ಸಾರಾಂಶ
ಸಮಾಜ ಸೇವಾ ಕಾರ್ಯಗಳಲ್ಲಿ ಭಾರತ್ ಸ್ಕೌಟ್ಸ್, ಗೈಡ್ಸ್ ಪದಾಧಿಕಾರಿಗಳು ಉತ್ತಮವಾದ ಸೇವೆ ಮಾಡುತ್ತಿದ್ದು, ಈ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುತ್ತಿದೆ ಎಂದು ಪ್ರಾಂಶುಪಾಲ ಈರಪ್ಪನಾಯಕ ಡಿ.ಎಸ್. ತಿಳಿಸಿದರು.
ಕೊರಟಗೆರೆ: ಸಮಾಜ ಸೇವಾ ಕಾರ್ಯಗಳಲ್ಲಿ ಭಾರತ್ ಸ್ಕೌಟ್ಸ್, ಗೈಡ್ಸ್ ಪದಾಧಿಕಾರಿಗಳು ಉತ್ತಮವಾದ ಸೇವೆ ಮಾಡುತ್ತಿದ್ದು, ಈ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುತ್ತಿದೆ ಎಂದು ಪ್ರಾಂಶುಪಾಲ ಈರಪ್ಪನಾಯಕ ಡಿ.ಎಸ್. ತಿಳಿಸಿದರು. ತಾಲೂಕಿನ ಗೌರಗಾನಹಳ್ಳಿ ಗ್ರಾಮದ ಪೊಡಿಗೆರೆ ಶ್ರೀ ಲಕ್ಷೀರಂಗನಾಥಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಭಾರತ್ ಸ್ಕೌಟ್ಸ್, ಗೈಡ್ಸ್, ಮಧುಗಿರಿ ಜಿಲ್ಲಾ ಸಂಸ್ಥೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಎರಡು ದಿನಗಳ ನಿಪುಣ್ ಪರೀಕ್ಷಾ ಶಿಬಿರ ೨೦೨೩-೨೦೨೪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಕಲಿಕೆ ಜೊತೆಯಲ್ಲಿ ಕೌಶಲ್ಯ ತರಬೇತಿಯ ಅವಶ್ಯಕವಾಗಿದೆ ಭಾರತ್ ಸ್ಕೌಟ್ ಅಂಡ್ ಗೈಡ್ಸ್ನಲ್ಲಿ ರೇಂಜರ್ ಮತ್ತು ರೋವರ್ ಶಿಕ್ಷಣವು ಮೌಲ್ಯಾಧಾರಿತ ಸೇವೆಗೆ ಹೆಚ್ಚಿನ ಮಹತ್ವ ನೀಡುತ್ತದೆ. ಇಂತಹ ತರಬೇತಿಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ ಅವರಲ್ಲಿ ಮಾನವೀಯ ಗುಣಗಳು ಬೆಳೆಯುತ್ತವೆ. ಈ ಎರಡು ದಿನಗಳ ತರಬೇತಿ ಕಾರ್ಯಕ್ರಮಗಳಿಗೆ ಕೆಲವು ಸಹೃದಯ ವ್ಯಕ್ತಿಗಳ ಸಹಕಾರ ಹಾಗೂ ಉಪನ್ಯಾಸಕರ ಪರಿಶ್ರಮ ಸಾಕಷ್ಟಿದೆ ಎಂದರು.ಕಾನಿಪ ಸಂಘದ ತಾಲೂಕು ಅದ್ಯಕ್ಷ ಕೆ.ವಿ.ಪುರುಷೋತ್ತಮ ಮಾತನಾಡಿ, ಕಾಲೇಜಿಗಳಲ್ಲಿ ಗುಣಾತ್ಮಕ ಶಿಕ್ಷಣದ ಅವಶ್ಯಕವಾಗಿದೆ. ಇಂತಹ ತರಬೇತಿಗಳಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶ ಭಕ್ತಿ, ಸಮಾಜಿಕ ಕಳಕಳಿ ಮೂಡುತ್ತದೆ ಎಂದರು.ಶ್ರೀ ಲಕ್ಷೀರಂಗನಾಥ ಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ನಂಜಪ್ಪ ಮಾತನಾಡಿ, ಈ ಹಿಂದೆ ನಮ್ಮ ಕಾಲದಲ್ಲಿ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಕಲಿಕೆಗೆ ಸಾಧನೆಗೆ ಬಡತನದ ಬೇಗೆ ಕಾಡುತ್ತಿತ್ತು, ಅಂದಿನ ವಿದ್ಯಾರ್ಥಿಗಳ ಸಾಧನೆ ಮತ್ತು ಅವರ ಶ್ರಮ ಫಲಿಸಿಲ್ಲ. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎಂದರು.ವಿಎಸ್‌ಎಸ್‌ಎಸ್ ನಿರ್ದೇಶಕ ವಿನಯ್‌ಕುಮಾರ್, ಸಿಡಿಸಿ ಸದಸ್ಯ ದರ್ಶನ್‌ಬಾಲಾಜಿ, ಗ್ರಾಪಂ ಸದಸ್ಯ ಕೇಶವಮೂರ್ತಿ, ಲೋಕೇಶ್, ವೆಂಕಟರಾಜು, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ.ದೀಪಾ, ರೇಂಜರ್ ಲೀಡರ್ ಡಾ.ಚೈತಾಲಿ, ಡಾ.ತಿಪ್ಪೇಸ್ವಾಮಿ, ತರಬೇತುದಾರ ಗಣಪತಿ, ಕರಿಸಿದ್ದಪ್ಪ, ಕೃಷ್ಣಮೂರ್ತಿ, ಉಪನ್ಯಾಸಕರಾದ ಆರ್.ರಮೇಶ್, ರೂಪಾ, ಸಿದ್ದಗಂಗಯ್ಯ, ರಂಗನಾಥಮೂರ್ತಿ, ದಿವಾಕರ್, ನಾಗೇಂದ್ರಪ್ಪ, ಸರಳ, ದರ್ಶನ್, ಅಮಿತಾ, ಸಿಬ್ಬಂದಿ ಚಂದ್ರಶೇಖರ್ ಹಾಜರಿದ್ದರು.