ನಾಪೋಕ್ಲು ಮಹಿಳಾ ಒಕ್ಕೂಟ ವತಿಯಿಂದ ವಿಶ್ವ ಆರೋಗ್ಯ ದಿನವನ್ನು ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲುನಾಪೋಕ್ಲು ಮಹಿಳಾ ಒಕ್ಕೂಟ ವತಿಯಿಂದ ವಿಶ್ವ ಆರೋಗ್ಯ ದಿನವನ್ನು ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಭಾರ ಶುಶ್ರೂಷಕ ಅಧೀಕ್ಷಕ ತಳೂರು ದೇವಕಿ ಪೂಣಚ್ಚ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ 1948 ಏ.7 ರಂದು ಜಾಗತಿಕ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಸರ್ವರಿಗೂ ಸಮಾನ ಆರೋಗ್ಯ ರಕ್ಷಣೆ ಸಿಗಬೇಕೆಂಬ ಧ್ಯೇಯ ವಾಕ್ಯದೊಂದಿಗೆ ಆರೋಗ್ಯ ದಿನ ಆರಂಭಿಸಲಾಯಿತು ಎಂದರು.ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಪ್ರಾಸ್ತಾನಿಕವಾಗಿ ಮಾತನಾಡಿ, ಆರೋಗ್ಯವಿದ್ದರೆ ಸರ್ವ ಭಾಗ್ಯಗಳು ಸಿದ್ಧಿಸುತ್ತವೆ ಎಂದರು.ಪೌಷ್ಟಿಕಾಂಶಯುಕ್ತ ಆಹಾರ ಪ್ರದರ್ಶನವನ್ನು ಚೇರಂಬಾಣೆ ಸಮೃದ್ಧಿ ಆಸ್ಪತ್ರೆಯ ಸ್ಥಾಪಕ ಹೇಮಲತಾ ಉದ್ಘಾಟಿಸಿದರು.ಬೆಟ್ಟಗೇರಿ ಪ್ರಾಥಮಿಕ ಆರೋಗ್ಯ ಅಧಿಕಾರಿ ಕೃತಿಕಾ ರಾಣಿ ವಿಶ್ವ ಆರೋಗ್ಯ ದಿನದ ಬಗ್ಗೆ, ಆಶಾ ಕಾರ್ಯಕರ್ತೆ ಕೇಚಪ್ಪನ ಗೀತಾ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ಮತ್ತು ಆರೈಕೆಯ ಬಗ್ಗೆ ಮಾತನಾಡಿದರು.ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ಪಾರೆ ಮಜಲು ವಿಮಲಾ ತಮ್ಮಯ್ಯ, ಆಶಾ ಕಾರ್ಯಕರ್ತೆಯರಾದ ಜಯ
ಚಿತ್ರ, ಉಷಾ, ಒಕ್ಕೂಟದ ಉಪಾಧ್ಯಕ್ಷ ಹೊಸೊಕ್ಲು ಲತಾ ಮೊಣ್ಣಪ್ಪ, ಕೂರನ ಸುಶೀಲಾ ಅಪ್ಪಾಜಿ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ ಮತ್ತಿತರರಿದ್ದರು.ಅತಿಥಿಗಳಿಗೆ ಪೌಷ್ಟಿಕಾಂಶಯುಕ್ತ ಮೊಳಕೆ ಕಾಳುಗಳನ್ನು ಉಡುಗೊರೆಯಾಗಿ ನೀಡಲಾಯಿತು. ಕಾಳೇರಮ್ಮನ ರಶಿ ಅಶೋಕ್ ಪ್ರಾರ್ಥಿಸಿದರು. ಬೈಮನ ಜ್ಯೋತಿ ತಿಮ್ಮಯ್ಯ ಸ್ವಾಗತಿಸಿದರು. ಕೂಡಕಂಡಿ ಸೋನಿ ಸುದೀಪ್ ನಿರೂಪಿಸಿದರು. ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ವಂದಿಸಿದರು.