ಆನೆಕನ್ನಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀ ರಾಮಾನುಜನ್‌ರವರ ಜನ್ಮದಿನಾಚರಣೆ, ಮಕ್ಕಳ ಸಂತೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯ ಗಣಿತ ಶಿಕ್ಷಕಿ ಉಷಾರಾಣಿ ಅವರು ಕಾರ್ಯಕ್ರಮದ ಸಿದ್ಧತೆಯನ್ನು ಮಾಡಿಕೊಂಡು ಉತ್ತಮವಾಗಿ ಆಯೋಜಿಸಿದ್ದಾರೆ ಎಂದು ಶಿಕ್ಷಕಿಯನ್ನು ಹಾಗೂ ಬಹುಮಾನ ವಿತರಣೆಗೆ ಧನ ಸಹಾಯ ಮಾಡಿದ ದಾಸೇಗೌಡನ ಕೊಪ್ಪಲು ಶಾಲೆಯ ಮುಖ್ಯ ಶಿಕ್ಷಕ ಫಣೀಶ್‌ರನ್ನು ಅಭಿನಂದಿಸಿದರು. ಶಿಕ್ಷಕರ ಮುಖಾಂತರ ಚೆನ್ನಾಗಿ ಕಲಿತು ಮುಂದೆ ಗಣಿತ ಕಬ್ಬಿಣದ ಕಡಲೆಯಲ್ಲ ಎಂಬುದನ್ನು ಸುಳ್ಳೆಂದು ನಿರೂಪಿಸಿ, ನೀವು ಸಹ ಮಹಾನ್ ಗಣಿತಜ್ಞರಾಗಿ ಎಂದು ಶಾಲೆಯ ಶಿಕ್ಷಕಿ ಮಮತಾ ಕೆ.ಎಂ. ಹಾರೈಸಿದರು.

ಹೊಳೆನರಸೀಪುರ : ಮಾನವ ತನ್ನ ಬದುಕಿನುದ್ದಕ್ಕೂ ಗಣಿತವನ್ನು ಕಲಿತು, ಜಾಣ್ಮೆಯಿಂದ ವ್ಯವಹರಿಸಿ, ಜೀವನ ನಡೆಸಬೇಕಿದೆ. ಜತೆಗೆ ಗಣಿತವಿಲ್ಲದೆ ಹಣಕಾಸಿನ ವ್ಯವಹಾರ ಸಾಧ್ಯವಿಲ್ಲ. ಶಿಕ್ಷಕರ ಮುಖಾಂತರ ಚೆನ್ನಾಗಿ ಕಲಿತು ಮುಂದೆ ಗಣಿತ ಕಬ್ಬಿಣದ ಕಡಲೆಯಲ್ಲ ಎಂಬುದನ್ನು ಸುಳ್ಳೆಂದು ನಿರೂಪಿಸಿ, ನೀವು ಸಹ ಮಹಾನ್ ಗಣಿತಜ್ಞರಾಗಿ ಎಂದು ಶಾಲೆಯ ಶಿಕ್ಷಕಿ ಮಮತಾ ಕೆ.ಎಂ. ಹಾರೈಸಿದರು.ತಾಲೂಕಿನ ಆನೆಕನ್ನಂಬಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀ ರಾಮಾನುಜನ್‌ರವರ ಜನ್ಮದಿನಾಚರಣೆ, ಮಕ್ಕಳ ಸಂತೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯ ಗಣಿತ ಶಿಕ್ಷಕಿ ಉಷಾರಾಣಿ ಅವರು ಕಾರ್ಯಕ್ರಮದ ಸಿದ್ಧತೆಯನ್ನು ಮಾಡಿಕೊಂಡು ಉತ್ತಮವಾಗಿ ಆಯೋಜಿಸಿದ್ದಾರೆ ಎಂದು ಶಿಕ್ಷಕಿಯನ್ನು ಹಾಗೂ ಬಹುಮಾನ ವಿತರಣೆಗೆ ಧನ ಸಹಾಯ ಮಾಡಿದ ದಾಸೇಗೌಡನ ಕೊಪ್ಪಲು ಶಾಲೆಯ ಮುಖ್ಯ ಶಿಕ್ಷಕ ಫಣೀಶ್‌ರನ್ನು ಅಭಿನಂದಿಸಿದರು. ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳ ವ್ಯವಹಾರಿಕ ಜ್ಞಾನ ಹಾಗೂ ರಸಪ್ರಶ್ನೆಯಲ್ಲಿ ವಿದ್ಯಾರ್ಥಿಗಳ ಜಾಣ್ಮೆಯನ್ನು ಗ್ರಾಮಸ್ಥರು ಪ್ರಶಂಸಿದರು. ಶಾಲೆಯ ಮುಖ್ಯ ಶಿಕ್ಷಕ ಡಿ.ಟಿ.ವೆಂಕಟೇಶ್, ಸಹ ಶಿಕ್ಷಕರಾದ ಶಿವಣ್ಣ, ಉಷಾರಾಣಿ, ಲೋಕೇಶ್, ಮುಕ್ಕನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಶಿವಣ್ಣ, ಶಿಕ್ಷಣ ಎಸ್‌ಡಿಎಂಸಿ ಸದಸ್ಯೆ ಲಕ್ಷ್ಮಿ, ಅಶ್ವಿನಿ, ರಮೇಶ್ ಹಾಗೂ ಸಹಾಯಕರಾದ ಗೌರಮ್ಮ, ರಂಜಿತ, ಕಾವ್ಯ ಹಾಗೂ ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.