ಜೇವರ್ಗಿಯಲ್ಲಿ ಮಹಿಳೆಯರಿಂದ ರಾಮಜಪ ಪಠಣ

| Published : Jan 23 2024, 01:48 AM IST

ಜೇವರ್ಗಿಯಲ್ಲಿ ಮಹಿಳೆಯರಿಂದ ರಾಮಜಪ ಪಠಣ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಅಲಂಕಾರ, ಹಾಗೂ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಉತ್ತರಾದಿ ಮಠದ ಹಿರಿಯ ಯತಿಗಳಾದ ಶ್ರೀ ರಘೋತ್ತಮ ತೀರ್ಥರ ಆರಾಧನೆ ಭಕ್ತಾದಿಗಳ ಸಡಗರ ಸಂಭ್ರಮದ ಮಧ್ಯೆ ವಿಜೃಂಭಣೆಯಿಂದ ಜರುಗಿತು.

ಆರಾಧನೆ ನಿಮಿತ್ಯ ಸೋಮವಾರ ದೇವಸ್ಥಾನದಲ್ಲಿ ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಅಲಂಕಾರ, ಹಾಗೂ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆ ಪ್ರಯುಕ್ತ ಶ್ರೀರಾಮ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಳ್ಳೆಪ್ಪಾಚಾರ್ಯ ಜೋಶಿ, ಕಿಶೇನರಾವ್ ಕುಲಕರ್ಣಿ ಹೇಮನೂರ, ಲಕ್ಷ್ಮಣರಾವ್ ಆಲಬಾಳ, ಗುರುರಾಜ ಆಲಬಾಳ, ರಾಘವೇಂದ್ರ ಆಲಬಾಳ, ಸುದರ್ಶನ್ ಆಲಬಾಳ, ಪ್ರದೀಪ ಆಲಬಾಳ, ಲಕ್ಷ್ಮೀಕಾಂತ ಕುಲಕರ್ಣಿ ಹೋತಿನಮಡು, ವಿಜಯಕುಮಾರ ಕಲ್ಲೂರ, ಪವನ ಆಲಬಾಳ, ಪ್ರವೀಣ ಆಲಬಾಳ, ಗುರುರಾಜ ಮಳ್ಳಿ, ಶ್ರೀನಿವಾಸ ಮಳ್ಳಿ, ವೆಂಕಟೇಶ ಹರವಾಳ, ಅನಂತ ಹರವಾಳ, ವೆಂಕಟೇಶ ಪೆಶ್ವೆ, ಕಲ್ಯಾಣರಾವ್ ಕುಲಕರ್ಣಿ ಕಣಮೇಶ್ವರ, ಮನೋಜ ಕುಲಕರ್ಣಿ, ಸವಿತಾ ಕುಲಕರ್ಣಿ, ಜಯಲಕ್ಷ್ಮೀ ವಕೀಲ, ಜಮುನಾಬಾಯಿ ಕುಲಕರ್ಣಿ, ಸುಜಾತಾ ಆಲಬಾಳ, ಅನೀತಾ ಆಲಬಾಳ, ಅನೀತಾ ವಕೀಲ, ಬಕುಲಾಬಾಯಿ ಹರವಾಳ, ಕವಿತಾ ಕುಲಕರ್ಣಿ,ವಿಜಯಲಕ್ಷ್ಮೀ ಕುಲಕರ್ಣಿ, ಸವಿತಾ ಕುಲಕರ್ಣಿ, ಸೌಮ್ಯ ಕುಲಕರ್ಣಿ, ದಿವ್ಯಾ ಆಲಬಾಳ, ಆರತಿ ಜೋಶಿ, ಆರತಿ ವಕೀಲ, ಕರುಣಾ ಕುಲಕರ್ಣಿ, ಸ್ಮೀತಾ ಹರವಾಳ, ನಾಗವೇಣಿ ಹರವಾಳ ಸೇರಿದಂತೆ ಪಟ್ಟಣದ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.