ಜನವರಿ 15ರಿಂದ 20ರವರಿಗೆ 5 ದಿನಗಳ ಕಾಲ ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಸುತ್ತೂರು ಮಠದ ಜಾತ್ರೋತ್ಸವ ನಡೆಯಲಿದೆ. ಇದರ ಅಂಗವಾಗಿ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ಸಂಚಾರಿ ರಥಯಾತ್ರೆ ಆಗಮಿಸಲಿದ್ದು, ಶರಣ ಸಾಹಿತ್ಯ ಪರಿಷತ್ತು ಹಾಗೂ ವೀರಶೈವ ಲಿಂಗಾಯತ ಮಹಾ ವತಿಯಿಂದ ಹಾಗೂ ಸಾರ್ವಜನಿಕರಿಂದ ಸ್ವಾಗತಿಸಲಾಗುತ್ತದೆ. ನಂತರ ಮೆರವಣಿಗೆಯಲ್ಲಿ ಸಾರ್ವಜನಿಕರು, ಎಲ್ಲಾ ಸಮಾಜ ಬಾಂಧವರು ಭಾಗವಹಿಸಲು ಹಾದನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿ, ಸಂಚಾಲಕರಾದ ವಿರೂಪಾಕ್ಷ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆರ್. ಕೆ. ಶ್ರೀನಿವಾಸ್ ಮುಂತಾದವರು ಕೋರಿದ್ದಾರೆ.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಡಿಸಂಬರ್ 9ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ರಾಮನಾಥಪುರ- ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀಕ್ಷೇತ್ರ ಸುತ್ತೂರು ಮಠದ ದಿಬ್ಬಣವು ಅಗಮಿಸಲಿದ್ದು, ಸ್ಥಳೀಯ ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳು ಮತ್ತು ಎಲ್ಲಾ ಸಮಾಜ ಭಾಂದವರು ಭಾಗವಹಿಸಲಿದ್ದಾರೆ ಎಂದು ಅರಕಲಗೂಡು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಕೋಟವಾಳು ವಿರೂಪಾಕ್ಷ ತಿಳಿಸಿದರು. ರಾಮನಾಥಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಶ್ರೀಕ್ಷೇತ್ರ ಸುತ್ತೂರಿನಲ್ಲಿ 2025ರ ಜನವರಿ 15ರಿಂದ 20ರವರಿಗೆ 5 ದಿನಗಳ ಕಾಲ ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಸುತ್ತೂರು ಮಠದ ಜಾತ್ರೋತ್ಸವ ನಡೆಯಲಿದೆ. ಇದರ ಅಂಗವಾಗಿ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ಸಂಚಾರಿ ರಥಯಾತ್ರೆ ಆಗಮಿಸಲಿದ್ದು, ಶರಣ ಸಾಹಿತ್ಯ ಪರಿಷತ್ತು ಹಾಗೂ ವೀರಶೈವ ಲಿಂಗಾಯತ ಮಹಾ ವತಿಯಿಂದ ಹಾಗೂ ಸಾರ್ವಜನಿಕರಿಂದ ಸ್ವಾಗತಿಸಲಾಗುತ್ತದೆ. ನಂತರ ಮೆರವಣಿಗೆಯಲ್ಲಿ ಸಾರ್ವಜನಿಕರು, ಎಲ್ಲಾ ಸಮಾಜ ಬಾಂಧವರು ಭಾಗವಹಿಸಲು ಹಾದನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿ, ಸಂಚಾಲಕರಾದ ವಿರೂಪಾಕ್ಷ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆರ್. ಕೆ. ಶ್ರೀನಿವಾಸ್ ಮುಂತಾದವರು ಕೋರಿದ್ದಾರೆ.