನ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಭಾರತೀಯರು ಪುರಾತನ ಕಾಲದಿಂದಲೂ ಹೆಣ್ಣನ್ನು ದೇವಿ ಸ್ವರೂಪವಾಗಿ ಕಂಡಿದ್ದಾರೆ. ಹೆಣ್ಣು ಎಲ್ಲ ಕ್ಷೇತ್ರದಲ್ಲಿಯೂ ಸಮಾನಳಾಗಿ ಕಾರ್ಯ ನಿರ್ವಹಿಸುತ್ತಾಳೆ ಎಂದು ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ನಳಿನ ಎನ್ ಹೇಳಿದರು.

ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಐ ಯು.ಕ್ಯೂ ಎ.ಸಿ ಹಾಗೂ ಮಹಿಳಾ ಸಬಲೀಕರಣದ ವತಿಯಿಂದ ಡಾ. ಎಚ್. ಎಮ್. ಗಂಗಾಧರಯ್ಯ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣಿಗೆ ಭೌತಿಕ ಸಬಲೀಕರಣ ಸರಿ, ತಪ್ಪುಗಳನ್ನು ಗುರುತಿಸುವಂಥ ಸಾಮರ್ಥ್ಯವಿದೆ. ಹೆಣ್ಣನ್ನು ಸಮಾಜದಲ್ಲಿ ನೋಡುವ ದೃಷ್ಟಿಕೋನ ಬದಲಾಗಬೇಕು. ಶಿಕ್ಷಣ ಪಡೆದಾಗ ಮಾತ್ರ ಹೆಣ್ಣು ಪ್ರಪಂಚದಲ್ಲಿ ಉನ್ನತ ಸ್ಥಾನಕ್ಕೆ ಬರಲು ಸಾಧ್ಯವಾಗುತ್ತದೆ. ಹೆಣ್ಣು ಎಂದು ಹಿಂಜರಿಯದೆ ಆತ್ಮವಿಶ್ವಾಸವನ್ನು ಮುಂದಿಟ್ಟು ಬಂದಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪುರುಷರಿಗೆ ಸರಿ ಸಮಾನವಾಗಿ ಸಮಾಜದಲ್ಲಿ ಯಶಸ್ವಿಯಾಗಿ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಗಳು ಪ್ರೊ.ರಮೇಶ್ ಮಣ್ಣೆ ಮಾತನಾಡಿ, ಎಷ್ಟೊ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಯುವ ಅವಕಾಶ ಸಿಗುವುದಿಲ್ಲ. ಸಿಕ್ಕಿರುವ ಅವಕಾಶವನ್ನು ಗಮನದಲ್ಲಿ ಇಟ್ಟುಕೊಂಡು ಗುರಿಯ ಕಡೆಗೆ ಗಮನಹರಿಸಬೇಕು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತ ಪಿ ಮಾತನಾಡಿ, ನಾವೆಲ್ಲರೂ ಶಿಕ್ಷಣ ಪಡಿಯಬೇಕೆಂದರೆ ತಂದೆ ತಾಯಿ ಕಾರಣರಾಗಿದ್ದಾರೆ. ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದುಕೊಂಡು ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿ ಕೆಲಸ ಮಾಡಿದರೆ ನಾವು ಪೋಷಕರಿಗೆ ಕೊಟ್ಟಂತ ಉಡುಗೊರೆಯ ಸಬಲೀಕರಣ ಎಂದು ಹೇಳಿದರು. ರೇಷ್ಮೆ ಕೃಷಿ ವಿಭಾಗದ ಮುಖ್ಯಸ್ಥ ಪ್ರೊ. ಜಿ .ಹನುಮಂತ ರಾಯಪ್ಪ, ಪ್ರಾಧ್ಯಾಪಕ ವಿನಯ್ ಕುಮಾರ್, ಐಕ್ಯೂಎಸಿ ಸಂಯೋಜಕ ಸೈಯದ್ ಬಾಬು, ಮಹಿಳಾ ಸಬಲೀಕರಣ ಘಟಕ ಸಂಚಾಲಕ ಎಚ್.ಬಿ.ಆಶಾ ಎಚ್.ಎಲ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.