ಸಾರಾಂಶ
ಚನ್ನಪಟ್ಟಣ: ನಗರದಲ್ಲಿ ಕಾಂಗ್ರೆಸ್ ವಿಜಯೋತ್ಸವದ ಮೆರವಣಿಗೆ ವೇಳೆ ಮುಖ್ಯಪೇದೆಯೊಬ್ಬರ ಕಾಲು ಹಾಗೂ ಕೈಗೆ ಗಾಯವಾಗಿದೆ.
ಚನ್ನಪಟ್ಟಣ: ನಗರದಲ್ಲಿ ಕಾಂಗ್ರೆಸ್ ವಿಜಯೋತ್ಸವದ ಮೆರವಣಿಗೆ ವೇಳೆ ಮುಖ್ಯಪೇದೆಯೊಬ್ಬರ ಕಾಲು ಹಾಗೂ ಕೈಗೆ ಗಾಯವಾಗಿದೆ. ಚನ್ನಪಟ್ಟಣ ಪುರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ದುರ್ಗಪ್ಪ ಕೈ-ಕಾಲು ಮುರಿತಕ್ಕೊಳಗಾದವರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ವಿಜಯೋತ್ಸವ ಆಚರಿಸಿದರು. ನಗರದ ಶೇರ್ವಾ ಸರ್ಕಲ್ ಬಳಿಯಿಂದ ವಿಜಯೋತ್ಸವ ಮೆರವಣಿಗೆ ಹೊರಟಿದ್ದ ವೇಳೆ ಮೆರವಣಿಗೆ ಶೇರ್ವಾ ಸರ್ಕಲ್ ಹಾಗೂ ಸಾತನೂರು ಸರ್ಕಲ್ ಮಧ್ಯದಲ್ಲಿರುವ ಜನತಾ ಶಾಮಿಲ್ ಬಳಿ ಸಾಗುವ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ದುರ್ಗಪ್ಪ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ಈ ವೇಳೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವಾಹನ ಅವರ ಕಾಲ ಮೇಲೆ ಹರಿದ ಪರಿಣಾಮ ಗಾಯವಾಗಿದೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜೆಎಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.