ಚಿಕ್ಕಮಗಳೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಳೆದ ಎರಡು ವರ್ಷ ಸತತವಾಗಿ ಪ್ರಶಸ್ತಿ ಪಡೆದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಈ ಬಾರಿ ಅವಕಾಶ ಕೈತಪ್ಪಿದೆ.
''''ತೇಜಸ್ವಿ ವಿಸ್ಮಯ ಲೋಕ'''''''', ''''''''ಭದ್ರಾ ಬಾಲ್ಯ'''''''' ಪ್ರಶಸ್ತಿ ಪಡೆದಿದ್ದ ಸ್ಥಬ್ಧ ಚಿತ್ರಗಳು ।
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಳೆದ ಎರಡು ವರ್ಷ ಸತತವಾಗಿ ಪ್ರಶಸ್ತಿ ಪಡೆದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಈ ಬಾರಿ ಅವಕಾಶ ಕೈತಪ್ಪಿದೆ.
ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಸಲ್ಲಿಸಲಾಗಿದ್ದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ದಸರಾ ಸ್ತಬ್ಧಚಿತ್ರ ಉಪಸಮಿತಿ ತಿರಸ್ಕರಿ ಸಿರುವುದು ಜಿಲ್ಲೆಯ ಜನರಲ್ಲಿ ಬೇಸರ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.2024ರಲ್ಲಿ ಕವಿ, ಕಾದಂಬರಿಕಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಮತ್ತು ಸೃಜನಶೀಲ ಜಗತ್ತನ್ನು ಪರಿಚ ಯಿಸುವ ''''''''ತೇಜಸ್ವಿ ವಿಸ್ಮಯ ಲೋಕ'''''''' ಸ್ತಬ್ಧಚಿತ್ರ ಪ್ರದರ್ಶನಗೊಂಡು ಸಮಾಧಾನಕರ ಬಹುಮಾನ ಪಡೆದುಕೊಂಡಿತ್ತು. ಬಳಿಕ 2025ರಲ್ಲಿ ಭದ್ರಾ ಅಭಯಾರಣ್ಯ ಹಾಗೂ ಪ್ರಕೃತಿಯ ಮಹತ್ವವನ್ನು ಬಿಂಬಿಸುವ ''''''''ಭದ್ರಾ ಬಾಲ್ಯ'''''''' ಸ್ತಬ್ಧಚಿತ್ರ ಮೂರನೇ ಬಹುಮಾನ ಗಳಿಸುವ ಮೂಲಕ ಗಮನ ಸೆಳೆದಿತ್ತು.ಸತತ ಎರಡು ವರ್ಷ ಜಿಲ್ಲೆಗೆ ಪ್ರಶಸ್ತಿ ತಂದುಕೊಟ್ಟಿದ್ದ ಸ್ತಬ್ಧಚಿತ್ರಗಳ ಹಿನ್ನೆಲೆಯಲ್ಲಿ ಈ ಬಾರಿಯೂ ಚಿಕ್ಕಮಗಳೂರು ಜಿಲ್ಲೆಯ ಸಾಂಸ್ಕೃತಿಕ ವೈಭವ ಮತ್ತು ಐತಿಹಾಸಿಕ ಪರಂಪರೆಯನ್ನು ಮೈಸೂರು ದಸರಾ ವೇದಿಕೆಯಲ್ಲಿ ಪ್ರದರ್ಶಿಸುವ ನಿರೀಕ್ಷೆ ಇತ್ತು. ಆದರೆ, ಈ ನಿರೀಕ್ಷೆ ಈಡೇರಿಲ್ಲ.ಚಿಕ್ಕಮಗಳೂರಿಗೆ ಗಾಂಧೀಜಿ:100 ವರ್ಷ
ಮಹಾತ್ಮ ಗಾಂಧೀಜಿ ಅವರು ಚಿಕ್ಕಮಗಳೂರಿಗೆ ಆಗಮಿಸಿ 2026ಕ್ಕೆ ಬರೋಬ್ಬರಿ ಒಂದು ಶತಮಾನ ಕಳೆದ ಹಿನ್ನೆಲೆಯಲ್ಲಿ ಆ ಐತಿಹಾಸಿಕ ಘಟನೆ ಆಧರಿಸಿ ಸ್ತಬ್ಧಚಿತ್ರ ರೂಪಿಸುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿ ದಸರಾ ಸ್ತಬ್ಧಚಿತ್ರ ಉಪಸಮಿತಿಗೆ ಸಲ್ಲಿಸಿತ್ತು.ಜಿಲ್ಲೆಯ ಇತಿಹಾಸದಲ್ಲಿ ಮಹತ್ವ ಪಡೆದಿರುವ ಗಾಂಧೀಜಿಯವರ ಭೇಟಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಸಾರುವ ಉದ್ದೇಶ ಈ ಪರಿಕಲ್ಪನೆಯ ಹಿಂದಿತ್ತು. ಆದರೆ, ಪ್ರಸ್ತಾವನೆಗೆ ಅನುಮೋದನೆ ದೊರೆಯದ ಕಾರಣ ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ಚಿಕ್ಕಮಗಳೂರಿನ ಸ್ತಬ್ಧಚಿತ್ರ ಕಾಣಿಸಿಕೊಳ್ಳುವುದಿಲ್ಲ.15 ಜಿಲ್ಲೆಗಳಲ್ಲಿ ಚಿಕ್ಕಮಗಳೂರಿಗೆ ಇಲ್ಲ ಅವಕಾಶ
ಪ್ರತಿ ವರ್ಷದ ಸುಮಾರು 50ಕ್ಕೂ ಅಧಿಕ ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೇವಲ 15 ಜಿಲ್ಲೆಗಳ ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶ ಕಲ್ಪಿಸುವ ನಿಯಮದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಪ್ರಸ್ತಾವನೆ ತಿರಸ್ಕೃತವಾಗಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ಕೇಳಿಬಂದಿದೆ. ಆದರೆ, ಯಾವ ಮಾನದಂಡಗಳ ಆಧಾರದಲ್ಲಿ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಚಿಕ್ಕಮಗಳೂರಿನ ಪ್ರಸ್ತಾವನೆ ತಿರಸ್ಕರಿಸಲು ನಿಖರ ಕಾರಣವೇನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕಳೆದ ಎರಡು ವರ್ಷ ಪ್ರಶಸ್ತಿ ಪಡೆದಿದ್ದ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ಸಿಗದಿರುವುದು ಆಯ್ಕೆ ಪ್ರಕ್ರಿಯೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಆಡಂಬರ, ಅದ್ಧೂರಿ ದಸರಾ ಸೀಮಿತವೇ?
ಮೈಸೂರು ದಸರಾ ರಾಜ್ಯದ ಪರಂಪರೆ, ಇತಿಹಾಸ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ದೇಶ-ವಿದೇಶಗಳ ಜನರಿಗೆ ಪರಿಚಯಿಸುವ ಪ್ರಮುಖ ವೇದಿಕೆ. ಇಂತಹ ಮಹೋತ್ಸವದಲ್ಲಿ ಜಿಲ್ಲೆಗಳ ವೈಶಿಷ್ಟ್ಯವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ಮಲೆನಾಡಿಗರ ಅಭಿಪ್ರಾಯವಾಗಿದೆ. ಆದರೆ, ಈ ಬಾರಿ ಸ್ತಬ್ಧಚಿತ್ರಗಳಿಗಿಂತ ಆಡಂಬರ ಮತ್ತು ಅದ್ಧೂರಿ ಆಚರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.ಮೈಸೂರು ದಸರಾ ಜಿಲ್ಲೆಗಳ ವೈಶಿಷ್ಠತೆ ಪ್ರದರ್ಶನದ ವೇದಿಕೆಚಿಕ್ಕಮಗಳೂರು ಜಿಲ್ಲೆ ಕೇವಲ ಪ್ರವಾಸಿ ತಾಣಗಳು ಮತ್ತು ಕಾಫಿ ಬೆಳೆಗಳಿಗೆ ಮಾತ್ರ ಪ್ರಸಿದ್ಧವಾಗಿಲ್ಲ. ಸಾಹಿತ್ಯ, ಪರಿಸರ, ಐತಿಹಾಸಿಕ ಘಟನೆಗಳು, ಸ್ವಾತಂತ್ರ್ಯ ಹೋರಾಟದ ನೆನಪುಗಳು, ಜನಪದ ಸಂಸ್ಕೃತಿ ಹಾಗೂ ಮಲೆನಾಡಿನ ವಿಶಿಷ್ಟ ಜೀವನ ಶೈಲಿಯೂ ಜಿಲ್ಲೆಯ ಗುರುತಿನ ಭಾಗವಾಗಿವೆ. ಇಂತಹ ವೈವಿಧ್ಯಮಯ ವಿಷಯವನ್ನು ರಾಜ್ಯಮಟ್ಟದಲ್ಲಿ ಪರಿಚಯಿ ಸಲು ಮೈಸೂರು ದಸರಾ ಉತ್ತಮ ಅವಕಾಶವಾಗಿದೆ. ಸ್ತಬ್ಧಚಿತ್ರ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿ, ಜಿಲ್ಲೆಗಳ ಇತಿ ಹಾಸ ಮತ್ತು ಸಾಂಸ್ಕೃತಿಕ ಕೊಡುಗೆಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯ ಮಲೆನಾಡಿಗರಿಂದ ವ್ಯಕ್ತವಾಗಿದೆ.
--ಕೋಟ್---ಈ ಬಾರಿ ಮೈಸೂರು ದಸರಾ ಮಹೋತ್ಸವದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯಿಂದ ಮಹಾತ್ಮ ಗಾಂಧಿಜಿ ಅವರು ಜಿಲ್ಲೆಗೆ ಭೇಟಿ ನೀಡಿ 100 ವರ್ಷ ತುಂಬಿದ ಸವಿನೆನಪಿನ ಭಾಗವಾಗಿ ಸ್ತಬ್ಧ ಚಿತ್ರದ ಪ್ರಸ್ತಾವನೆ ಯನ್ನು ಸಲ್ಲಿಸಲಾಗಿತ್ತು. 15 ಜಿಲ್ಲೆಗೆ ಮಾತ್ರ ಅವಕಾಶ ನೀಡುವುದಾಗಿ ಅನುಮೋದನೆ ಸಿಕ್ಕಿಲ್ಲ.
- ರಾಜಗೋಪಾಲ್, ಮುಖ್ಯ ಯೋಜನಾಧಿಕಾರಿ, ಚಿಕ್ಕಮಗಳೂರು ಜಿಪಂಫೋಟೋ
2025ರ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಂಡ ಚಿಕ್ಕಮಗಳೂರಿನ ಭದ್ರಾಬಾಲ್ಯ ಸ್ತಬ್ಧ ಚಿತ್ರ.