ಪ್ರೇರಣೆ ಕೊಟ್ಟು ವ್ಯಸನಿಗಳ ಮನಃಪರಿವರ್ತನೆ: ಡಾ.ಹೆಗ್ಗಡೆ

| Published : Apr 18 2025, 12:43 AM IST

ಸಾರಾಂಶ

ವ್ಯಸನಕ್ಕೊಳಗಾದವರಿಗೆ ಮದ್ಯವರ್ಜನ ಶಿಬಿರದ ಮೂಲಕ ಪ್ರೇರಣೆಕೊಟ್ಟು ಮನಃಪರಿವರ್ತನೆ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಉಜಿರೆ ಲಾಯಿಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ ೨೪೫ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಅವರು ಆಶೀರ್ವದಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವ್ಯಸನಕ್ಕೊಳಗಾದವರಿಗೆ ಮದ್ಯವರ್ಜನ ಶಿಬಿರದ ಮೂಲಕ ಪ್ರೇರಣೆಕೊಟ್ಟು ಮನಃಪರಿವರ್ತನೆ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಉಜಿರೆ ಲಾಯಿಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ ೨೪೫ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಅವರು ಸೋಮವಾರ ಆಶೀರ್ವದಿಸಿದರು.

ಕೆಟ್ಟ ಅಭ್ಯಾಸಗಳು ಮನುಷ್ಯನನ್ನು ಸುಲಭವಾಗಿ ಅಂಟಿಕೊಳ್ಳುತ್ತವೆ. ಆದರೆ ಅದನ್ನು ಬಿಡಲು ಕಷ್ಟ ಪಡಬೇಕಾಗುತ್ತದೆ. ದುಶ್ಚಟಕ್ಕೆ ಬಲಿಯಾದವರು ತನ್ನಕುಟುಂಬಕ್ಕೆ ಪ್ರೀತಿ ತೋರಿಸುವ ಮತ್ತು ಹಣ ಖರ್ಚು ಮಾಡುವ ಬದಲು ತನ್ನ ಸ್ನೇಹಿತರಿಗೆ ಹೆಚ್ಚು ಪ್ರೀತಿ ಮಾಡುತ್ತಾರೆ ಮತ್ತು ಖರ್ಚುಮಾಡುತ್ತಾರೆ. ಕುಡಿತದಿಂದ ಆರೋಗ್ಯ ಹಾಳಾಗುವುದರೊಂದಿಗೆ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತದೆ. ದೃಢವಾದ ಸಂಕಲ್ಪದಿಂದ ಮತ್ತು ಮನಃಪರಿವರ್ತನೆಯಿಂದ ದುಶ್ಚಟ ದೂರ ಮಾಡಲು ಸಾಧ್ಯ ಎಂದರು.

ಜನ ಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್, ಹೆಗ್ಗಡೆ ಅವರ ಕಚೇರಿ ಪ್ರಬಂಧಕ ರಾಜೇಂದ್ರದಾಸ್, ವೇದಿಕೆಯ ಆಡಳಿತ ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿ ನಂದಕುಮಾರ್, ರಮೇಶ್, ದಿನೇಶ್ ಮರಾಠಿ, ನಾಗೇಂದ್ರ ಮತ್ತು ಆರೋಗ್ಯ ಸಹಾಯಕ ಪ್ರೆಸಿಲ್ಲಾ ಡಿ’ಸೋಜ, ನೇತ್ರಾವತಿ ಹಾಗೂ ಜಯಲಕ್ಷಿ, ಆಪ್ತಸಮಾಲೋಚಕ ಜಿ. ಆರ್. ಮಧು ಮತ್ತು ಜಾಗೃತಿ ಸೌಧದ ಪ್ರಬಂಧಕರಾದ ಕಿಶೋರ್ ಉಪಸ್ಥಿತರಿದ್ದರು.

ಮುಂದಿನ ವಿಶೇಷ ಶಿಬಿರವು ಏ.21 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.