ಸಾರಾಂಶ
ಜನಪದ ಗೀತೆಗಳಲ್ಲಿ ಬರುವ (ಮಾಯದಂತ ಮಳೆ ಬಂತಮ್ಮ ಮದಗಾದ ಕೆರೆಗೆ...) ಚಿಕ್ಕಮಗಳೂರಿನ ಖ್ಯಾತ ಮದಗದ ಕೆರೆ ಈ ಬಾರಿಯ ಮುಂಗಾರು ಮಳೆಗೆ ಭರ್ತಿಯಾಗಿದೆ.
ಕಡೂರು : ಜನಪದ ಗೀತೆಗಳಲ್ಲಿ ಬರುವ (ಮಾಯದಂತ ಮಳೆ ಬಂತಮ್ಮ ಮದಗಾದ ಕೆರೆಗೆ...) ಚಿಕ್ಕಮಗಳೂರಿನ ಖ್ಯಾತ ಮದಗದ ಕೆರೆ ಈ ಬಾರಿಯ ಮುಂಗಾರು ಮಳೆಗೆ ಭರ್ತಿಯಾಗಿದೆ.
65 ಅಡಿ ಸಾಮರ್ಥ್ಯದ, ಕಡೂರು ತಾಲೂಕಿನ ಜನರ ಜೀವನಾಡಿಯಾಗಿರುವ ಮದಗದ ಕೆರೆ ಭೋರ್ಗರೆಯುತ್ತಿದ್ದು, ಕೋಡಿ ಬಿದ್ದಿದೆ. ಕೋಡಿ ಮೇಲೆ ಸುಮಾರು ಮೂರು ಅಡಿಯಷ್ಟು ನೀರು ಹೆಚ್ಚಾದ ಕಾರಣ ಕಾಲುವೆಗಳಲ್ಲೂ ಹೆಚ್ಚಿನ ಪ್ರಮಾಣದ ನೀರು ಹರಿದು ಕೆರೆಗೆ ಹೋಗುವ ರಸ್ತೆ ಜಲಾವೃತವಾಗಿ ಜನ ಜನಸಂಚಾರಕ್ಕೆ ಅಡ್ಡಿಯಾಗಿದೆ. ಸುತ್ತಮುತ್ತಲಿನ ಸುಮಾರು 7 ಗ್ರಾಮಗಳು ರಸ್ತೆ ಸಂಪರ್ಕ ಕಡಿದುಕೊಂಡಿವೆ. ಈ ಮಧ್ಯೆ, ಪೊಲೀಸರು ಬ್ಯಾರಿಕೇಡ್ ಹಾಕಿ, ಈ ರಸ್ತೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.