ಛತ್ರಪತಿ ಶಿವಾಜಿ ಮಹಾರಾಜರು ಯುವಶಕ್ತಿಗೆ ಆದರ್ಶ: ಶಿವಕುಮಾರ

| Published : Feb 20 2024, 01:51 AM IST

ಸಾರಾಂಶ

ಶಹಾಪುರ ನಗರದ ಬಸ್ ನಿಲ್ದಾಣದ ಹಿಂದುಗಡೆ ಇರುವ ಆಶ್ರಯ ಕಾಲೋನಿಯಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಶಿವಾಜಿ ಎಂಬುದು ಕೇವಲ ಹೆಸರಲ್ಲ, ಅದು ಭಾರತದ ಯುವಶಕ್ತಿಗೆ ಆದರ್ಶ. ತಾಯಿ ಜೀಜಾಬಾಯಿ ಅವರಿಂದ ಅಂತಃಕರಣದ ಸಂಸ್ಕಾರ ಕಲಿತಿದ್ದ ಶಿವಾಜಿಯವರು ತಮ್ಮ ಆಡಳಿತದ ಅವಧಿಯಲ್ಲಿ ಎಂದೂ ದಾರಿ ತಪ್ಪಲಿಲ್ಲ ಎಂದು ಶ್ರೀರಾಮ ಸೇನೆಯ ತಾಲೂಕಾಧ್ಯಕ್ಷ ಶಿವಕುಮಾರ ಶಿರವಾಳ ಹೇಳಿದರು.

ನಗರದ ಬಸ್ ನಿಲ್ದಾಣದ ಹಿಂದುಗಡೆ ಇರುವ ಆಶ್ರಯ ಕಾಲೋನಿಯಲ್ಲಿ ನಡೆದ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಭೂಸುಧಾರಣೆ ಜಾರಿಗೆ ತಂದ ಮೊದಲಿಗ ಶಿವಾಜಿ. ಮೊಘಲ್‌ ಮತ್ತು ಆದಿಲ್‌ ಶಾಹಿ ಕಾಲದ ಜಹಾಗೀರದಾರ್ ವ್ಯವಸ್ಥೆಯನ್ನು ಶಿವಾಜಿ ಕೊನೆಗೊಳಿಸಿದ. ದಂಡಯಾತ್ರೆಗೆ ಹೊರಟಾಗಲೂ ಸೇನೆಗೆ ಬೇಕಾದ ದವಸ ಧಾನ್ಯಗಳನ್ನು ಯೋಗ್ಯ ಬೆಲೆ ಕೊಟ್ಟೇ ರೈತರಿಂದ ಖರೀದಿಸಬೇಕೆಂದು ನಿಯಮ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಹಣಮಂತ, ಗೌಡಪ್ಪ, ಬೆನಕಪ್ಪ, ಅರ್ಜುನ, ಸುರೇಶ, ಯಮನೂರಪ್ಪ, ಸಾಬಣ್ಣ, ನಿಂಗಣ್ಣ, ಬಜ್ಜಪ್ಪ, ಮಂಜಣ್ಣ ಸೇರಿ ಅನೇಕ ಯುವಕರಿದ್ದರು.