ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ಅಭಿಯಾನದಲ್ಲಿ ಕರ್ನಾಟಕ ಮಾದಾರ ಮಹಾಸಭಾ ವಿಜಯನಗರ ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ಪಾಲ್ಗೊಂಡಿದ್ದರು.

ಕೂಡ್ಲಿಗಿ: ಎಲ್ಲ ಸಮುದಾಯಗಳ ಜತೆ ಸಹೋದರತ್ವ ಹೊಂದುವ ಜತೆಗೆ ಮಾದಿಗ ಸಮುದಾಯದ ಅಭಿವೃದ್ಧಿ ಹಾಗೂ ಸಮುದಾಯದ ಮಕ್ಕಳಿಗೆ ಐಎಎಸ್, ಕೆಎಎಸ್ ಸೇರಿ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು ತೆರೆಯಬೇಕಾಗಿದೆ ಎಂದು ಕರ್ನಾಟಕ ಮಾದಾರ ಮಹಾಸಭಾ ವಿಜಯನಗರ ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ಮಾದಾರ ಮಹಾಸಭಾ ಸದಸ್ಯತ್ವ ಅಭಿಯಾನದಲ್ಲಿ ಅವರು ಮಾತನಾಡಿದರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಮಾದಿಗ ಸಮುದಾಯದ ಪ್ರಗತಿಗೆ ಸಂಘಟನೆ ಮುಖ್ಯವಾಗಿದ್ದು, ಆ ಮೂಲಕ ಸಮುದಾಯದ ಏಳ್ಗೆಗೆ ಶ್ರಮಿಸುವ ಅಗತ್ಯವಿದೆ ಎಂದು ಹೇಳಿದರು.

ಮಾದಾರ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಹಡಗಲಿ ಪೂಜಪ್ಪ ಮಾತನಾಡಿ, ಪರಿಶಿಷ್ಟ ಜಾತಿಯ ೧೦೧ ಪಂಗಡಗಳಲ್ಲಿ ಅತ್ಯಂತ ಹಿಂದುಳಿದಿರುವುದು ಮಾದಿಗ ಸಮುದಾಯವಾಗಿದೆ. ಪಕ್ಷಾತೀತವಾಗಿ ಕರ್ನಾಟಕ ಮಾದಾರ ಮಹಾಸಭಾ ಸಂಘಟನೆಯಡಿ ಮಾದಿಗ ಸಮುದಾಯ ಒಗ್ಗಟ್ಟಾಗಬೇಕಾಗಿದೆ ಎಂದು ಹೇಳಿದರು.

ಮಹಾಸಭಾ ರಾಜ್ಯ ಸಮಿತಿ ಸದಸ್ಯ ಪುತ್ರೇಶ್, ಜಿಲ್ಲಾ ಕಾರ್ಯದರ್ಶಿ ಕೊಟ್ಟೂರಿನ ಬದ್ದಿ ಮರಿಸ್ವಾಮಿ, ಕೂಡ್ಲಿಗಿ ತಾಲೂಕು ಅಧ್ಯಕ್ಷ ಸುಂಕದಕಲ್ಲು ಸಿದ್ದಪ್ಪ, ಗುಡೇಕೋಟೆ ವಿಶಾಲಾಕ್ಷಿ ರಾಜಣ್ಣ, ಜಿಲ್ಲಾ ಖಜಾಂಚಿ ಡಿ.ಎಚ್. ದುರುಗೇಶ್, ಮುಖಂಡರಾದ ಬಂಡೆ ರಾಘವೇಂದ್ರ, ಜುಮ್ಮೋಬನಹಳ್ಳಿ ಹೊನ್ನೂರಪ್ಪ ಮಾತನಾಡಿದರು. ಹೊಸಪೇಟೆ ತಾಲೂಕು ಕಾರ್ಯದರ್ಶಿ ಜೆ. ಶಿವಕುಮಾರ್, ಕಲ್ಲಹಳ್ಳಿ ಎಚ್. ಬಸಪ್ಪ, ಹಿರೇಹೆಗ್ಡಾಳ್ ಅಕ್ಷಯ್, ಹರಪನಹಳ್ಳಿಯ ಮತ್ತಿಹಳ್ಳಿ ರಾಮಣ್ಣ, ಎ. ನಾಗೇಂದ್ರಪ್ಪ, ಕೊಲ್ಲಾರಪ್ಪ, ತಿಮ್ಮನಹಳ್ಳಿ ಬಸವರಾಜ, ಪಾಲಪ್ಪ, ಅಮ್ಮನಕೆರೆ ತಿಪ್ಪೇಸ್ವಾಮಿ ಕೆಂಚಮಲ್ಲನಹಳ್ಳಿ ಓಬಳೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಹಮ್ಮದ್ ಜಿಲಾನ್, ಪಪಂ ಮಾಜಿ ಸದಸ್ಯ ಶುಕೂರ್ ಇತರರಿದ್ದರು.