ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿಶೇಷಚೇತನರಿಗೆ ಸರ್ಕಾರ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದು ಮೈಸೂರು ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಎಸ್. ಉಮೇಶ್ ಆಗ್ರಹಿಸಿದರು.ಅಭಿರುಚಿ ಬಳಗ, ಎನ್.ವ್ಹಿ. ರಮೇಶ್ ಕಲಾ ಬಳಗ, ಆಸಕ್ತಿ ಪ್ರಕಾಶನ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ವಿಭಾಗವು ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಚೇತನರಾದ ಆರೋಗ್ಯ ಇಲಾಖೆಯ ಮೂರ್ತಿ ಕಳಲೆ ಹಾಗೂ ನವಿಲೂರು ಪಂಚಾಯ್ತಿ ವಿಆರ್ಡಬ್ಲ್ಯೂ ಕೆ.ಎಂ. ಮಲ್ಲೇಶ್ ಕೆರೆಹುಂಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿಶೇಷಚೇತನರು ತುಂಬಾ ಕಷ್ಟದಲ್ಲಿ ಜೀವನಸಾಗಿಸುತ್ತಾರೆ. ಕೆಲವರು ಅಂಗವಿಕಲತೆಯ ಇದ್ದರೂ ಸ್ವಾವಲಂಬಿಗಳಾಗಿರಲು ಬಯಸಿ ಕೆಲಸ ಮಾಡುತ್ತಾರೆ. ಅಂಥವರ ನೆರವಿಗೆ ಸಮಾಜ ನಿಲ್ಲಬೇಕು ಎಂದರು.ಮುಂದಿನ ವರ್ಷದಿಂದ ಹತ್ತು ಮಂದಿ ವಿಶೇಷಚೇತನ ಸಾಧಕರನ್ನು ಗುರುತಿಸಿ,ಪ್ರಶಸ್ತಿ ನೀಡಲಾಗುವುದು. ಇದರ ನೇತೃತ್ವವನ್ನು ಇವತ್ತಿನ ಪ್ರಶಸ್ತಿ ಆಯೋಜಕರಾದ ಡಿ. ಪುಟ್ಟಸ್ವಾಮಿ ಅವರು ವಹಿಸಿಕೊಳ್ಳಬೇಕು ಎಂದರು.
ಹಿರಿಯ ಪತ್ರರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವಿಶೇಷಚೇತನರಿಗೆ ಅನುಕಂಪದ ಬದಲು ಅವಕಾಶ ನೀಡಬೇಕು ಎಂದರು.ಕೆಎಸ್ಆರ್ಟಿಸಿಯ ನಿವೃತ್ತ ನೌಕರ ಡಿ. ಪುಟ್ಟಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾನೇ ಸ್ವತಃ ವಿಶೇಷಚೇತನ. ನಾನು ನೌಕರಿಯಲ್ಲಿದ್ದು, ಸ್ವಯಂ ನಿವೃತ್ತಿ ಪಡೆದೆ. ನನ್ನಗಿಂತ ಅನುಕೂಲ ಇಲ್ಲದ ವಿಶೇಷಚೇತರನ್ನು ಪ್ರತಿವರ್ಷ ಗುರುತಿಸಿ, ವಿಶ್ವವಿಶೇಷಚೇತನ ದಿನದಂದು ಮನೆ ಬಾಗಿಲಿಗೆ ಹೋಗಿ ಸನ್ಮಾನಿಸಿಕೊಂಡು ಬರುತ್ತಿದ್ದೇನೆ ಎಂದರು.
ನಿವೃತ್ತ ತಹಸೀಲ್ದಾರ್ ಸಾಹಿತಿ ಡಾ.ವಿ. ರಂಗನಾಥ್, ನಿವೃತ್ತ ಡಿಎಚ್ಒ, ಸಾಹಿತಿ ಡಾ.ಎಚ್.ಎಸ್. ರುದ್ರೇಶ್,ಅಭಿರುಚಿ ಬಳಗದ ಸಂಸ್ಥಾಪಕ ಎನ್.ವಿ. ರಮೇಶ್, ಸುಮಾ ರಮೇಶ್, ಜಿಲ್ಲಾ ಕಸಾಪ ಕಾರ್ಯದರ್ಶಿ ಮ.ನ. ಲತಾ ಮೋಹನ್, ಶಮಾ, ರಂಗನಾಥ್ ಮೈಸೂರು, ವಿಜಯಕುಮಾರ್, ಪರಮೇಶ್ ಉತ್ತನಹಳ್ಳಿ, ಶಿವಣ್ಣ ಮೊದಲಾದವರು ಇದ್ದರು. ಪ್ರಿಯಾ ನಿರೂಪಿಸಿದರು. ಭಾನುಮತಿ ತಂಡದವರು ಪ್ರಾರ್ಥಿಸಿದರು.
ಸಮಗ್ರ ಪ್ರವಾಸ ಸಾಹಿತ್ಯ ಕೃತಿ ಬಿಡುಗಡೆ, ವಿಚಾರ ಸಂಕಿರಣ:ಇದಕ್ಕೂ ಮೊದಲು ಎನ್.ವ್ಹಿ. ರಮೇಶ್ ಅವರ ಸಮಗ್ರ ಪ್ರವಾಸ ಸಾಹಿತ್ಯ ಪುಸ್ತಕವನ್ನು ಆಧ್ಯಾತ್ಮಿಕ ಚಿಂತಕಿ ಸುಶೀಲಾ ಶ್ಯಾಮಸುಂದರ್ ಬಿಡುಗಡೆ ಮಾಡಿದರು. ಸಾಹಿತಿ ಗುರುದೇವಿ ಹುಲೆಪ್ಪನವರ ಮಠ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಮ.ನ. ಲತಾ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಉಷಾ ನರಸಿಂಹನ್, ಪದ್ಮಾ ಆನಂದ್ ಕೃತಿ ಪರಿಚಯಿಸಿದರು.
ನಂತರ ನಾನೇಕೆ ಬರೆಯುತ್ತೇನೆ ಹಾಗೂ ನಾನೇಕೆ ಬರೆಯುವುದಿಲ್ಲ ವಿಷಯ ಕುರಿತು ವಿಚಾರ ಸಂಕಿರಣ ನಡೆಯಿತು. ನಿವೃತ್ತ ತಹಸೀಲ್ದಾರ್ ಡಾ.ವಿ. ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಸುನೀತಾ ಬ.ಸೋಲಾಪುರೇ, ಗುರುದೇವಿ ಹುಲೆಪ್ಪನವರಮಠ, ಕೃಷ್ಣಮೂರ್ತಿ ಕುಲಕರ್ಣಿ, ಎಚ್.ಎಸ್. ರುದ್ರೇಶ್, ಹೀರೇಮಗಳೂರು ಪುಟ್ಟಸ್ವಾಮಿ, ರೂಪಾರಾಣಿ ಪಟಗಾರ್, ಕಮಲಾ ರಾಜೇಶ್, ರೇಖಾ ವಿ. ಕಂಪ್ಲಿ, ಚಂದ್ರಶೇಖರ ಸಿರಿಗಂಧ, ಪ್ರತಿಮಾ, ರಾಜೇಂದ್ರ ಪ್ರಸಾದ್, ಉಷಾ ನರಸಿಂಹನ್, ಕೆ. ಲಕ್ಷ್ಮೀ, ಸುಮತಿ ಸುಬ್ರಹ್ಮಣ್ಯ, ಶೋಭಾ ನಾಗಭೂಷಣ, ಸುಜಾತಾ ರವೀಶ್, ಬಿ.ಕೆ. ಮೀನಾಕ್ಷಿ, ವಿ. ನಾರಾಯಣರಾವ್, ಪರಮೇಶ್ ಉತ್ತನಹಳ್ಳಿ, ಪದ್ಮಾ ಆನಂದ್, ಇಂದಿರಾ ಪಾಟೀಲ್, ಕೆರೋಡಿ ಲೋಲಾಕ್ಷಿ, ಆರ್. ಮೀನಾಕ್ಷಿ, ಡಿ. ಪುಟ್ಟಸ್ವಾಮಿ, ಸುಶೀಲಾ ಶ್ಯಾಮಸುಂದರ್, ಶಮಾ ಅಹಮ್ಮದ್ ಭಾಗವಹಿಸಿದ್ದರು.