ಸಾರಾಂಶ
ಪಟ್ಟಣದ ಮಿನಿವಿಧಾನಸೌಧಕ್ಕೆ ಮೇ ೧೪ ರಂದು ಮುತ್ತಿಗೆ ಹಾಕಿ ಬೀಗ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಮುಖಂಡ ಮಂಜುನಾಥ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಚನ್ನರಾಯಪಟ್ಟಣ
ಪಟ್ಟಣದ ಮಿನಿವಿಧಾನಸೌಧಕ್ಕೆ ಮೇ ೧೪ ರಂದು ಮುತ್ತಿಗೆ ಹಾಕಿ ಬೀಗ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಮುಖಂಡ ಮಂಜುನಾಥ್ ತಿಳಿಸಿದ್ದಾರೆ.ಇಲ್ಲಿನ ಮಿನಿವಿಧಾನ ಸೌಧದ ಬಳಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ವತಿಯಿಂದ ೧೦ನೇ ದಿನಕ್ಕೆ ತಹಸೀಲ್ದಾರ್ ಹಠಾವೋ ಚನ್ನರಾಯಪಟ್ಟಣ ಜನತೆ ಬಚಾವೋ ಆಂದೋಲನದ ಅಡಿಯಲ್ಲಿ ಆಹೋ ರಾತ್ರಿ ಧರಣಿ ಸತ್ಯಾಗ್ರಹ ಸಭೆಯಲ್ಲಿ ಮಾತನಾಡಿ, ತಹಸೀಲ್ದಾರ್ ಒಬ್ಬ ತಾಲೂಕು ಜವಾಬ್ದಾರಿ ಮನುಷ್ಯನಾಗಿದ್ದು ಅಂತವರೇ ಭ್ರಷ್ಟಾಚಾರ ನಡೆಸಿದರೆ ಇನ್ನು ಕೆಲ ಅಧಿಕಾರಿಗಳೇ ಏನು ಮಾಡುತ್ತಾರೆ ಎಂಬುದು ಜನರು ಅರಿತುಕೊಳ್ಳಬೇಕು.
ಸರ್ಕಾರವನ್ನು ಕೆಟ್ಟದಾಗಿ ಬೈದು ಸಾಕ್ಷಾದಾರಗಳಿದ್ದರೂ ಸಹ ಜಿಲ್ಲಾಡಳಿತ ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕೂತಿರುವುದು ನೋಡಿದರೆ ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಎದ್ದು ಕಾಣುತ್ತಿದೆ. ಆದ್ದರಿಂದ ಇಂತಹ ನೀಚ ಅಧಿಕಾರಿಗಳು ನಮ್ಮ ತಾಲೂಕಿನಲ್ಲಿ ಇರುವುದು ಬೇಡ ಎಂದು ತೀರ್ಮಾನಿಸಿ ಸಂಘಟನೆ ಮುಖಂಡರು ತೀರ್ಮಾನಿಸಿ ಮೇ14ರಂದು ಬೆಳಗ್ಗೆ ೧೧ ಗಂಟೆಗೆ ತಾಲೂಕು ಕಚೇರಿಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸುತ್ತೇವೆ. ಜನರ ವಿರೋಧಿ ಅಧಿಕಾರಿಗಳು ನಮಗೆ ಬೇಡ ಜನರ ಪರವಾಗಿ ಕೆಲಸ ಮಾಡುವವರು ಬೇಕು. ಆದರೆ ಸ್ಥಳೀಯ ಶಾಸಕರು ಹಾಗೂ ರಾಜಕಾರಣಿಗಳು ಅವರಿಗೆ ಬೆಂಬಲವಾಗಿ ನಿಂತು ಕೆಲಸ ಮಾಡುತಿದ್ದಾರೆ ಮುಂದಿನ ದಿನಗಳಲ್ಲಿ ಜನರು ಇವರುಗೆ ತಕ್ಕ ಪಾಠ ಕಲಿಸಿಯೇ ತೀರುತ್ತಾರೆ ಎಂದರು.ತಾಲೂಕು ರೈತ ಸಂಘದ ಅಧ್ಯಕ್ಷ ಸಿ. ಜಿ. ರವಿ ಮಾತನಾಡಿ, ಮೇ14ರಂದು ತಾಲೂಕು ಕಚೇರಿಗೆ ಬೀಗ ಹಾಕಲು ಒಕ್ಕೋರಲಿಂದ ತೀರ್ಮಾನಿಸಲಾಗಿದ್ದು ಮೂರು ದಿನಗಳ ಕಾಲಿ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಪ್ರವಾಸ ಮಾಡಿ ಜನರಿಗೆ ಜಾಗೃತಿ ಮೂಡಿಸಿ ಪ್ರತಿಭಟನೆಗೆ ಭಾಗವಹಿಸಿ ತಹಸಿಲ್ದಾರ್ ಹಠಾವೋ ಎಂಬ ಘೋಷವಾಖ್ಯದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.ಪ್ರತಿಭಟನೆಯಲ್ಲಿ ಮುಖಂಡರಾದ ಬರಗೂರು ಶಂಕರ್, ಗುಳಸಿಂದ ಮಹೇಶ್, ತೇಜಸ್‌ಗೌಡ, ಮಧು ಮತ್ತಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))