ಸಾರಾಂಶ
ನಗರದ ಬಸವೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೃಷ್ಣ ಮತ್ತು ರಾಧೆಯ ವೇಷಭೂಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ವಿ.ಮಂಜುನಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಎಲ್ಲಾ ಮಕ್ಕಳು ಲವಲವಿಕೆಯಿಂದ ಭಾಗವಹಿಸಿದ್ಧಾರೆ. ಎಲ್ಲರಲ್ಲೂ ಹೆಚ್ಚು ಉತ್ಸಾಹವಿರುವುದು ಕಂಡು ಬಂದಿದೆ ಎಂದರು.
ಚಳ್ಳಕೆರೆ: ನಗರದ ಬಸವೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೃಷ್ಣ ಮತ್ತು ರಾಧೆಯ ವೇಷಭೂಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷ ವಿ.ಮಂಜುನಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಎಲ್ಲಾ ಮಕ್ಕಳು ಲವಲವಿಕೆಯಿಂದ ಭಾಗವಹಿಸಿದ್ಧಾರೆ. ಎಲ್ಲರಲ್ಲೂ ಹೆಚ್ಚು ಉತ್ಸಾಹವಿರುವುದು ಕಂಡು ಬಂದಿದೆ ಎಂದರು.
ಕಾರ್ಯದರ್ಶಿ ಕೋಟೆ ಜಯಣ್ಣ ಮಾತನಾಡಿ, ಪ್ರತಿವರ್ಷವೂ ನಮ್ಮ ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕೃಷ್ಣ, ರಾಧೆಯ ವೇಷದಲ್ಲಿ ಕಂಗೊಳಿಸುತ್ತಿದ್ಧಾರೆ. ಸಂಸ್ಥೆಯ ವತಿಯಿಂದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.ವೀರಶೈವ ವಿದ್ಯಾನಿಲಯದ ಅಧ್ಯಕ್ಷ ಸತೀಶ್‌ಬಾಬು, ಕಾರ್ಯದರ್ಶಿ ಎನ್.ಟಿ.ಪ್ರಕಾಶ್, ನಿರ್ದೇಶಕಿ ಮಂಜುಳಾ ನಾಗರಾಜ್, ಶಿಲ್ಪಪ್ರಕಾಶ್, ಲೋಕಮಾನ್ಯ, ವನಜಾಕ್ಷಿ, ಸುಲೋಚನಾ, ಮುಖ್ಯಶಿಕ್ಷಕಿ ಮಧುರ, ಬಿ.ಶ್ರೀನಿವಾಸ್, ಶಿಕ್ಷಕರಾದ ಭಾರತಾಂಭೆ, ಸಿಂಧುಜಾ, ಯಶೋಧಮ್ಮ, ಗೀತಾ, ಜ್ಯೋತಿ, ತಿಪ್ಪೇಸ್ವಾಮಿ, ಗಂಡಯ್ಯ, ನಿಖಿಲ್, ವಿಜಯಲಕ್ಷ್ಮಿ ಮುಂತಾದವರು ಹಾಜರಿದ್ದರು.