ಮೂವರು ಕಾರ್ಮಿಕರು ಅಸ್ವಸ್ಥ । ಅಗ್ನಿಶಾಮಕ ದಳದಿಂದ ಮೂವರ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಟೈಟಾನ್ ಕಂಪನಿ ಐ ಕೇರ್ ವಿಬಾಗದಲ್ಲಿ ರಾಸಾಯನಿಕ ಸೋರಿಕೆಯಿಂದಾಗಿ ಮೂವರು ಕಾರ್ಮಿಕರು ಉಸಿರುಗಟ್ಟಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಗ್ನಿಶಾಮಕ ದಳದ ಸಮಯ ಪ್ರಜ್ಞೆಯಿಂದ ಮೂರು ಜನ ಕಾರ್ಮಿಕರನ್ನು ರಕ್ಷಿಸಿ ಕೂಡಲೇ ಜೈನ್ ಮಿಷನ್ ಆಸ್ಪತ್ರೆಗೆ ಸಾಗಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಸಂತ್ರಸ್ಥರ ವಿವರ ತಿಳಿಯಬೇಕಾಗಿದೆ.ಘಟನೆ ಸಂಭವಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಮೂರು ಜನ ಕಾರ್ಮಿಕರನ್ನು ಕಾರ್ಖಾನೆಯಿಂದ ಹೊರತಂದು ಕೂಡಲೆ ಆಸ್ಪತ್ರೆಗೆ ಸಾಗಿಸಲು ಕಾರಣರಾದರು. ಪ್ರಾಣ ಭೀತಿಯಿಂದ ಒದ್ದಾಡುತಿದ್ದ ಮೂವರು ಕಾರ್ಮಿಕರಿಗೆ ಜೈನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ವಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸಾಗಿಸಲಾಗಿದ್ದು ಈಗ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.ಘಟನೆ ನಡೆದ ಮಾಹಿತಿ ತಿಳಿದ ಕೈಗಾರಿಕಾ ವಲಯ ಉಸ್ತುವಾರಿ ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದು ಬಂದಿದ್ದು ಆಸ್ಪತ್ರೆಗೆ ದಾಖಲಾಗಿರುವ ಮೂವರು ಕಾರ್ಮಿಕರ ಹೆಸರು ಊರು, ಹುದ್ದೆಗಳ ಬಗ್ಗೆ ತಿಳಿದುಬಂದಿಲ್ಲ. ಹಾಗೆಯೆ ಈ ಘಟನೆ ಸಂಭವಿಸಲು ಅಡಳಿತ ಮಂಡಳಿಯ ನಿರ್ಲಕ್ಷವೋ ಅಥವಾ ಆಕಸ್ಮಿಕ ಘಟನೆಯೋ ತನಿಖೆಯಿಂದ ಮಾತ್ರ ಹೊರಬರಬೇಕಾಗಿದೆ.
