ಚೆಸ್ ಮುಖ್ಯವಾಹಿನಿಯ ಕ್ರೀಡೆಯಾಗಿ ಬೆಳೆಯುತ್ತಿದೆ

| Published : Dec 16 2024, 12:47 AM IST

ಸಾರಾಂಶ

ಭಾರತೀಯ ಚೆಸ್ ಆಟಗಾರ ಗುಕೇಶ್ ಅತಿ ಕಿರಿಯ ವಯಸ್ಸಿಗೆ ವರ್ಲ್ಡ್ ಚೆಸ್ ಗ್ರಾಂಡ್ ಮಾಸ್ಟರ್ ಆಗಿ ಸಾಧನೆ ಮಾಡುವ ಮೂಲಕ ಮುಖ್ಯವಾಹಿನಿಯ ಕ್ರೀಡೆಯ ಸಾಲಿಗೆ ಚೆಸ್ ಗುರುತಿಸಲ್ಪಡುತ್ತಿದೆ ಎಂದು ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್. ಮಧುಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಭಾರತೀಯ ಚೆಸ್ ಆಟಗಾರ ಗುಕೇಶ್ ಅತಿ ಕಿರಿಯ ವಯಸ್ಸಿಗೆ ವರ್ಲ್ಡ್ ಚೆಸ್ ಗ್ರಾಂಡ್ ಮಾಸ್ಟರ್ ಆಗಿ ಸಾಧನೆ ಮಾಡುವ ಮೂಲಕ ಮುಖ್ಯವಾಹಿನಿಯ ಕ್ರೀಡೆಯ ಸಾಲಿಗೆ ಚೆಸ್ ಗುರುತಿಸಲ್ಪಡುತ್ತಿದೆ ಎಂದು ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್. ಮಧುಕರ್ ತಿಳಿಸಿದರು. ಅವರು ರೋಟರಿ ತುಮಕೂರು ಕ್ಲಬ್ ವತಿಯಿಂದ ಏರ್ಪಡಿಸಿದ್ದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ವಿಜೇತ ಗುಕೇಶ್ ಸಾಧನೆಯ ಸಂಭ್ರಮೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ರಾಜ್ಯದ ಚೆಸ್ ಸಂಸ್ಥೆ ಪ್ರತಿನಿಧಿಯಾಗಿ ಸಿಂಗಾಪುರಕ್ಕೆ ತೆರಳಿ ಭಾರತೀಯ ಪ್ರತಿಭೆ ಗುಕೇಶ್ ಸಾಧನೆಯನ್ನು ಕಣ್ಣಾರೆ ಕಂಡೆ. ಗುಕೇಶ್ ಅವರ ಈ ಸಾಧನೆ ಬರಿ ದೇಶಕ್ಕೆ ಕೀರ್ತಿಯನ್ನಷ್ಟೇ ಅಲ್ಲ. ಯುವ ಚೆಸ್ ಆಟದ ವಿಸ್ತರಣೆಗೆ ಪ್ರೇರಣೆಯಾಗಿದೆ. ಗುಕೇಶ್ ಅವರನ್ನು ಪ್ರೋತ್ಸಾಹಿಸಲು ಪಂದ್ಯಾವಳಿ ಆರಂಭಕ್ಕೂ ಮುನ್ನ ಹಾಗೂ ಗೆದ್ದ ಬಳಿಕವೂ ಎರಡು ಕಾರ್ಯಕ್ರಮ ಮಾಡಿದ ರೋಟರಿ ತುಮಕೂರು ಸಂಸ್ಥೆಯ ರಾಜೇಶ್ವರಿ ರುದ್ರಪ್ಪ ಹಾಗೂ ಪದಾಧಿಕಾರಿಗಳ ಪ್ರೇರಣಾ ಕಾರ್ಯವನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ 7 ಸಾವಿರ ನೋಂದಾಯಿತ ಚೆಸ್ ಆಟಗಾರರಿದ್ದು, ಚೆಸ್ ಕ್ರೀಡೆ ಬೆಳೆಸುವಲ್ಲಿ ಪೋಷಕರ ಆಸಕ್ತಿ, ಶ್ರಮ ಗಣನೀಯವಾದದ್ದು. ಗುಕೇಶ್ ಅವರ ಪೋಷಕರಂತೆ ಇತರ ಪೋಷಕರು ಚೆಸ್‌ಆಗಲೀ ಮತ್ತೊಂದು ಕ್ರೀಡೆಯಾಗಲಿ ಆಸಕ್ತಿ ಬೆಳೆಸಿದರೆ ಮಕ್ಕಳು ಅಪ್ರತಿಮ ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು. ರೋಟರಿ ತುಮಕೂರು ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಸಾಧನೆ ಇಡೀ ದೇಶಕ್ಕೆ ಮಾತ್ರವಲ್ಲ. ವಿಶ್ವಕ್ಕೆ ಮಾದರಿಯಾಗಿದೆ. ವಿಶ್ವನಾಥನ್ ಆನಂದ್ ಅವರ ಬಳಿಕ ಗುಕೇಶ್ ಕೇವಲ 18ನೇ ವಯಸ್ಸಿಗೆ ಚೀನಾದ ವರ್ಲ್ಡ್ ಗ್ರ್ಯಾಂಡ್ ಮಾಸ್ಟರ್ ಅನ್ನು ಮಣಿಸಿ ಅದ್ವಿತೀಯ ಸಾಧನೆ ಮಾಡಿದ್ದಾರೆ ಎಂದರು. ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ನ್ಯೂ ತುಮಕೂರು ಚೆಸ್ ಅಸೋಸಿಯೇಷನ್ ಅಧ್ಯಕ್ಷ ಕಿರಣ್ ಮೋರಸ್ ಹಾಗೂ ಇಂಟರ್‌ನ್ಯಾಷನಲ್ ಆರ್ಬಿಟೇಟರ್ ಎಂ.ಜೆ.ಅನೀಲ್, ಮಾತನಾಡಿ ಚೆಸ್ ಕ್ರೀಡೆಯ ಮಹತ್ವವನ್ನು ವಿವರಿಸಿದರು.ಐಎಫ್‌ಡಬ್ಲೂö್ಯಜೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಿ.ಎಂ.ಸತೀಶ್, ಕ್ಲಬ್‌ನ ಜಯರಾಮಶೆಟ್ಟರು, ಅಭಿಲಾಷ್ ಸೇರಿದಂತೆ ಹಲವರು ಹಾಜರಿದ್ದರು.

Photo....: 0000000000000000000000000000