ಧರ್ಮನಿರಪೇಕ್ಷ, ಜಾತ್ಯತೀತರಾಗಿದ್ದ ಛತ್ರಪತಿ ಶಿವಾಜಿ: ಈಶ್ವರ ಖಂಡ್ರೆ

| Published : Feb 20 2025, 12:46 AM IST

ಧರ್ಮನಿರಪೇಕ್ಷ, ಜಾತ್ಯತೀತರಾಗಿದ್ದ ಛತ್ರಪತಿ ಶಿವಾಜಿ: ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಮಾಜಿ ಸಚಿವರಾದ ಬಂಡೇಪ್ಪ ಖಾಶೆಂಪೂರ, ಈಶ್ವರಸಿಂಗ ಠಾಕೂರ, ಸಮಾಜದ ಗಣ್ಯರಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌ನಮ್ಮ ದೇಶದಲ್ಲಿ ಶಿವಾಜಿ ಮಹಾರಾಜರಂತಹ ರಾಜರಿಲ್ಲ. ಅವರ ದೇಶಭಕ್ತಿ, ರಾಷ್ಟ್ರ ಪ್ರೇಮ, ಯುದ್ಧನೀತಿ ಧೈರ್ಯ, ಶೌರ್ಯ ಮಹಿಳಾ ಗೌರವ, ಜಾತ್ಯಾತೀತ ಮನೋಭಾವನೆಯಂತಹ ಆದರ್ಶ ತತ್ವಗಳನ್ನು ಇಂದಿನ ಯುವ ಜನಾಂಗವು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಕರೆ ನೀಡಿದರು.ಜಿಲ್ಲಾಡಳಿತ, ಜಿ.ಪಂ ಆಶ್ರಯದಲ್ಲಿಂದು ನಗರದ ರಂಗ ಮಂದಿರದಲ್ಲಿ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮನಿರಪೇಕ್ಷ, ಜಾತ್ಯಾತೀತ ರೈತ ಅಭಿವೃದ್ಧಿ, ಸ್ವದೇಶ ರಾಜ್ಯಸಂಸ್ಥಾಪಕರಾಗಿದ್ದರು. ಇಂತಹ ಗುಣಗಳು ಇತರೇ ರಾಜರಲ್ಲಿ ಕಾಣುವುದು ತೀರ ಕಡಿಮೆ ಎಂದರು.ತಾಯಿ ಬೀಜಾಮಾತಾ ಮಾರ್ಗದರ್ಶನದಲ್ಲಿ ರಾಷ್ಟ್ರಭಕ್ತಿ ಬೆಳೆಸಿಕೊಂಡ ಶಿವಾಜಿ ಬಾಲ್ಯದಿಂದಲೇ ರಾಮಾಯಣ, ಮಹಾಭಾರತ ಓದಿ ಸ್ವರಾಜ್ಯ ರಾಜ್ಯ ನಿರ್ಮಿಸಿದರು. ಮುಘಲರೊಂದಿಗೆ ಯುದ್ಧ ಮಾಡಿ ಗೆದ್ದ ಅವರು ಗೆರಿಲ್ಲಾ ಯುದ್ಧ ಪರಿಣಿತರಾಗಿದ್ದರು ಎಂದು ಸಚಿವರು ತಿಳಿಸಿದರು. ಶಿವಾಜಿ ಮಹಾರಾಜರು ಧರ್ಮನಿರಪೇಕ್ಷ, ಧರ್ಮಾತೀತ, ಜಾತ್ಯತೀತ ಆಗಿದ್ದರು. ಶಿವಾಜಿ ಅವರ ಸೇನೆಯಲ್ಲಿ ಅಸಂಖ್ಯಾತರು ಮುಸ್ಲಿಂ ಸಮುದಾಯದವರಾಗಿದ್ದರು. ಅನೇಕ ಹುದ್ದೆಗಳಲ್ಲಿ ಕೂಡ ಮುಸ್ಲಿಂ ನಾಯಕರನ್ನು ನೇಮಿಸಿದ್ದರು. ಎಲ್ಲ ಸಮುದಾಯದವರನ್ನು ಒಟ್ಟಾಗಿ ಮುನ್ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲವು ಜಾತಿ-ಜಾತಿಗಳಲ್ಲಿ ಕೋಮು-ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದು, ಎಲ್ಲ ಸಮುದಾಯಗಳು ಒಟ್ಟಾಗಿ ಸಹೋದರತ್ವದಿಂದ ಬಾಳಬೇಕೆಂದು ಸಚಿವರು ನುಡಿದರು.

ಕರ್ನಾಟಕ-ಮಹಾರಾಷ್ಟ್ರದ ಸಂಬಂಧಗಳು ಶತಶತಮಾನಗಳಿಂದಲೂ ಭಾತೃತ್ವ ರೀತಿಯಲ್ಲಿವೆ. ಶಿವಾಜಿಯ ತಂದೆಯ ಸಮಾಧಿ ದಾವಣಗೆರೆಯಲ್ಲಿದೆ. ಶಿವಾಜಿಯು ಕರ್ನಾಟಕ ದಲ್ಲಿ ಅನೇಕ ದಿನ ಉಳಿದು ಅನನ್ಯವಾದ ಸಂಬಂಧ ಹೊಂದಿದ್ದರು. ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇತ್ತೀಚೆಗೆ ಉತ್ತಮ ಅಭಿವೃದ್ಧಿಯಾಗುತ್ತಿದೆ ಎಂದು ತಿಳಿಸಿದರು.ಪೌರಾಡಳಿತ ಸಚಿವರಾದ ರಹೀಂ ಖಾನ್ ಮಾತನಾಡಿ, ಶಿವಾಜಿಯು ಯಾರ ವಿರುದ್ಧವೂ ಇರಲಿಲ್ಲ. ಎಲ್ಲ ಸಮುದಾಯಗಳೊಂದಿಗೆ ಒಟ್ಟಾಗಿ ರಾಜ್ಯಭಾರ ಮಾಡುತ್ತಿದ್ದರು. ಹೀಗಾಗಿ ಶಿವಾಜಿ ಮಹಾರಾಜರು ಈ ದೇಶ ಕಂಡ ಅತೀ ಪ್ರಸಿದ್ಧ ಮಹಾಪುರುಷರಾಗಿದ್ದರು ಈ ನೆಲ, ಜಲ, ವಾಯು ಎಲ್ಲರಿಗೂ ಒಂದೇ, ರಕ್ತವೂ ಒಂದೇ, ಸಸ್ಯಹಾರ, ಮಾಂಸಾಹಾರ ಅವರವರ ಆಹಾರ ಪದ್ಧತಿಯಷ್ಟೆ, ಆಯಾ ಪ್ರದೇಶಕ್ಕನುಗುಣವಾಗಿ ದೇವರನ್ನು ಕಾಣುವ ರೀತಿ, ತತ್ವ, ಕಲ್ಪನೆ ವೈವಿದ್ಯಮಯವಾಗಿದೆ. ಆದರೆ ಈ ಮನುಷ್ಯ ಮಾತ್ರ ಎಲ್ಲೆಡೆ ಒಂದೇ ರೀತಿ ಆಗಿದ್ದಾನೆ.ಎಲ್ಲ ಸಮುದಾಯದವರು ಸೇರಿ ಬೀದರ್‌ ಜಿಲ್ಲೆಯನ್ನು ಅಭಿವೃದ್ಧಿಗೊಳಿಸೋಣ ಎಂದು ತಿಳಿಸಿದರು.ಮಹಾರಾಷ್ಟ್ರದ ಮಾಜಿ ಸಂಸದರಾದ ಪ್ರೊ.ರವೀಂದ್ರ ವಿಶ್ವನಾಥರಾವ್‌ ಗಾಯಕವಾಡ ಅವರು ಅತಿಥಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಬೀದರ್‌ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಓ ಡಾ.ಗಿರೀಶ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮಾಜಿ ಜಿ.ಪಂ ಉಪಾಧ್ಯಕ್ಷ ಪ್ರಕಾಶ ಪಾಟೀಲ ಘಾಟಬೋರಳ, ಸಮಾಜದ ಮುಖಂಡರಾದ ಮದನರಾವ ಬಿರಾದಾರ, ರಘುನಾಥ ಜಾಧವ, ಅರ್ಜುನ ಬಿಲ್ಲೆ, ಪಂಡಿತ ಜಾಧವ ಬಾಳೂರು ಸೇರಿದಂತೆ ಸಮಾಜದ ಗಣ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಮಾಜಿ ಸಚಿವರಾದ ಬಂಡೇಪ್ಪ ಖಾಶಂಪೂರ, ಈಶ್ವರಸಿಂಗ ಠಾಕೂರ, ಸಮಾಜದ ಗಣ್ಯರಿಂದ ಪೂಜೆ ಸಲ್ಲಿಸಲಾಯಿತು.ಇಂದಿನ ಯುವಕರು ಛತ್ರಪತಿ ಶಿವಾಜಿ

ಇತಿಹಾಸ ಅರಿಯಿರಿ: ಸಂಸದ ಖಂಡ್ರೆಭಾಲ್ಕಿ: ವಿದ್ಯಾರ್ಥಿಗಳು, ಯುವಕರು ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಅರಿಯಬೇಕು. ಅಂದಾಗ ಮಾತ್ರ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ಸಂಸದ ಸಾಗರ ಖಂಡ್ರೆ ಅಭಿಪ್ರಾಯಪಟ್ಟರು.ಪಟ್ಟಣದ ಪುರಭವನದಲ್ಲಿ ತಾಲೂಕು ಆಡಳಿತದಿಂದ ಬುಧವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮಹೋತ್ಸವ ಉಧ್ಘಾಟಿಸಿ ಮಾತನಾಡಿ, ಯುವಕರು ದೇಶಾಭಿಮಾನಿಗಳಾಗಿ ಬದುಕಬೇಕು. ದೇಶದ ಪರವಾಗಿ ಜೀವ ತ್ಯಾಗ ಮಾಡಲೂ ಸಿದ್ಧರಿರಬೇಕು.ತಾಯಿಯ ಮಾರ್ಗದರ್ಶನದಿಂದಲೇ ಶಿವಾಜಿ ಮಹಾರಾಜರು ಉತ್ತಮ ಮಟ್ಟಕ್ಕೇರಲು ಸಾಧ್ಯವಾಯಿತು. ಎಲ್ಲಾ ತಾಯಂದಿರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಅರಿತು, ಅವರಂತಹ ತತ್ವಾದರ್ಶಗಳಂತೆ ಬಾಳಿ ದೇಶಪ್ರೇಮ ಮೆರೆಯಬೇಕೆಂದರು.ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ನಾಗೇಶ್ವರಿ ಜಗತಾಪ ವಿಶೇಷ ಉಪನ್ಯಾಸ ಮಂಡಿಸಿದರು.ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಸಿಂದನಕೇರೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಇಸಿಓ ಮಲ್ಲಿಕಾರ್ಜುನ ಕನ್ನಾಳೆ, ಸಹದೇವ.ಜಿ, ತೋಟಗಾರಿಕೆ ಇಲಾಖೆ ಅಧಿಕಾರಿ ಮಾರುತಿ ಜಬನೂರ, ಕೃಷಿ ಅಧಿಕಾರಿ ಪಿ.ಮಲ್ಲಿಕಾರ್ಜುನ, ಸಿಪಿಐ ಅಮರೇಶ.ಬಿ ಉಪಸ್ಥಿತರಿದ್ದರು.ಇದೇ ವೇಳೇ ಶಿವಾಜಿ ಪ್ರೌಢಶಾಲೆ, ಸತ್ಯನಿಕೇತನ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಭಾಲ್ಕಿ, ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಮಲ್ಲಿಕಾರ್ಜುನ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರೆ ಚನ್ನಬಸಪ್ಪ ಹಳ್ಳದ ವಂದಿಸಿದರು.

ಮಹಾತ್ಮರು ಯಾವುದೇ ಒಂದು ವ್ಯಕ್ತಿ ಜನಾಂಗಕ್ಕೆ ಸೀಮಿತವಲ್ಲ: ವಿಜಯಸಿಂಗ್‌ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಮಹಾತ್ಮ ಬಸವೇಶ್ವರ, ಶಿವಾಜಿ, ಡಾ.ಅಂಬೇಡ್ಕರ್‌, ಗಾಂಧೀಜಿ ಇವರೆಲ್ಲರೂ ಯಾವುದೇ ಒಂದು ವ್ಯಕ್ತಿ ಜನಾಂಗಕ್ಕೆ ಸೀಮಿತವಲ್ಲ ಅವರು ನಮ್ಮ ಸಮಗ್ರ ಭಾರತೀಯರಿಗೆ ಆದರ್ಶ ಪುರುಷರು ಎಂದು ಮಾಜಿ ಎಂಎಲ್‌ಸಿ ವಿಜಯಸಿಂಗ್‌ ನುಡಿದರು.

ನಗರದಲ್ಲಿ ಶಿವಾಜಿ ಪಾರ್ಕ್‌ ಸಮಿತಿಯಿಂದ ಬುಧವಾರ ಏರ್ಪಡಿಸಿದ ಶಿವಾಜಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಪಾರ್ಕ್‌ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ಹಣ ಮಂಜೂರಿಯಾಗಿದ್ದು, ಕೆಲಸವು ವೇಗಗತಿಯಿಂದ ನಡೆಯುತ್ತಿದ್ದು, ನಿಗದಿತ ಸಮಯದಲ್ಲಿ ಇದನ್ನು ಪೂರ್ಣಗೊಳಿಸಿ ಶೀಘ್ರವೇ ಉದ್ಘಾಟಿಸಲಾಗುವುದು.ಈ ಸ್ಮಾರಕಕ್ಕೆ ನನ್ನ ಸಹೋದರ ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್‌ ಅವರು ಅನುದಾನ ಒದಗಿಸಿರುವುದರಿಂದ ಜಿಲ್ಲೆಯಲ್ಲಿ ಇದೊಂದು ಉತ್ತಮ ಸ್ಮಾರಕವಾಗಿ ರೂಪಗೊಳ್ಳಲಿದೆ. ಈ ಸ್ಮಾರಕ ಕೇವಲ ಮರಾಠಾ ಜನಾಂಗಕ್ಕೆ ಸಮೀತವಲ್ಲ ನಗರದ ಎಲ್ಲಾ ಜನತೆಯ ಸ್ಮಾರಕವಾಗಿದೆ. ಕಲಂ 371 (ಜೆ) ಜಾರಿಯಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಇದನ್ನು ಜಾರಿಗಾಗಿ ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್‌ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಸೋನಿಯಾ ಗಾಂಧಿ, ರಾಹುಲಗಾಂಧಿ ಅವರಿಂದ ಜಾರಿಯಾಯಿತು. ಇದರಿಂದ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬಿಜೆಪಿಯವರು ಕೇವಲ ಹೇಳುತ್ತಾರೆ ಕಾಂಗ್ರೆಸ್ ನವರು ಮಾಡಿ ತೋರಿಸುತ್ತಾರೆ ಎಂದರು.ಪ್ರಾಧ್ಯಾಪಕರಾದ ಡಾ.ಗಣೇಶ್ ಬೆಳಮಗೆ ಉದಗೀರ ಉಪನ್ಯಾಸಕರಾಗಿ ಮಾತನಾಡಿ ಶಿವಾಜಿ ಮಹಾರಾಜರು ಸುಮಾರು 340 ಕೋಟೆಗಳನ್ನು ವಶಪಡಿಸಿಕೊಂಡಿದ್ದರು, ಇವುಗಳ ಉದ್ಘಾಟನೆ ಪೂಜೆಯಲ್ಲಿ ಕಾಲ ಕಳೆಯದೆ ಇದನ್ನು ವಿಸ್ತಾರ ಮಾಡುತ್ತಾ ದೇಶದ ಉದ್ದಗಲಕ್ಕೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ಇವರು ಕೇವಲ ರಾಜನಾಗಿ ರದೆ ದೈವಭಕ್ತರಾಗಿದ್ದು, ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದರು. ಇವರ ಧೈರ್ಯದ ಹಿಂದೆ ತಾಯಿ ಜೀಜಾಮಾತಾ ಅವರ ಕಠಿಣ ಪರಿಶ್ರಮ ಇದೆ ಎಂದರು.ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ಎಲ್ಲರೂ ಸೇರಿ ತಾಲೂಕಿನಲ್ಲಿ ಅಭಿವೃದ್ಧಿ ಮಾಡೋಣ ಎಲ್ಲದರಲ್ಲಿ ಮರಾಠಾ ಜನಾಂಗಕ್ಕೆ ಜಿಲ್ಲೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವಂತಾಗಲಿ ಎಂದರು.ವೇದಿಕೆಯಲ್ಲಿ ಅಂಗದರಾವ್ ಜಗತಾಪ, ವಿ.ಟಿ ಶಿಂಧೆ, ಓಂ ಪ್ರಕಾಶ್ ಪಾಟೀಲ್ ಜಾನಾಪೂರ, ದತ್ತಾತ್ರಿ ಧೂಳೆ, ಸಿಎಂಸಿ ಅಧ್ಯಕ್ಷ ಎಂಡಿ ಸಗೀರೋದ್ದೀನ್, ಎಂ.ಜಿ ರಾಜೋಳೆ, ವಿಕ್ರಂ ಪಾಟೀಲ್ ವಕೀಲರು, ರವೀಂದ್ರ ಬೋರಳೆ, ಮಹೇಶ್ ಪಾಟೀಲ್, ಡಿಕೆ ದಾವೂದ್, ಬಾಲಾಜಿ ಚಂಡಕಾಪುರೆ, ಪ್ರದೀಪ್ ವತಾಡೆ, ರವಿ ಗಾಯಕವಾಡ್, ತಾತ್ಯಾರಾವ ಪಾಟೀಲ್, ತಹಸಿನ್ ಅಲಿ ಜಮಾದಾರ್, ಮನೋಹರ್ ಮೈಸೆ, ಅರ್ಜುನ್ ಕನಕ್, ಆನಂದ್ ಪಾಟೀಲ್ ಕೊಹಿನೂರ್, ಸೇರಿದಂತೆ ಅನೇಕ ಮರಾಠಾ ಸಮಾಜದ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.

ಕೋಮು ಸೌಹಾರ್ದದ ಪ್ರತಿಪಾದಕರಾಗಿದ್ದ ಶಿವಾಜಿ: ರಮೇಶ ಪೆದ್ದೆ

ಕಮಲನಗರ: ಜಗತ್ತಿನಲ್ಲಿ ಹಲವಾರು ವೀರ ಶೂರ ಮಹಾರಾಜರುಗಳು ಆಗಿ ಹೋಗಿದ್ದಾರೆ ಅವರಲ್ಲಿ ಶಿವಾಜಿ ಮಹಾರಾಜರು ವಿಶ್ವಮಾನ್ಯ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆಂದು ಗ್ರೇಡ್-2 ತಹಸೀಲ್ದಾರ್‌ ರಮೇಶ್ ಪೆದ್ದೆ ಹೇಳಿದರು.

ತಾಲೂಕು ಆಡಳಿತ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಉದ್ಘಾಟಿಸಿದ ಪ್ರದೀಪ ಬಿರಾದರ್ ಮಾತನಾಡಿ, ಜಾತಿ, ಭಾಷೆಗಳ ಬೇಧ ಎಣಿಸದೇ ಮಹಿಳೆಯರಲ್ಲಿ ತಾಯಿಯನ್ನು ಕಾಣುತ್ತಿದ್ದ ರಾಷ್ಟ್ರರಕ್ಷಕ, ಕೋಮು ಸೌಹಾರ್ದದ ಪ್ರತಿಪಾದಕರಾಗಿದ್ದ ಶಿವಾಜಿ ಮಹಾರಾಜರ ಜೀವನ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕಾಗಿದೆ.ನಾವೆಲ್ಲಾ ಸಹೋದರ ಭಾವನೆಯಿಂದ ದೇಶದ ಪ್ರಗತಿಗೆ ಶ್ರಮಿಸಬೇಕಾದ ಅವಶ್ಯಕತೆ ಇದ್ದು, ಶಿವಾಜಿ ಮಹಾರಾಜರ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.ರಾಷ್ಟ್ರಭಕ್ತಿಯ ಮೂಲಕ ಜನಸಾಮಾನ್ಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹಲವಾರು ಜನೋಪಯೋಗಿ ಯೋಜನೆಗಳನ್ನು ತಮ್ಮ ಆಡಳಿತದಲ್ಲಿ ಅವರು ಜಾರಿಗೆ ತಂದಿದ್ದರು. ಅವರ ಸಾಹಸಗಾಥೆ ಮನೆ ಮಾತಾಗಿದ್ದು, ಛತ್ರಪತಿ ಶಿವಾಜಿ ದೇಶದ ಆಸ್ತಿಯಾಗಿದ್ದು, ಅವರು ಯಾವುದೇ ಭಾಷೆ ಹಾಗೂ ಪ್ರದೇಶಕ್ಕೆ ಸೀಮಿತವಾದವರಾಗಿರಲಿಲ್ಲವೆಂದು ತಿಳಿಸಿದರು.ಸಮಾರಂಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯ ಉತ್ಸವ ಸಮಿತಿಯ ಅಧ್ಯಕ್ಷ ಸಚಿನ್ ಜಾಧವ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾಜಿ ಎಪಿಎಂಸಿ ಅಧ್ಯಕ್ಷ ರಂಗರಾವ್ ಜಾಧವ್, ಮಾಜಿ ತಾ.ಪಂ ಅಧ್ಯಕ್ಷ ಶ್ರೀರಂಗ ಪರಿಹಾರ್, ಮಾಧವರಾವ್ ಚಾಂಗೂಣೆ, ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಕದಮ್, ರಾಮರಾವ್ ಜಾಧವ್, ನಿತಿನ್ ಜಾಧವ್, ಎಸ್ ಎನ್ ಶಿವಣಕರ್, ಶಾಂತಕುಮಾರ ಬಿರಾದಾರ್, ಆಯುಬ್ ಖುರೇಶಿ, ತಾ.ಪಂ ಅಧಿಕಾರಿ ಮಾಣಿಕರಾವ್ ಪಾಟೀಲ್, ತಾಲೂಕು.ಕಸಾಪ ಅಧ್ಯಕ್ಷ ಪ್ರಶಾಂತ್ ಮಠಪತಿ, ಗ್ರಾಮಸ್ಥರು ಉಪಸ್ಥಿತರಿದ್ದರು.