ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶೃಂಗೇರಿದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಹಾಗೂ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವ್ರತ ಜು. 29 ರಿಂದ ಸೆ. 26 ರವರೆಗೆ ನಡೆಯಲಿದೆ.
ಶ್ರೀಮಠದ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ತಮ್ಮ 52 ನೇ ಚಾತು ರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ. ವ್ರತದ ಅಂಗವಾಗಿ ಶ್ರೀ ಮಠದಲ್ಲಿ ಸೆಪ್ಟೆಂಬರ್ 26 ರವರೆಗೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನಡೆಯಲಿದೆ. ಸೆ.29 ರಂದು ಜಗದ್ಗುರುಗಳಿಂದ ವ್ಯಾಸಪೂಜೆ,ಜು.30 ರಂದು ಉತ್ತರ ಪೂಜೆ ನೆರವೇರಲಿದೆ.ಆಗಸ್ಟ್ 9 ರಂದು ಏಕಾದಶಿ ಹಾಗೂ ಶ್ರಾವಣ ಸೋಮವಾರದ ವಿಶೇಷ ಪೂಜೆ, ಆ.21 ರಂದು ವರಮಹಾಲಕ್ಷ್ಮಿ ವ್ರತ, ಆ 24 ರಂದು ಶ್ರಾವಣ ಸೋಮವಾರ ಪೂಜೆ, ಸೆ.4 ರಂದು ಶ್ರೀ ಕೃಷ್ಮಜನ್ಮಾಷ್ಟಮಿ, ಸೆ 14 ರಂದು ಶ್ರೀ ವರಸಿದ್ದಿ ವಿನಾಯಕ ವ್ರತ ಹಾಗೂ ಶ್ರೀ ಮಹಾಗಣಪತಿ ವ್ಯಾಖ್ಯಾರ್ಥ ಸಭೆ .ಸೆ 20 ಕ್ಕೆ ಶ್ರೀ ಕೇದಾರನಾಥ ಪೂಜೆ, ಸೆ 22 ರಂದು ವಾಮನ ಜಯಂತಿ, ಸೆ.25 ಕ್ಕೆ ಅನಂತಪದ್ಮನಾಭ ವ್ರತ ನಡೆಯಲಿದೆ. ಸೆ 26 ಕ್ಕೆ ಶ್ರೀ ಉಮಾಮಹೇಶ್ವರಿ ವ್ರತ, ತಾತುರ್ಮಾಸ್ಯ ವ್ರತ ಕೊನೆಗೊಳ್ಳಲಿದೆ. ಸೆ 27 ಕ್ಕೆ ಶ್ರೀ ಮಹಾಗಣಪತಿ ವ್ಯಾಖ್ಯಾರ್ಥ ಸಭೆ ಸಭೆ ಸಂಪನ್ನಗೊಳ್ಳಲಿದೆ.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರ 34 ನೇ ವರ್ಧಂತಿ ಮಹೋತ್ಸವ: ಆ.17 ರಂದು ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿಗಳ 34 ನೇ ವರ್ಧಂತಿ ಮಹೋತ್ಸವ ನಡೆಯಲಿದೆ.ಇದರ ಅಂಗವಾಗಿ ಆ 13 ರಂದು ಮಹಾರುದ್ರ ಯಾಗ ಸಂಕಲ್ಪ,ಆ 16 ರಂದು ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಲಿದೆ. ಆ 17 ರಂದು ನರಸಿಂಹವನದ ಗುರುಭವನದಲ್ಲಿ ಜಗದ್ಗುರುಗಳು ಆಹ್ನಿಕ ದರ್ಶನ ನೀಡಲಿದ್ದಾರೆ. ಬೆಳಿಗ್ಗೆ 10 ಕ್ಕೆ ಜಗದ್ಗುರುಗಳು ಅನುಗ್ರಹ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ ಮಹಾರುದ್ರಯಾಗದ ಪೂರ್ಣಾಹುತಿ ನೆರವೇರಲಿದೆ. ಶ್ರಾವಣ ಸೋಮವಾರ ಪೂಜೆ,ರಾತ್ರಿ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ,
19 ಶ್ರೀ ಚಿತ್ರ 1-
ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿ19 ಶ್ರೀ ಚಿತ್ರ 2-
ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿ