ಮಕ್ಕಳು ಪರೀಕ್ಷೆ ಚೆನ್ನಾಗಿ ಬರೆದು ಶಾಲೆ ಮತ್ತು ಪಾಲಕರಿಗೆ ಕೀರ್ತಿ ತರಬೇಕು. ಆಟದ ಜತೆಗೆ ಪಾಠಕ್ಕೂ ಮಹತ್ವ ನೀಡಬೇಕೆಂದರು.

ಗಂಗಾವತಿ: ಸಮೀಪದ ವಡ್ಡರಹಟ್ಟಿ ಕ್ಯಾಂಪಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025.26 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ಎಸ್ ಡಿಎಂಸಿ ಅಧ್ಯಕ್ಷ ದುರಗಪ್ಪ ನಡುಲಮನಿ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳು ಸಮಯ ವ್ಯರ್ಥ ಮಾಡದೆ ಶಿಕ್ಷಣಕ್ಕೆ ಒತ್ತು ನೀಡಿ, ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಸಮಯ ಮೀಸಲಿಡಿ, ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಗಳ ವಿಕಸನಕ್ಕೆ ಬುನಾದಿಯಾಗಿದೆ. ಪ್ರಾಥಮಿಕ ಹಂತದಲ್ಲಿ ನೀವು ಕಲಿತ ಶಿಕ್ಷಣ ಮುಂದಿನ ಉನ್ನತ ಶಿಕ್ಷಣಕ್ಕೆ ಅಡಿಪಾಯವಾಗಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯೋಪಾಧ್ಯಯ ಚಾಂದಪಾಷ, ಮಕ್ಕಳು ಪರೀಕ್ಷೆ ಚೆನ್ನಾಗಿ ಬರೆದು ಶಾಲೆ ಮತ್ತು ಪಾಲಕರಿಗೆ ಕೀರ್ತಿ ತರಬೇಕು. ಆಟದ ಜತೆಗೆ ಪಾಠಕ್ಕೂ ಮಹತ್ವ ನೀಡಬೇಕೆಂದರು.

ಇದೇ ಸಂದರ್ಭದಲ್ಲಿ ಶಾಲೆಗೆ ದೇಣಿಗೆ ನೀಡಿದ ಮುರಳಿ ಕೃಷ್ಣ ಸಂಕ್ರಾಂತಿ, ಗೋಪಾಲಕೃಷ್ಣ ಸಂಕ್ರಾಂತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುಧಾಕರ್, ವೆಂಕಟೇಶರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುದುಕಪ್ಪ ಗಡ್ಡಿ, ರಾಮಣ್ಣ ಬಳ್ಳಾರಿ, ವೆಂಕಟೇಶ್ ನಾಯಕ್, ಹನುಮಂತಪ್ಪ, ಬಿ.ಆರ್.ಜೋಶಿ, ವಿಜಯಕುಮಾರ್, ಕೃಷ್ಣ, ಸುರೇಶ್, ಪೀರ್ ಮೊಹಮ್ಮದ್, ಹುಸೇನಪ್ಪ ಬಂಡೆ, ಪ್ರಿಯದರ್ಶಿನಿ, ನಂದಿನಿ ಖಾಸಿಂಸಾಬ್, ನಾಗಯ್ಯ ಸ್ವಾಮಿ, ರಾಜಾಸಾಬ್, ಮೈಮುದಾ ಬೇಗಂ, ಮತ್ತು ಎಲ್ಲ ಶಿಕ್ಷಕರು ಭಾಗವಹಿಸಿದ್ದರು.