ಸಾರಾಂಶ
ತುರುವೇಕೆರೆ: ಬಡ ಮಕ್ಕಳಿಗೆ ವಿದ್ಯಾರ್ಜನೆ ಮಾಡಿಸಬೇಕೆಂಬುದು ದಿ. ಡಾ.ವಿಷ್ಣುವರ್ಧನ್ ಉದ್ದೇಶವಾಗಿತ್ತು ಎಂದು ವಿಷ್ಣುವರ್ಧನ್ ಸೇನಾ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.
ತುರುವೇಕೆರೆ: ಬಡ ಮಕ್ಕಳಿಗೆ ವಿದ್ಯಾರ್ಜನೆ ಮಾಡಿಸಬೇಕೆಂಬುದು ದಿ. ಡಾ.ವಿಷ್ಣುವರ್ಧನ್ ಉದ್ದೇಶವಾಗಿತ್ತು ಎಂದು ವಿಷ್ಣುವರ್ಧನ್ ಸೇನಾ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.
ಇಲ್ಲಿಯ ಎನ್‌ಎಚ್‌ಪಿಎಸ್ ಶಾಲಾ ಆವರಣದಲ್ಲಿ ನಡೆದ ಡಾ.ವಿಷ್ಣುವರ್ಧನ್ ೭೪ನೇ ವರ್ಷದ ಜನ್ಮದಿನಾಚರಣೆ ಹಾಗೂ ಸರಸ್ವತಿ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ತಾಲೂಕಿನ ಹಲವಾರು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿ ಓದಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಸಲುವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕ ಕೃಷ್ಣಪ್ರಸಾದ್, ಶಾಲಾಭಿವೃದ್ಧಿ ಮಂಡಲಿಯ ಅಧ್ಯಕ್ಷ ಶಂಕರಪ್ಪ, ಚಿದಂಬರೇಶ್ವರ ಉಚಿತ ಗ್ರಂಥಾಲಯದ ಸಂಸ್ಥಾಪಕ ರೈಲ್ವೆ ರಾಮಚಂದ್ರು, ಡಾ.ವಿಷ್ಣುವರ್ಧನ್ ಸೇನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಭರತ್ ಕುಮಾರ್, ಕಾರ್ಯದರ್ಶಿ ಗಿರೀಶ್, ಶರತ್ ಕುಮಾರ್, ಮಂಜುನಾಥ್, ಪರಮೇಶ್, ಶಿಕ್ಷಕಿಯರಾದ ನೇತ್ರಾವತಿ, ಪುಷ್ಪವತಿ, ಸವಿತಾ ಉಪಸ್ಥಿತರಿದ್ದರು.