ಪ್ರಜಾಪ್ರಭುತ್ವದ ಧ್ವನಿ ಮತದಾನದ ಮೂಲಕ ಪ್ರತಿಧ್ವನಿಸುತ್ತೆ: ಡಾ.ಶರತ್‌ ಅನಂತಮೂರ್ತಿ

| Published : Apr 24 2024, 02:23 AM IST

ಪ್ರಜಾಪ್ರಭುತ್ವದ ಧ್ವನಿ ಮತದಾನದ ಮೂಲಕ ಪ್ರತಿಧ್ವನಿಸುತ್ತೆ: ಡಾ.ಶರತ್‌ ಅನಂತಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಕಾಲೇಜಿನ ಸಭಾಂಗಣದಲ್ಲಿ ಮತದಾನದ ಜಾಗೃತಿ ಕುರಿತು ಕವಿಗೋಷ್ಠಿ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಜಾಪ್ರಭುತ್ವದ ದ್ವನಿ ಮತದಾನದ ಮೂಲಕ ದೇಶದಲ್ಲಿ ಪ್ರತಿದ್ವನಿಸುತ್ತದೆ. ಹೀಗಾಗಿ ಮತದಾನ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಕುವೆಂಪು ವಿವಿ ಕುಲಪತಿ ಡಾ.ಶರತ್ ಅನಂತಮೂರ್ತಿ ತಿಳಿಸಿದರು.

ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ, ಸ್ವೀಪ್ ಸಮಿತಿ ವತಿಯಿಂದ ಮತದಾನದ ಜಾಗೃತಿ ಕುರಿತು ಕವಿಗೋಷ್ಠಿ ಸಮಾರೋಪ ಕಾರ್ಯಕ್ರಮವನ್ನು ಕಾಲೇಜಿನ ಸಭಾಗಂಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಧ್ವನಿ ಪ್ರತಿಧ್ವನಿಸಬೇಕು ಎಂದರೆ, ಪ್ರತಿಯೊಬ್ಬರೂ ಮತದಾನ ಮಾಡಬೇಕು. ನಾವು ಮತದಾನ ಮಾಡದೇ ಹೊದರೇ ತಾಂತ್ರಿಕ ಜಗತ್ತು ಬೆಳೆಯುತ್ತಾ ಮನುಷ್ಯರಿಗೆ ಬೆಲೆ ಇರುವುದಿಲ್ಲ. ಮತದಾನದ ಮೂಲಕ ಸಂಸತ್ತಿನಲ್ಲಿ ನಿಮ್ಮ ದ್ವನಿ ಕೇಳಿಸುತ್ತದೆ ಒಂದೊಂದು ಮತದಾನವೂ ಅತ್ಯಂತ ಅಮೂಲ್ಯವಾಗಿದೆ. ಪ್ರತಿಯೊಬ್ಬರೂ ಮತದಾನ ಮಾಡಿ ಎಂದು ಕರೆ ನೀಡಿದರು.

ಮತದಾರ ಜಾಗೃತಿಯಾಗುವುದು ಅತೀ ಮುಖ್ಯವಾಗಿದೆ. ವಿಭಿನ್ನವಾಗಿವಾಗಿ ಕವಿಗೋಷ್ಠಿಯ ಮೂಲಕ ಯುವ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ವಿಶೇಷವಾಗಿದೆ ಎಂದರು.

ತಹಶಿಲ್ದಾರ್ ಗಿರೀಶ್ ಮಾತನಾಡಿ, ಭಾರತ ಸಂವಿಧಾನ ಬಂದು ಇಷ್ಟು ವರ್ಷಗಳು ಕಳೆದರೂ ನಾವು ಇನ್ನೂ ಜಾಗೃತರಾಗಿಲ್ಲ. ಭಾರತ ಸಂವಿಧಾನದ ಮೂಲಕ ನಾವು ಎಲ್ಲಾ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಆದರೆ, ಮತದಾನದಲ್ಲಿ ನಾವು ಹಿಂದೆ ಉಳಿದಿದ್ದೇವೆ. ಮತದಾನ ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ಭಾವಿಸಿ ನೀವು ಮತದಾನ ಮಾಡಬೇಕು. ಜೊತೆಯಲ್ಲಿ ನಿಮ್ಮ ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಅವರು ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ಮತದಾನ ಜಾಗೃತಿ ಸ್ವೀಪ್ ಕಾರ್ಯಕ್ರಮಗಳ ಕುರಿತು ರಾಷ್ಟ್ರೀಯ ತರಬೇತುದಾರರಾದ ನವೀದ್ ಅಹಮ್ಮದ್ ಫವ್ರೀಜ್ ಅವರು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಆದಿಮೂರ್ತಿ, ಶೇಖರ್, ಜಿಲ್ಲಾ ಜಾಗೃತ ಮತದಾರ ವೇದಿಕೆ ನಿರ್ದೇಶಕ ರಾದ ಬಸವರಾಜ್, ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭು, ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು.