ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ

| Published : Sep 30 2025, 12:00 AM IST

ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ 16ನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಸೋಮವಾರ ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.

- ವಿಷ್ಣುರೂಪಿಣಿಯಾಗಿ, ಇಂದ್ರಾಣಿ ಯಾಗಿ ದೇವತೆಗಳಿಗೆ ದರ್ಶನ ನೀಡಿದ ದಿನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ 16ನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಸೋಮವಾರ ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.ನವರಾತ್ರಿ 8ನೇ ದಿನ ಆಶ್ವಯುಜ ಶುದ್ಧ ಸಪ್ತಮಿ ದುರ್ಗೆ ವಿಷ್ಣುರೂಪಿಣಿಯಾಗಿ, ಇಂದ್ರಾಣಿ ಯಾಗಿ ದೇವತೆಗಳಿಗೆ ದರ್ಶನ ನೀಡಿದ ದಿನವೆಂದು ಪುರಾಣದಲ್ಲಿ ಉಲ್ಲೇಖವಿದ್ದು, ಈ ದಿನ ಸರಸ್ವತಿ ಪೂಜಾ ದಿನ ವಾಗಿರುವುದದರಿಂದ ಪುಟ್ಟ ಮಕ್ಕಳಿಗೆ ಪ್ರಥಮವಾಗಿ ಅಕ್ಷರಾಭ್ಯಾಸ ಮಾಡಿಸಿದಲ್ಲಿ ಆ ಮಕ್ಕಳು ಸಿದ್ಧ, ಬುದ್ಧಿವಂತರಾಗಿ, ವಿದ್ಯಾ ಸಂಪನ್ನರಾಗಿ ಉತ್ತಮ ವ್ಯಕ್ತಿಗ ಳಾಗುತ್ತಾರೆ ಎಂಬ ನಂಬಿಕೆ ಇದೆ.ಈ ಹಿನ್ನೆಲೆಯಲ್ಲಿ ಸೋಮವಾರ ವಿಶೇಷ ಅಕ್ಷರಾಭ್ಯಾಸ ಕಾರ್ಯ ನಡೆಸಿದ್ದು, ಒಂಬತ್ತು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸ ಲಾಯಿತು. ಅಕ್ಷರಾಭ್ಯಾಸದ ಪ್ರಯುಕ್ತ ದೇವಿಯನ್ನು ಶಾರದಾ ಮಾತೆಯ ರೂಪದಲ್ಲಿ ವಿಶೇಷ ಪುಷ್ಪಗಳಿಂದ ಅಲಂಕರಿಸ ಲಾಗಿತ್ತು. ಹಾಗೂ ವೀಣಾಪಾಣಿ ಶಾರದಾ, ಮೋಹಿನಿ ರೂಪಿಣಿ ಪೂಜಾ ಪಾರಾಯಣ ನಡೆಸಲಾಯಿತು. ಅರ್ಚಕ ಸುಬ್ರಹ್ಮಣ್ಯಭಟ್ ಮತ್ತು ಸಂಗಡಿಗರು ಅಕ್ಷರಾಭ್ಯಾಸ ಕಾರ್ಯಕ್ರಮದ ಧಾರ್ಮಿಕ ವಿಧಿ ನೇತೃತ್ವ ವಹಿಸಿದ್ದರು. ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಖಜಾಂಚಿ ಭಾಸ್ಕರ್ ವೆನಿಲ್ಲಾ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಚೈತನ್ಯ ವೆಂಕಿ ಮತ್ತಿತರರು ಇದ್ದರು.-- (ಬಾಕ್ಸ್)--

ಇಂದು ದುರ್ಗಾ ಪೂಜಾ ಪಾರಾಯಣಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ನವರಾತ್ರಿ ಮಹೋತ್ಸವದ ಅಂಗವಾಗಿ ಸೆ.30ರ ಮಂಗಳವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಅಶ್ವರೋಹಿಣಿ ದುರ್ಗಾ ಪೂಜಾ ಪಾರಾಯಣ ಹಾಗೂ ಶ್ರೀದೇವಿಗೆ ವಿಶೇಷ ಹೂವಿನ ಪೂಜೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಆಹ್ವಾನಿತ ಕಲಾವಿದರಿಂದ ಭಕ್ತಿ ಗಾನಸುಧೆ ನಡೆಯಲಿದೆ. ಸಂಜೆ 6ರಿಂದ 7.45ರವರೆಗೆ ಭಕ್ತಾಧಿಗಳಿಂದ ಪೂಜಾ ಸೇವೆ, ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ 8ರಿಂದ ರೇಣುಕನಗರದ ವಿಘ್ನೇಶ್ವರ ಕಲಾ ಬಳಗದ ಹವ್ಯಾಸಿ ಕಲಾವಿದರಿಂದ ಬಿ.ಜಗದೀಶ್ಚಂದ್ರ ನಿರ್ದೇಶನದಲ್ಲಿ ಕೆರೆ ಚೌಡೇಶ್ವರಿ ಸರ್ಕಲ್ ಎಂಬ ನಾಟಕ ನಡೆಯಲಿದೆ.

೨೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ದುರ್ಗಾ ಸನ್ನಿಧಿಯಲ್ಲಿ ಸರಸ್ವತೀ ಪೂಜಾ ಅಂಗವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.