ಶ್ರೀ ಕೃಷ್ಣನ ವೇಷ ಧರಿಸಿ ನಲಿದಾಡಿದ ಚಿಣ್ಣರು

| Published : Aug 18 2025, 12:00 AM IST

ಸಾರಾಂಶ

ದಾವಣಗೆರೆ ನಗರದ ಕೆ.ಬಿ. ಬಡಾವಣೆಯ ವಿದ್ಯಾ ಸಾಗರ ಶಾಲೆಯಲ್ಲಿ ಶನಿವಾರ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಅರ್ಥಪೂರ್ಣವಾಗಿತ್ತು. ತುಂಟ, ಪುಟಾಣಿ ಮಕ್ಕಳು ಶ್ರೀಕೃಷ್ಣ, ರಾಧೆ, ರುಕ್ಮೀಣಿ, ಕಾಳಿಂಗ ಸರ್ಪ, ಬಲರಾಮ ಸೇರಿದಂತೆ ಶ್ರೀಕೃಷ್ಣ ಪರಮಾತ್ಮನ ಬದುಕಿನಲ್ಲಿ ಬರುವ ಪಾತ್ರಧಾರಿಗಳ ವೇಷಧಾರಿಗಳಲ್ಲಿ ಒಬ್ಬರಿಗಿಂತ ಒಬ್ಬರು ಸುಂದರವಾಗಿ ಎಲ್ಲರ ಗಮನ ಸೆಳೆದರು.

- ಜನ್ಮಾಷ್ಠಮಿ ಸೊಬಗು: ತುಂಟ ಮಕ್ಕಳ ಅದ್ಭುತ ನೃತ್ಯಕ್ಕೆ ಪೋಷಕರು ಖುಷ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಕೆ.ಬಿ. ಬಡಾವಣೆಯ ವಿದ್ಯಾ ಸಾಗರ ಶಾಲೆಯಲ್ಲಿ ಶನಿವಾರ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಅರ್ಥಪೂರ್ಣವಾಗಿತ್ತು. ತುಂಟ, ಪುಟಾಣಿ ಮಕ್ಕಳು ಶ್ರೀಕೃಷ್ಣ, ರಾಧೆ, ರುಕ್ಮೀಣಿ, ಕಾಳಿಂಗ ಸರ್ಪ, ಬಲರಾಮ ಸೇರಿದಂತೆ ಶ್ರೀಕೃಷ್ಣ ಪರಮಾತ್ಮನ ಬದುಕಿನಲ್ಲಿ ಬರುವ ಪಾತ್ರಧಾರಿಗಳ ವೇಷಧಾರಿಗಳಲ್ಲಿ ಒಬ್ಬರಿಗಿಂತ ಒಬ್ಬರು ಸುಂದರವಾಗಿ ಎಲ್ಲರ ಗಮನ ಸೆಳೆದರು. ಮಕ್ಕಳ ವೇಷ ಕಂಡು ಪೋಷಕರು ಪುಳಕಿತರಾದರು. ಅವರ ತುಂಟಾಟದ ಜೊತೆಗೆ ಡ್ಯಾನ್ಸ್‌ಗೆ ಎಲ್ಲರೂ ಫಿದಾ ಆದರು. ಅಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸೊಬಗು ಧರೆಗಿಳಿದಂತಿತ್ತು.

ಶಾಲೆ ಮುಖ್ಯಸ್ಥ ಭಗತ್ ಸಿಂಗ್ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳು ಡಾಕ್ಟರ್, ಎಂಜಿನಿಯರ್, ಸಾಫ್ಟ್ ವೇರ್ ಎಂಜಿನಿಯರ್ ಸೇರಿದಂತೆ ಅತ್ಯುನ್ನತ ಹುದ್ದೆಗಳಿಗೆ ಮಕ್ಕಳು ಹೋಗಬೇಕೆಂಬುದು ಪೋಷಕರ ಬಯಕೆ ಸಹಜ. ಇದು ತಪ್ಪಲ್ಲ. ಆದರೆ, ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಮೌಲ್ಯಗಳು ಕಡಿಮೆಯಾಗುತ್ತಿದೆ. ಆದ್ದರಿಂದ ಮಕ್ಕಳಲ್ಲಿ ಮಾನವೀಯ ಗುಣಗಳು, ಭಗವದ್ಗೀತೆ, ಇತಿಹಾಸ ಪುರುಷರ ಆದರ್ಶಗಳನ್ನು ತಿಳಿಸಿ, ಬೆಳೆಸುವ ಅವಶ್ಯಕತೆ ತುಂಬಾನೇ ಇದೆ ಎಂದರು.

ಪ್ರಿ-ನರ್ಸರಿ, ಎಲ್‌ಕೆಜಿ, ಯುಕೆಜಿ ಮಕ್ಕಳು ಪ್ರಸ್ತುತಪಡಿಸಿದ ಶ್ರೀಕೃಷ್ಣ ಕುರಿತಾದ ನೃತ್ಯಗಳು ಮನಮೋಹಕವಾಗಿದ್ದವು. ಶ್ರೀಕೃಷ್ಣನ ತುಂಟಾಟಗಳು, ಬೆಣ್ಣೆ ಕದ್ದು ತಿನ್ನುವ ತುಂಟಾಟ, ಕಂಸವಧೆ ಮಾಡುವುದು, ಶ್ರೀಕೃಷ್ಣ ಹುಟ್ಟಿದಾಗ ಮಗನ ಉಳಿಸಿಕೊಳ್ಳಲು ಕಷ್ಟಪಡುವ ತಂದೆ- ತಾಯಿ ಪಾತ್ರಗಳು ಎಲ್ಲರ ಮನಸೂರೆಗೊಂಡವು.

ಕಾರ್ಯಕ್ರಮದಲ್ಲಿ ಶಾಲೆ ಪ್ರಾಚಾರ್ಯೆ ಸತ್ಯವತಿ, ಶಿಕ್ಷಕಿಯರಾದ ರಮಾ ದೀಕ್ಷಿತ್, ವಿದ್ಯಾ, ನಾಗರತ್ನ, ಪುಷ್ಪಾ ಮತ್ತು ಇತರೆ ಶಿಕ್ಷಕಿಯರು, ಮಕ್ಕಳು, ಪೋಷಕರು ಭಾಗವಹಿಸಿದ್ದರು.

- - -

-16ಕೆಡಿವಿಜಿ43, 44.ಜೆಪಿಜಿ:

ದಾವಣಗೆರೆಯ ವಿದ್ಯಾಸಾಗರ ಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ವಿವಿಧ ವೇಷ ಪೋಷಾಕು ಧರಿಸಿರುವುದು.