ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸ: ಮೈಲಾರಿಯಲ್ಲಿ ತಿಂಡಿ, ಸ್ನೇಹಿತರ ಮನೆ, ಆಸ್ಪತ್ರೆಗೆ ಭೇಟಿ

| Published : Feb 02 2025, 01:00 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸ: ಮೈಲಾರಿಯಲ್ಲಿ ತಿಂಡಿ, ಸ್ನೇಹಿತರ ಮನೆ, ಆಸ್ಪತ್ರೆಗೆ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಅವರು ದೋಸೆ ಸವಿದರು. ಮೈಸೂರಿಗೆ ಬಂದಾಗಲೆಲ್ಲ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ಇಷ್ಟವಾದ ದೋಸೆ ತಿನ್ನುವ ಸಿದ್ದರಾಮಯ್ಯ ಅವರಿಗೆ ಶನಿವಾರ ಅವರ ಪುತ್ರ ಡಾ. ಯತೀಂದ್ರ, ಶಾಸಕ ಎ.ಆರ್. ಕೃಷ್ಣಮೂರ್ತಿ ಸಾಥ್ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶನಿವಾರ ಬೆಳಗ್ಗೆ ವಿವಿಧೆಡೆ ಭೇಟಿ ನೀಡಿದರು.ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಅವರು, ಸಂಬಂಧ ಪಟ್ಟ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಸೂಚಿಸಿದರು.ಸಿಎಂಗೆ ಮನವಿ ಪತ್ರ ನೀಡಲು ಸಾರ್ವಜನಿಕರ ನಡುವೆ ಕೆಲಕಾಲ ನೂಕು ನುಗ್ಗಲು ಸಹ ಉಂಟಾಯಿತು.ಬಳಿಕ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ ನಲ್ಲಿ ಸಿದ್ದರಾಮಯ್ಯ ಅವರು ದೋಸೆ ಸವಿದರು. ಮೈಸೂರಿಗೆ ಬಂದಾಗಲೆಲ್ಲ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ಇಷ್ಟವಾದ ದೋಸೆ ತಿನ್ನುವ ಸಿದ್ದರಾಮಯ್ಯ ಅವರಿಗೆ ಶನಿವಾರ ಅವರ ಪುತ್ರ ಡಾ. ಯತೀಂದ್ರ, ಶಾಸಕ ಎ.ಆರ್. ಕೃಷ್ಣಮೂರ್ತಿ ಸಾಥ್ ನೀಡಿದರು.ನಂತರ ತಮ್ಮ ಸ್ನೇಹಿತ ಹಾಗೂ ಹಿರಿಯ ವಕೀಲರಾದ ಶ್ರೀನಿವಾಸನ್ ಅವರ ಮನೆಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.ಬಳಿಕ ಕುವೆಂಪುನಗರದಲ್ಲಿರುವ ಅಪೋಲೋ‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕೇಂದ್ರ ಸಚಿವ, ಮಾಜಿ ರಾಜ್ಯಪಾಲ ರಾಚಯ್ಯ ಅವರ ಪತ್ನಿ, ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ತಾಯಿಯವರನ್ನು ಸಿದ್ದರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿ, ಬೇಗ ಗುಣಮುಖರಾಗುವಂತೆ ಹಾರೈಸಿದರು.‌ ಈ ವೇಳೆ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಡಾ.ಡಿ. ತಿಮ್ಮಯ್ಯ ಮೊದಲಾದವರು ಇದ್ದರು.