ಸರ್ಕಾರಿ ಶಾಲೆಗಳ ಮಕ್ಕಳು ಇಂಗ್ಲೀಷ್ ನಿಂದ ವಂಚಿತರಾಗಬಾರದು: ಕೆ.ವಿ.ಸಾಜು

| Published : Aug 04 2025, 11:45 PM IST

ಸರ್ಕಾರಿ ಶಾಲೆಗಳ ಮಕ್ಕಳು ಇಂಗ್ಲೀಷ್ ನಿಂದ ವಂಚಿತರಾಗಬಾರದು: ಕೆ.ವಿ.ಸಾಜು
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಸರ್ಕಾರಿ ಶಾಲೆ ಮಕ್ಕಳು ಇಂಗ್ಲೀಷ್ ನಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಸರ್ಕಾರ 1 ನೇ ತರಗತಿಯಲ್ಲಿ ಇಂಗ್ಲೀಷ್ ಪ್ರಾರಂಭಿಸಿರುವುದು ಸಂತಸದ ವಿಷಯ ಎಂದು ಕೆಡಿಪಿ ಸದಸ್ಯ ಹಾಗೂ ಗುಬ್ಬಿಗಾ ಗ್ರಾಪಂ ಸದಸ್ಯ ಕೆ.ವಿ.ಸಾಜು ತಿಳಿಸಿದರು.

- ಈಚಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿಗೆ ಆಂಗ್ಲ ಮಾದ್ಯಮ ಪ್ರಾರಂಭ

ಕನ್ನಡಪ್ರಭ ವರ್ತೆ, ನರಸಿಂಹರಾಜಪುರ

ಸರ್ಕಾರಿ ಶಾಲೆ ಮಕ್ಕಳು ಇಂಗ್ಲೀಷ್ ನಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಸರ್ಕಾರ 1 ನೇ ತರಗತಿಯಲ್ಲಿ ಇಂಗ್ಲೀಷ್ ಪ್ರಾರಂಭಿಸಿರುವುದು ಸಂತಸದ ವಿಷಯ ಎಂದು ಕೆಡಿಪಿ ಸದಸ್ಯ ಹಾಗೂ ಗುಬ್ಬಿಗಾ ಗ್ರಾಪಂ ಸದಸ್ಯ ಕೆ.ವಿ.ಸಾಜು ತಿಳಿಸಿದರು.

ಸೋಮವಾರ ಬಿ.ಎಚ್.ಕೈಮರದ ಈಚಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿಗೆ ಇಂಗ್ಲೀಷ್ ಮಾದ್ಯಮ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಂದಿನ ವರ್ಷಗಳಲ್ಲಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಂಗ್ಲೀಷ್ ಅವಶ್ಯಕತೆಇದೆ. ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಕ್ಕಳು ಪರಿಣತರಾದರೆ ಭವಿಷ್ಯದಲ್ಲಿ ಅನುಕೂಲವಾಗಬಹುದು ಎಂದರು.

ಶಿಕ್ಷಣ ಇಲಾಖೆ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವ್ಯಾ ನಾಯಕ್ ಮಾತನಾಡಿ, ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮ ರೂಪಿಸುತ್ತಿದೆ. ಇದರಲ್ಲಿ 1 ನೇ ತರಗತಿಗೆ ಇಂಗ್ಲೀಷ್ ಮಾದ್ಯಮ ಸೇರಿದೆ. ವಿಶೇಷ ಎಂದರೆ ತಾಲೂಕಿನಲ್ಲಿ 1 ನೇ ತರಗತಿಯಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭಿಸಿರುವುದು ಈಚಿಕೆರೆ ಸರ್ಕಾರಿ ಶಾಲೆ ಪ್ರಥಮವಾಗಿದೆ ಎಂದರು.

ಅತಿಥಿಯಾಗಿದ್ದ ಈಚಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆ ಎಸ್.ಡಿಎಂಸಿ ಮಾಜಿ ಅಧ್ಯಕ್ಷ ಎಂ.ವಿ.ರಾಜೇಂದ್ರ ಕುಮಾರ್ ಮಾತನಾಡಿ, ಇಂದಿನ ಆಧುನಿಕ ಕಾಲದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಇಂಗ್ಲೀಷ್ ಬಳಸುತ್ತಿರುವುದರಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ಇಂಗ್ಲೀಷ್ ಭಾಷೆಗೆ ಒತ್ತು ನೀಡುವುದು ಅತಿ ಅವಶ್ಯಕ. ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಸರ್ಕಾರಿ ಶಾಲೆ ಮಕ್ಕಳು ಪೈಪೋಟಿ ನೀಡಬೇಕಾದರೆ ಇಂಗ್ಲೀಷ್ ಭಾಷೆ ಕಲಿಯಬೇಕಾಗಿದೆ. ಈಗ ಸರ್ಕಾರಿ ಶಾಲೆಯಲ್ಲಿ ಮಾತೃ ಭಾಷೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ಒಟ್ಟಿಗೆ ಕಲಿಯಲು ಅವಕಾಶ ಸಿಕ್ಕಿದೆ ಎಂದರು.

ಶಾಲಾ ಎಸ್.ಡಿಎಂಸಿ ಅಧ್ಯಕ್ಷ ರಮಾಕಾಂತ್ ಉದ್ಘಾಟಿಸಿದರು. ಸಭೆಯಲ್ಲಿ ಶಿಕ್ಷಣ ಸಂಯೋಜಕ ರಂಗಪ್ಪ, ಗುಬ್ಬಿಗಾ ಗ್ರಾಮ ಪಂಚಾಯಿತಿ ಸದಸ್ಯ ವಸಂತ ಕೋಟ್ಯಾನ್, ಬಿಐಇಆರ್ ಟಿ ತಿಮ್ಮೇಶ್, ಸಿಆರ್ ಪಿ ಅನಂತಪ್ಪ, ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ , ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಕುಮಾರಿ, ರೇಖಾ, ಸಹ ಶಿಕ್ಷಕರಾದ ರೇಖಾ, ವಾಣಿ, ಆನಿಯಮ್ಮ,ಪುಷ್ಪ ಇದ್ದರು.