ಮಕ್ಕಳ ಸೃಜನಶೀಲತೆ ಪೋಷಣೆ ಅಗತ್ಯ : ಪಾಟೀಲ್

| Published : Feb 08 2024, 01:32 AM IST

ಸಾರಾಂಶ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಕಾರ ನೀಡುವುದೂ ಬಹು ಮುಖ್ಯ ಎಂದು ಕೊತ್ತಲ ಬಸವೇಶ್ವರ ವಿದ್ಯಾ ಸಂಸ್ಥೆ ಮುಖ್ಯಸ್ಥ ಹಾಗೂ ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ಸಲಹೆ.

ಕನ್ನಡಪ್ರಭ ವಾರ್ತೆ ಶಹಾಪುರ

ಮಕ್ಕಳ ಸೃಜನಶೀಲತೆ ಪೋಷಣೆಯಲ್ಲಿ ಶಿಕ್ಷಕರ ಹಾಗೂ ಪಾಲಕರ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಕಾರ ನೀಡುವುದೂ ಬಹು ಮುಖ್ಯ ಎಂದು ಕೊತ್ತಲ ಬಸವೇಶ್ವರ ವಿದ್ಯಾ ಸಂಸ್ಥೆ ಮುಖ್ಯಸ್ಥ ಹಾಗೂ ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.

ನಗರದ ಬೋರುಕಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಬೆಳ್ಳಿ ಹಬ್ಬದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಮನೆಯಲ್ಲಿ ಬೆಳೆದು ಬಂದಂತಹ ಸಂಸ್ಕೃತಿ, ಪರಂಪರೆ ರೂಢಿಸಿಕೊಳ್ಳುತ್ತಾರೆ. ಹೀಗಾಗಿ ಪಾಲಕರು ಸಂಸ್ಕಾರಯುತವಾಗಿ ಜೀವನ ಸಾಗಿಸುವುದು ಅಗತ್ಯ ಎಂದರು.

ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷರೂ ಆದ ವಕೀಲರಾದ ಆರ್. ಚನ್ನಬಸವ ವನದುರ್ಗ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥರು ಹಾಗೂ ಖ್ಯಾತ ವೈದ್ಯ ಡಾ. ಶ್ರೀಕಾಂತ ಸಿನ್ನೂರ, ಸಂಸ್ಥೆಯ ಕಾರ್ಯದರ್ಶಿ ಅವಿನಾಶ ಸಿನ್ನೂರ, ಸಂಜಯ್ ಪಾಟೀಲ್ ಸೇರಿ ಇತರರಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಊಟದ ವ್ಯವಸ್ಥೆ ಮಾಡಲಾಗಿತ್ತು.