ಕುಕನೂರು:ಬೋಧಕ ವರ್ಗದ ಕಠಿಣ ಪರಿಶ್ರಮದಿಂದ ಮಾತ್ರ ಉತ್ತಮ ಶಿಕ್ಷಣ ಮಕ್ಕಳು ಪಡೆಯಲು ಸಾಧ್ಯ ಎಂದು ವಿದ್ಯಾಶ್ರೀ ಶಾಲಾ ಸಂಸ್ಥಾಪಕ ಹಾಗೂ ಉದ್ಯಮಿ ಸತ್ಯನಾರಾಯಣಪ್ಪ ಹರಪನಹಳ್ಳಿ ಹೇಳಿದರು.
ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಶಾಲಾ ವಾರ್ಷಿಕ ವೈಭವ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಜತೆಗೆ ಸೃಜನಶೀಲತೆ ಕಲಿಸಿ,ಕೇವಲ ಸರ್ಕಾರಿ ಉದ್ಯೋಗ ಮಾಡಿಸಬೇಕೆಂದು ಶಿಕ್ಷಣ ನೀಡದೇ ಅದರ ಜತೆಗೆ ಕೃಷಿ,ವ್ಯವಸಾಯದ ಮಹತ್ವ ತಿಳಿಸುವ ಕಾರ್ಯವಾಗಬೇಕು.ಈಗ ಲಕ್ಷಕ್ಕೆ ಕೇವಲ ₹25ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ಸಿಗುತ್ತಿವೆ. ಮುಂದೆ ಭವಿಷ್ಯ ಅಷ್ಟೋಂದು ಸುಲಭವಿಲ್ಲ.ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯಲು ಕಷ್ಟ ಸಾಧ್ಯವಾದ್ದರಿಂದ ಸರ್ಕಾರಿ ಉದ್ಯೋಗಕ್ಕೆ ಅಂಟಿಕೊಳ್ಳದೇ ಉತ್ತಮ ಶಿಕ್ಷಣದೊಂದಿಗೆ ಪರ್ಯಾಯ ಜೀವನ ನಡೆಸಲು ಅಣಿಯಾಗಬೇಕು ಎಂದರು.ರಾಜ್ಯದ ಎಲ್ಲ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆ ಖಾಲಿ ಇದ್ದರೂ ತುಂಬಿಕೊಳ್ಳಲಾಗುತ್ತಿಲ್ಲ, ಇಂದಿನ ವಿದ್ಯಾವಂತ ಯುವಕರು ವ್ಯವಸಾಯ ಮಾಡಲು ಆಗುತಿಲ್ಲ. ಅಂತಹ ಸನ್ನಿವೇಶ ಎದುರಾಗುತ್ತಿದ್ದು, ಪ್ರತಿಯೊಬ್ಬ ಯುವಕರು ಜ್ಞಾನಾರ್ಜನೆ ಜತೆಗೆ ಕೃಷಿಗೆ ಮಹತ್ವ ನೀಡಬೇಕು ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಶವಂತರಾಜ್ ಜೈನ್ ಮಾತನಾಡಿ, ವಿದ್ಯೆ ಜತೆಗೆ ವಿವಿಧ ಕಲಿಕಾ ಚಟುವಟಿಕೆಗಳು ಮಕ್ಕಳಿಗೆ ಶೈಕ್ಷಣೀಕ ಪ್ರಗತಿಗೆ ಸಹಾಯ ಮಾಡುತ್ತವೆ ಎಂದರು.ಈ ಸಂದರ್ಭದಲ್ಲಿ ಶರಣಪ್ಪ ಅರಕೇರಿ, ಶರಣಪ್ಪ ಮುತ್ತಾಳ, ನವೀನ ನವಲೆ, ವೀರಯ್ಯ ಉಳ್ಳಾಗಡ್ಡಿ, ರವಿ ನಾಲ್ವಾಡ, ಗೌರಮ್ಮ ಅಂಗಡಿ, ದೊಡ್ಡಪ್ಪ ಭಾವಿಕಟ್ಟಿ, ಮುಖ್ಯೋಪಾಧ್ಯಯ ಮಧುಸೂಧನ ದೇಸಾಯಿ, ರಾಜಶೇಖರ್ ಹೊಸಮನಿ, ಶಿಕ್ಷಕ ಕೃಷ್ಣ ವಿದ್ಯಾಪತಿ, ಪ್ರಭು ಬುಕೆಟಗಾರ, ಶಿಕ್ಷಕ ಮಂಜುನಾಥ ಗದಗ ಇತರರಿದ್ದರು.