ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಕಲಿಕೆಗೆ ಮುಂದಾದ ವಿದ್ಯಾರ್ಥಿಗಳು - ಡ್ರಾಯಿಂಗ್, ಕ್ರಾಫ್ಟ್, ನೃತ್ಯ, ಕಂಪ್ಯೂಟರ್ ತರಬೇತಿ

| Published : Apr 14 2024, 01:53 AM IST

ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಕಲಿಕೆಗೆ ಮುಂದಾದ ವಿದ್ಯಾರ್ಥಿಗಳು - ಡ್ರಾಯಿಂಗ್, ಕ್ರಾಫ್ಟ್, ನೃತ್ಯ, ಕಂಪ್ಯೂಟರ್ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಹಸಿವನ್ನು ನೀಗಿಸುವುದು ಪುಣ್ಯದ ಕೆಲಸ ಬೇಸಿಗೆ ರಜೆಯಲ್ಲಿಯೂ ಕೂಡ ಊಟ ನೀಡುವ ಪುಣ್ಯದ ಕೆಲಸ ಶಿಕ್ಷಕರಿಗೆ ದೊರಕಿದ್ದು, ಎಲ್ಲ ಶಿಕ್ಷಕರು ಮಕ್ಕಳಿಗೆ ವಿನೂತನ ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳನ್ನು ಪ್ರೇರೇಪಿಸಬೇಕು

- ಬೇಸಿಗೆ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ

ಮುಕುಂದ ರಾವಂದೂರುಕನ್ನಡಪ್ರಭ ವಾರ್ತೆ ರಾವಂದೂರುಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮಕ್ಕಳ ಕಲಿಕೆಗೆ ಮುಂದಾಗಿದ್ದು, ಇಲ್ಲಿ ಬೇಸಿಗೆ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಇದರಲ್ಲಿ ಡ್ರಾಯಿಂಗ್, ಕ್ರಾಫ್ಟ್, ನೃತ್ಯ, ಕಂಪ್ಯೂಟರ್ ತರಬೇತಿ ಹಾಗೂ ಮಕ್ಕಳಿಗೆ ಕಲಿಕೆಗೆ ಅನುಕೂಲವಾಗುವಂತಹ ಸ್ಮಾರ್ಟ್ಕ್ಲಾಸ್ ಹೀಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ನಲಿಯುತ್ತಾ ಕಲಿಯುವ ಅವಕಾಶ ಒದಗಿಸಲಾಗಿದೆ.ಮಧ್ಯಾಹ್ನದ ಬಿಸಿಯೂಟ ಹಾಗೂ ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಮಕ್ಕಳಿಗೆ ಹೂ ನೀಡುವ ಮೂಲಕ ಸ್ವಾಗತಿಸಿದ ಅಕ್ಷರದಾಸೋಹ ಸಹಾಯಕ ನಿರ್ದೆಶಕ ಎಂ.ಸಿ. ಪ್ರಶಾಂತ್ ಮಾತನಾಡಿ, ಮಕ್ಕಳ ಹಸಿವನ್ನು ನೀಗಿಸುವುದು ಪುಣ್ಯದ ಕೆಲಸ ಬೇಸಿಗೆ ರಜೆಯಲ್ಲಿಯೂ ಕೂಡ ಊಟ ನೀಡುವ ಪುಣ್ಯದ ಕೆಲಸ ಶಿಕ್ಷಕರಿಗೆ ದೊರಕಿದ್ದು, ಎಲ್ಲ ಶಿಕ್ಷಕರು ಮಕ್ಕಳಿಗೆ ವಿನೂತನ ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ತಿಳಿಸಿದರು.ಮುಖ್ಯೋಪಾದ್ಯಾಯಿನಿ ಲಿಲ್ಲಿಮೇರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಿ, ಶಿಕ್ಷಕರಾದ ಸತೀಶ್, ಶೀಲಾಮಣಿ, ರೂಪ, ವಿದ್ಯಾರ್ಥಿಗಳು, ಪೋಷಕರು ಇದ್ದರು.ಪಿರಿಯಾಪಟ್ಟಣ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಯಾದ ಹಿನ್ನೆಲೆ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ತಾಲೂಕಿನಲ್ಲಿ 9,421 ವಿದ್ಯಾರ್ಥಿಗಳ ಪೋಷಕರಿಂದ ಒಪ್ಪಿಗೆ ಪಡೆದು 240 ಶಾಲಾ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು 41 ದಿನಗಳ ಕಾಲ ನಿರಂತರವಾಗಿ ನಡೆಯಲಿದೆ.ಪ್ರತಿಯೊಂದು ದಿನವೂ ಸರ್ಕಾರವು ನಿಗದಿಪಡಿಸಿದ ರೀತಿಯಲ್ಲಿ ಒಂದೊಂದು ಬಗೆಯ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ವೇಳಾಪಟ್ಟಿ ನೀಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಬಿಸಿಲಿನಿಂದ ತತ್ತರಿಸಿದ ಗ್ರಾಮೀಣ ಮಕ್ಕಳಿಗೆ ಈ ಮಧ್ಯಾಹ್ನದ ಬಿಸಿಯೂಟವು ತುಂಬಾ ಸಹಕಾರಿಯಾಗಲಿದೆ.-----------------