ಶ್ರೀಲಂಕಾದಲ್ಲಿನ ವಾಯುಭಾರ ಕುಸಿತದ ಹೊಡೆತ ತಟ್ಟಿದೆ. ನಿನ್ನೆ ಬೆಳಗ್ಗೆಯಿಂದಲೇ ಶುರುವಾದ ಮಳೆ ಭಾನುವಾರ ಸಂಜೆಯವರೆಗೂ ಬಿಟ್ಟು ಬಿಟ್ಟು ತುಂತುರು ಮಳೆ ಸುರಿಯುತ್ತಲೇ ಇದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಹಿನ್ನೆಲೆ, ಜಿಲ್ಲೆಯಲ್ಲಿ ಶನಿವಾರದಿಂದ ಜಿಟಿಜಿಟಿ ಮಳೆ ಮತ್ತು ಚಳಿಯಾಗುತ್ತಿದ್ದು, ಇದು ರಜಾ ದಿನವಾದ ಭಾನುವಾರವೂ ಮುಂದುವರೆದಿದೆ. ಜಿಲ್ಲೆಯ ಜನತೆ ಚಳಿ, ಶೀತಗಾಳಿ ಜತೆಗೆ ತುಂತುರು ಜಡಿ ಮಳೆಗೆ ನಡುಗಿ ಹೋಗಿದ್ದಾರೆ.

ಜಿಲ್ಲೆಯಲ್ಲಿ ಶನಿವಾರ ಮುಂಜಾನೆಯಿಂದ ಜಿಟಿ-ಜಿಟಿ ಮಳೆ ಬರುತ್ತಿದ್ದು,, ಜಿಲ್ಲೆಯ ನಿವಾಸಿಗಳು ಮನೆ ಬಿಟ್ಟು ಕದಲುತ್ತಿಲ್ಲ. ಮತ್ತೊಂದೆಡೆ ನಿನ್ನೆ ಮತ್ತು ಇಂದು ವೀಕೆಂಡ್‌ ಎಂದುಕೊಂಡವರಿಗೆ ಶ್ರೀಲಂಕಾದಲ್ಲಿನ ವಾಯುಭಾರ ಕುಸಿತದ ಹೊಡೆತ ತಟ್ಟಿದೆ. ನಿನ್ನೆ ಬೆಳಗ್ಗೆಯಿಂದಲೇ ಶುರುವಾದ ಮಳೆ ಭಾನುವಾರ ಸಂಜೆಯವರೆಗೂ ಬಿಟ್ಟು ಬಿಟ್ಟು ತುಂತುರು ಮಳೆ ಸುರಿಯುತ್ತಲೇ ಇದೆ.

ನಿನ್ನೆಯಿಂದ ಸುರಿದ ತುಂತುರು ಮಳೆ ಹಾಗೂ ಶೀತಗಾಳಿಗೆ ವಾಹನ‌ ಸವಾರರು ಹೈರಾಣಾಗಿದ್ದಾರೆ. ವಿಕೇಂಡ್ ‌ಮೂಡ್‌ನಲ್ಲಿದ್ದ ಮಂದಿಗೂ ತುಂತುರು ಮಳೆ ಹಾಗೂ ಶೀತಗಾಳಿ ಶಾಕ್ ಕೊಟ್ಟಿದೆ. ರಕ್ತ ಚಳಿಗೆ, ತುಂತುರು ಮಳೆಗೆ ಪಾರ್ಟಿ ಪ್ರಿಯರು ಸುಸ್ತಾಗಿ ಹೋಗಿದ್ದಾರೆ. ಜಿಲ್ಲೆಯ ಪ್ರವಾಸಿ ತಾಣಗಳಾದ ನಂದಿಗಿರಿಧಾಮ, ಈಶಾ ಕೇಂದ್ರ, ಸೇರಿದಂತೆ ಎಲ್ಲಡೆ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ.

ಕಳೆದ ಕೆಲ ದಿನಗಳಿಂದಲೂ ನಿರಂತರವಾಗಿ ಮೋಡ ಮುಸುಕಿದ ವಾತಾವರಣ, ದಟ್ಟವಾದ ಮಂಜು ಮತ್ತು ತಣ್ಣನೆಯ ಜೋರು ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಜನರು ಚಳಿಗೆ ನಡುಗುವಂತಾಗಿದೆ. ಶ್ರೀಲಂಕಾದಲ್ಲಿನ ವಾಯುಭಾರ ಕುಸಿತದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದ ಪ್ರಭಾವವು ಜಿಲ್ಲೆಯ ಮೇಲೂ ಬಿದ್ದಿದ್ದು ಬೆಚ್ಚಗೆ ಇರಲು ಹೆಚ್ಚಿನ ಜನರು ಟೋಪಿ, ಸೈಟ‌ರ್, ಜರ್ಕಿನ್‌ಗಳ ಮೊರೆ ಹೋಗಿದ್ದಾರೆ. ಬಂಗಾಲಕೊಲ್ಲಿಯಲ್ಲಿ ವಾಯಭಾರ ಕುಸಿತದಿಂದ ವಿವಿಧೆಡೆ ಮಳೆ ಸುರಿಯುತ್ತಿದ್ದರೆ, ಬಹುತೇಕ ಕಡೆ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದೆ. ಇದರ ನಡುವೆ ಬೆಳಿಗ್ಗೆ ಮತ್ತು ಸಂಜೆ ದಟ್ಟವಾದ ಮಂಜು ಆವರಿಸುತ್ತಿದ್ದು, ಮತ್ತೊಂದೆಡೆ ಬದಲಾದ ವಾತಾವರಣದಿಂದ ಜನರು ಹೊರಗೆ ಬರಲು ಹೆದುರುವಂತಾಗಿದೆ. ಚಳಿಗೆ ನೆಗಡಿ, ತಲೆ ನೋವು, ಕೈ ಕಾಲು ನೋವು, ಕೆಮ್ಮು, ಕಣ್ಣು ಉರಿ ಸೇರಿ ಶೀತದ ನಾನಾ ಸಮಸ್ಯೆಗಳು ಕಾಡುತ್ತಿವೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳುವ ರೋಗಿಗಳ ಸಂಖ್ಯೆ, ಔಷಧಗಳನ್ನು ಸೇವಿಸುವುದರ ಪ್ರಮಾಣ ಹೆಚ್ಚಾಗಿದೆ.

ತಾಪಮಾನ ಕುಸಿತ, ಶೀತ ಗಾಳಿಯ ಜತೆಗೆ ದಿತ್ವಾ ಚಂಡಮಾರುತದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಳವಾಗುತ್ತಿದೆ. ಶನಿವಾರ ಗರಿಷ್ಠ ಉಷ್ಣಾಂಶದಲ್ಲಿ ಬರೋಬ್ಬರಿ 5.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತ ಉಂಟಾಗಿದೆ.

ಕಳೆದೊಂದುವರೆ ತಿಂಗಳಿಂದ ಜಿಲ್ಲೆಯಲ್ಲಿ ಚಳಿ ವಾತಾವರಣ ಶುರುವಾಗಿದೆ. ಕಳೆದ ನಾಲೈದು ದಿನಗಳಿಂದ ದಿನದಿಂದ ದಿನಕ್ಕೆ ಚಳಿ ಹೆಚ್ಚಳವಾಗುತ್ತಿದೆ. ಹೀಗಾಗಿ, ನಗರ ಮತ್ತು ಗ್ರಾಮಾಂತರಗಳಲ್ಲಿ ಮನೆಯಿಂದ ಹೊರ ಬರುತ್ತಿರುವವರು ಚಳಿ ಮತ್ತು ಮಳೆಯಿಂದ ರಕ್ಷಸಿಕೊಳ್ಳಲು ಸ್ವೆಟರ್, ಟೋಪಿ, ಜರ್ಕಿನ್ ಸೇರಿದಂತೆ ಬೆಚ್ಚಗಿಡುವ ಬಟ್ಟೆಗಳ ಮಪರೆ ಹೊಗಿದ್ದಾರೆ. ಈಗಾಗಲೇ ಸ್ವೆಟರ್, ಟೋಪಿ, ಜರ್ಕಿನ್ ಸೇರಿದಂತೆ ಬೆಚ್ಚಗಿಡುವ ಬಟ್ಟೆಗಳ ಭರ್ಜರಿ ವಹಿವಾಟು ನಡೆಯುತ್ತಿದ್ದು ಪ್ರಮುಖ ರಸ್ತೆಗಳ ಬದಿಯಲ್ಲಿ ಬೇಡಿಕೆ ಹೆಚ್ಚಳಕ್ಕೆ ಅನುಗುಣವಾಗಿ ದುಬಾರಿ ದರಕ್ಕೆ ಉತ್ಪನ್ನಗಳನ್ನು ಮಾರುತ್ತಿರುವ ದೃಶ್ಯ ಕಂಡು ಬರುತ್ತಿದೆ. ಫ್ಯಾಷನ್ ಶೈಲಿಗೆ ಹೊಂದಿಕೊಂಡಿರುವ ಅನೇಕರು ಆಯ್ಕೆಯ ಬಣ್ಣ, ಬ್ರಾಂಡ್, ಗುಣಮಟ್ಟವನ್ನಾಧಾರಿಸಿ ಆನ್‌ ಲೈನ್‌ನಲ್ಲಿ ಖರೀದಿಸುತ್ತಿದ್ದಾರೆ. ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಂಪು ಪಾನೀಯಾಗಳ ಕಡೆ ಒಲವು ತುಂಬಾ ಕಡಿಮೆಯಾಗಿದೆ. ಬಹುತೇಕರು ಕಾಫಿ ಚಹಾ, ಉತ್ಪನ್ನಗಳನ್ನು ಮಾರುತ್ತಿರುವ ದೃಶ್ಯ ಕಂಡು ಬರುತ್ತಿದೆ. ಬಾರ್ ಮತ್ತು ಮದ್ಯದಂಗಡಿಗಳಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ.

ಚಳಿ- ಮಳೆಯ ವಾತಾವರಣದಿಂದ ಬೆಳಗ್ಗೆ ಜನತೆ ವಾಕಿಂಗ್ ಬರಲು ಹಿಂದೇಟು ಹಾಕುತ್ತಿದ್ದರೆ, ಕೆಲವರೂ ಈ ವಾತಾವರಣದಲ್ಲೇ ಹೊರ ಬಂದು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಕೆಲವರು ಚಳಿಯ ಹಿನ್ನೆಲೆ ಹಾಸಿಗೆಯಿಂದ ಎದ್ದು ಹೊರ ಬರಲು ಹಿಂದೇಟು ಹಾಕಿಮನೆಯಲ್ಲಿಯೇ ಬೆಚ್ಚಗೆ ಇದ್ದಾರೆ.ದಕ್ಷಿಣ ಒಳನಾಡು ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿನ್ನೆಯಿಂದ ಜ. 14ರವರೆಗೂ ತುಂತುರು ಮಳೆ ಸುರಿಯುವ ಸಾಧ್ಯತೆ ಇದೆ. ಜಿಲ್ಲೆಯ ಕೆಲವೆಡೆ ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯನ್ನು ಅಂದಾಜಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಿಕೆಬಿ-4 ತಾಲ್ಲೂಕಿನ ನಂದಿಗಿರಿಧಾಮದ ಸಾಲಿನಲ್ಲಿ ತುಂತುರು ಮಳೆಗೆ ಕಂಡು ಕಾಣದಂತೆ ಗೋಚರಿಸುತ್ತಿರುವ ಬೆಟ್ಟಗಳು