ಮಕ್ಕಳು ಹಾಡುಗಾರಿಕೆ, ರಂಗಗೀತೆ, ಚಿತ್ರಕಲೆ, ಅಭಿನಯದಂತಹ ಗ್ರಾಮೀಣ ಸೂಗಡಿನ ಕಲೆಗಳನ್ನು ಸ್ವತಃ ರೂಡಿಸಿಕೊಂಡಿದ್ದು, ವೇದಿಕೆಯಲ್ಲಿ ಅವಕಾಶ ದೊರೆತರೆ ಪ್ರತಿಭೆ ಗುರುತಿಸಿ ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಲು ಸಾಧ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ದೇವಲಾಪುರ

ಮಕ್ಕಳು ವ್ಯಾಸಂಗದ ಜೊತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದರೆ ಪ್ರತಿಭೆ ಬೆಳಕಿಗೆ ಬರಲಿದೆ ಎಂದು ಹಿರಿಯ ಮುಖ್ಯ ಶಿಕ್ಷಕ ಮಂಜುನಾಥ್ ತಿಳಿಸಿದರು.

ನಾಗಮಂಗಲ ತಾಲೂಕು ದೇವಲಾಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹೋಬಳಿ ಮಟ್ಟದ ಕಲೋತ್ಸವದಲ್ಲಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ವೇದಿಕೆಯಲ್ಲಿ ಅವಕಾಶ ಕಲ್ಪಿಸಿದರೆ ಮಕ್ಕಳಲ್ಲಿ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಲಿದೆ ಎಂದರು.

ಮಕ್ಕಳು ಹಾಡುಗಾರಿಕೆ, ರಂಗಗೀತೆ, ಚಿತ್ರಕಲೆ, ಅಭಿನಯದಂತಹ ಗ್ರಾಮೀಣ ಸೂಗಡಿನ ಕಲೆಗಳನ್ನು ಸ್ವತಃ ರೂಡಿಸಿಕೊಂಡಿದ್ದು, ವೇದಿಕೆಯಲ್ಲಿ ಅವಕಾಶ ದೊರೆತರೆ ಪ್ರತಿಭೆ ಗುರುತಿಸಿ ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಲು ಸಾಧ್ಯವಾಗಲಿದೆ ಎಂದರು.

ಇಸಿಒ ಸಿದ್ದೇಶ್ ಮಾತನಾಡಿ, ಸೋಲು ಗೆಲುವುಗಳನ್ನು ಸಮಾನಾಗಿ ಸ್ವೀಕರಿಸಬೇಕು. ಸಾಂಸ್ಕೃತಿಕ ಪ್ರತಿಭೆಯಿಂದ ಒಂದಷ್ಟು ಕಲಿಕೆ ಹಾಗೂ ಉತ್ಸಾಹ ಮೈಗೂಡಿಸಿಕೊಳ್ಳುವುದರಿಂದ ಓದುವಿನಲ್ಲಿ ಆಸಕ್ತಿ ಹೆಚ್ಚಾಗಿ ಬೆಳೆಯುತ್ತಿದೆ ಎಂದರು.

ಸಮಾರಂಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಾಸು ಹಾಗೂ ಇಸಿಒ ಶಿವಕುಮಾರ್, ಹೋಬಳಿ ಪ್ರೌಢಶಾಲಾ ಶಿಕ್ಷಕರು ಮತ್ತು ಪತ್ರಕರ್ತ ದೇ. ರಾ ಜಗದೀಶ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.

ನೂತನ ತಹಸೀಲ್ದಾರ್ ಡಾ.ಸ್ಮಿತಾಗೆ ಅಭಿನಂದನೆ

ಮದ್ದೂರು:ತಾಲೂಕು ನೂತನ ತಹಸೀಲ್ದಾರ್ ಡಾ.ಸ್ಮಿತಾ ರಾಮು ಅಧಿಕಾರ ಸ್ವೀಕರಿಸಿದರು.

ಹಾಲಿ ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಸೋಮಶೇಖರ್ ಅವರ ಸ್ಥಾನಕ್ಕೆ ಡಾ.ಸ್ಮಿತಾ ರಾಮು ನೂತನ ತಹಸೀಲ್ದಾರ್ ಆಗಿ ಅಧಿಕಾರಿ ವಹಿಸಿಕೊಂಡರು.ಡಾ.ಸ್ಮಿತಾ ಅವರನ್ನು ಸೆನೆಟ್ ಸದಸ್ಯ ವಿ.ಕೆ.ಜಗದೀಶ್, ಕಂದಾಯ ಇಲಾಖೆ ಶಿರಸ್ತೇದಾರ್ ಉಮೇಶ್, ನೌಕರರ ಸಂಘದ ತಾಲೂಕ್ ಘಟಕದ ಅಧ್ಯಕ್ಷ ಮಂಜುನಾಥ್, ನಿರೀಕ್ಷಕರಾದ ರವೀಂದ್ರ, ಮೋಹನ್, ಮಹೇಂದ್ರ, ವಿಷಯ ನಿರ್ವಾಹಕ ನವೀನ ಹಾಗೂ ಕಚೇರಿಯ ಸಿಬ್ಬಂದಿ ಹೂಗುಚ್ಚ ನೀಡಿ ಸ್ವಾಗತಿಸಿ ಅಭಿನಂದಿಸಿದರು.