ಸಾರಾಂಶ
ರಕ್ಷಕರೊಂದಿಗೆ ಮಕ್ಕಳನ್ನು ಹೇಗೆ ಬೆಳೆಸಬೇಕು, ಶಿಕ್ಷಣ ಯಾವ ರೀತಿಯಲ್ಲಿ ಸಾಗಬೇಕು ಎನ್ನುತ್ತಾ ಹಲವಾರು ವಿಷಯಗಳ ಕುರಿತು ಮಾತನಾಡಿದರು.
ಮಂಗಳೂರು: ಇಸ್ಲಾಹುಲ್ ಇಸ್ಲಾಂ ಮದ್ರಸ ವಾಮಂಜೂರು ವತಿಯಿಂದ ಮಕ್ಕಳಿಗೆ ಮತ್ತು ರಕ್ಷಕರಿಗೆ ವಿಶೇಷ ತರಬೇತಿ ಶಿಬಿರ ಇತ್ತೀಚೆಗೆ ನಡೆಯಿತು. ತರಬೇತುದಾರರಾಗಿ ರಫೀಕ್ ಮಾಸ್ಟರ್ ಮಂಗಳೂರು ಅವರು ಪಾಲ್ಗೊಂಡರು. ಮಕ್ಕಳೊಂದಿಗೆ ಮಾತನಾಡುತ್ತಾ, ‘ಮ್ಮಲ್ಲಿ ಕಲಿಯುವ ಹುಚ್ಚು ಈಗಲೇ ಬೆಳೆಯಲಿ ಮತ್ತು ಆ ಕಿಚ್ಚು ಸದಾ ಇರಲಿ ಎನ್ನುತ್ತಾ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದರು. ರಕ್ಷಕರೊಂದಿಗೆ ಮಕ್ಕಳನ್ನು ಹೇಗೆ ಬೆಳೆಸಬೇಕು, ಶಿಕ್ಷಣ ಯಾವ ರೀತಿಯಲ್ಲಿ ಸಾಗಬೇಕು ಎನ್ನುತ್ತಾ ಹಲವಾರು ವಿಷಯಗಳ ಕುರಿತು ಮಾತನಾಡಿದರು. ಸ್ಥಳೀಯ ಮಸೀದಿಯ ಖತೀಬ್ ಮುಹಮ್ಮದ್ ಫಾಯಿಝ್ ಫಾಳಿಲಿ ಪ್ರಾರ್ಥನೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕ ಚಾಲನೆ ನೀಡಿದರು. ಜಮಾಅತ್ ಅಧ್ಯಕ್ಷ ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಶೀದ್ ಅಮಾನ್, ಇಸ್ಮಾಯಿಲ್, ಆಬೂಸ್ವಾಲಿಹ್ ಸೇರಿ ಹಲವರು ಉಪಸ್ಥಿತರಿದ್ದರು. ಪ್ರಿನ್ಸಿಫಾಲ್ ಜಅ್‌ಫರ್ ಸ್ವಾದಿಕ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))