ಸಾರಾಂಶ
ಮಹದೇಶ್ವರ ವನ್ಯಧಾಮದ ಡಿಸಿಎಫ್ ಚಕ್ರಪಾಣಿ ಅವರ ವಿರುದ್ಧ ವಿನಾಕಾರಣ ವೈಯುಕ್ತಿಕ ವಿಚಾರವನ್ನಿಟ್ಟುಕೊಂಡು ಮಾಜಿ ಶಾಸಕ ಆರ್.ನರೇಂದ್ರ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಕೊಳ್ಳೇಗಾಲ ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಮಧುವನಹಳ್ಳಿ ರಮೇಶ್ ಹೇಳಿದ್ದಾರೆ.
ಕೊಳ್ಳೇಗಾಲ: ಮಹದೇಶ್ವರ ವನ್ಯಧಾಮದ ಡಿಸಿಎಫ್ ಚಕ್ರಪಾಣಿ ಅವರ ವಿರುದ್ಧ ವಿನಾಕಾರಣ ವೈಯುಕ್ತಿಕ ವಿಚಾರವನ್ನಿಟ್ಟುಕೊಂಡು ಮಾಜಿ ಶಾಸಕ ಆರ್.ನರೇಂದ್ರ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಕೊಳ್ಳೇಗಾಲ ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಮಧುವನಹಳ್ಳಿ ರಮೇಶ್ ಹೇಳಿದ್ದಾರೆ.
ಚಕ್ರಪಾಣಿ ದಕ್ಷ ಅಧಿಕಾರಿಗಳು, ಮಾಜಿ ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ಎಂಬುದನ್ನೆ ನೆಪಮಾಡಿಕೊಂಡು ಅವರ ವಿರುದ್ದ ಆರೋಪ ಮಾಡಿದ್ದಾರೆ, 5ಹುಲಿಗಳ ಸಾವಿಗೆ ವಾಸ್ತವ ತನಿಖೆ ನಡೆಯಲಿ, ಡಿಸಿಎಫ್ ಅವರದ್ದು ತಪ್ಪಿದ್ದರೆ ಸರ್ಕಾರ, ಅರಣ್ಯ ಇಲಾಖೆ ಕ್ರಮಕೈಗೊಳ್ಳಲಿ, ಆದರೆ ಈ ಪ್ರಕರಣದಲ್ಲಿ ಚಕ್ರಪಾಣಿ ಅವರ ಆರೋಪಿ ಎಂಬ ರೀತಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ಮಾಜಿ ಶಾಸಕರ ನಡೆ ಸರಿಯಲ್ಲ, ದುರುದ್ದೇಶದಿಂದ ಆರೋಪ ಮಾಡುವುದನ್ನು ಮಾಜಿ ಶಾಸಕರು ನಿಲ್ಲಿಸಬೇಕು, ನರೇಂದ್ರ ಅವರು ಯಾರದ್ದೋ ಪ್ರಭಾವಕ್ಕೊಳಗಾಗಿ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಲಿ, 4 ಮರಿ ಹಾಗೂ ತಾಯಿ ಹುಲಿ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲಿ, ಇವರ ಹೇಳಿಕೆಯನ್ನು ತಾಲೂಕು ಭಗೀರಥ ಉಪ್ಪಾರ ಸಂಘ ಖಂಡಿಸುತ್ತದೆ ಎಂದರು.