ಸಾರಾಂಶ
ಮುದಗಲ್ ಸಮೀಪದ ಛತ್ತರ ಆಂಜನೇಯ ದೇವರ ಜಾತ್ರೆಯಲ್ಲಿ ಭಕ್ತರು ದರ್ಶನ ಪಡೆಯಲು ಸರದಿಯಲ್ಲಿ ನಿಂತಿರುವದು. ಒಳಚಿತ್ರದಲ್ಲಿ ಆಂಜನೇಯ ದೇವರಿಗೆ ಅಲಂಕರಿಸಿರುವದು.
ಮುದಗಲ್: ಸಮೀಪದ ಛತ್ತರ ಗ್ರಾಮದ ಆಂಜನೇಯ ದೇವರ ಜಾತ್ರೆಗೆ ಭಕ್ತರು ಜನಸಾಗರವೇ ಹರಿದು ಬಂದಿತು. ದೇವಸ್ಥಾನದಲ್ಲಿ ಆಂಜನೇಯನ ದರ್ಶನಕ್ಕಾಗಿ ಜನತೆ ಸರದಿಯಲ್ಲಿ ನಿಂತು ದರ್ಶನ ಪಡೆದರು.
ದವನದ ಹುಣ್ಣಿಮೆಯೇ ಛತ್ತರ ಆಂಜನೇಯನ ಜಾತ್ರೆ ಜರುಗಲಿದ್ದು, ಭಕ್ತರು ಬೆಳಗ್ಗೆಯಿಂದ ಹಬ್ಬದ ವಾತಾವರಣದಲ್ಲಿ ಮಿಂದೆದ್ದರು. ಭಕ್ತರು ದೀಡ ನಮಸ್ಕಾರ ಹಾಕುವದು ಸೇರಿ ವಿವಿಧ ರೀತಿಯಲ್ಲಿ ತಮ್ಮ ಭಕ್ತಿ ಸಮರ್ಪಿಸಿದರು. ಇನ್ನೂ ಕೆಲವರು ಅಲ್ಲಿಯೇ ವಾಸ್ತವ್ಯ ಮಾಡಿ ಸುತ್ತಲಿನ ಗುಡ್ಡದಲ್ಲಿ ಇರುವ ಕಟ್ಟಿಗೆ ಮೂಲಕ ಅಡುಗೆ ತಯಾರಿಸಿ ಆಂಜನೇಯ ದೇವರಿಗೆ ನೈವಿದ್ಯ, ಕಾಯಿ ಕರ್ಪರ ಸಮರ್ಪಿಸಿದರು. ವಿಶೇಷವೆಂದರೆ ಸುತ್ತ ಮುತ್ತಲೂ ಬರುವ ತಾಂಡಾ, ದೊಡ್ಡಿಗಳ ಲಂಬಾಣಿ ಸಮಾಜ ಸೇರಿ ವಿವಿಧ ಸಮಾಜ ಬಾಂಧವರಿಗೆ ಆರಾಧ್ಯ ದೈವನಾಗಿರುವದು ವಿಶೇಷ.ದೇವಸ್ಥಾನದಲ್ಲಿ ಛತ್ತರ ಆಂಜನೇಯನಿಗೆ ವಿಶೇಷ ಪೂಜೆ, ಅಲಂಕಾರ ಸೇವೆ. ಎಲೆ ಚಟ್ಟು ಸೇರಿ ವಿವಿಧ ರೀತಿಯ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಸಾಯಂಕಾಲ ಜಾತ್ರೆ ನಿಮಿತ್ತ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಕಾರ್ಯಕ್ರಮ ಜರುಗಿತು.