ಸಾರಾಂಶ
ಕನ್ನಡಪ್ರಭ ವಾರ್ತೆ ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಗ್ರಾಮ ಪಂಚಾಯತ ಬಾಬಾನಗರ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮ-2024 ನಡೆಯಿತು. ಮುಖ್ಯ ಅತಿಥಿಯಾಗಿದ್ದ ವಿಜಯಪುರ ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಕೆ ಗೋಠೆ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ನಿಜವಾದ ಪ್ರತಿಭೆಯನ್ನು ಹೊರಹಾಕಲು ಮಕ್ಕಳ ಸಾಹಿತ್ಯ ಸಂಭ್ರಮ ಉತ್ತಮ ವೇದಿಕೆಯಾಗಿದೆ. ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದ್ದು, ಸೂಪ್ತ ಪ್ರತಿಭೆಯನ್ನು ಹೊರಹಾಕಲು ಬಳಸಿಕೊಳ್ಳಬೇಕೆಂದು ಮಕ್ಕಳಿಗೆ ಕರೆ ನೀಡಿದರು. ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ, ಮಕ್ಕಳಲ್ಲಿ ಕ್ರೀಯಾಶೀಲ ಮನೋಭಾವ ಬೆಳೆಸಿ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿ ಮಕ್ಕಳಲ್ಲಿ ಅಡಗಿರುವ ಕಲೆಯನ್ನ ಬೆಳೆಸಲು ಉತ್ತಮ ಕಾರ್ಯಕ್ರಮ ಎಂದು ಬಣ್ಣಿಸಿದರು.
ಗ್ರಾಪಂ ಸದಸ್ಯ ಸಿದ್ಧಗೊಂಡ ರುದ್ರಗೌಡರ ಮಾತನಾಡಿ ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ನಮ್ಮ ಗ್ರಾಮದಲ್ಲಿ ನಡೆಯುತ್ತಿರುವುದಕ್ಕೆ ಅಧಿಕಾರಿಗಳಿಗೆ ಧನ್ಯವಾದಗಳನ್ನ ತಿಳಿಸಿದರು. ಅಲ್ಲದೇ, ಕಾರ್ಯಕ್ರಮದ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೌರವಾಧ್ಯಕ್ಷ ಎಸ್.ವಿ.ಬುರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಸಾಹಿತ್ಯ ಸಂಭ್ರಮ ರಾಜ್ಯದ ಆಯ್ದ ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು, ನಮ್ಮ ಜಿಲ್ಲೆಯಲ್ಲಿ ತಿಕೋಟಾ ತಾಲೂಕು ಆಯ್ಕೆಯಾಗಿದೆ. ಮಕ್ಕಳ ಮನಸ್ಸಿಗೆ ಮುದ ನೀಡುವದರ ಜೊತೆಗೆ ಹೊಸದನ್ನು ಸೃಜಿಸುವ ಪ್ರೇರಣೆ ನೀಡುವ ಕಾರ್ಯಕ್ರಮ ಎಂದರು.
ಗ್ರಾಪಂ ಅಧ್ಯಕ್ಷ ಶಹರಾಬಾನು ಎಳಾಪುರ, ಜಿಪಂ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಠೆ, ಜಿಪಂನ ಯೋಜನಾ, ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ.ಬಿ.ಅಲ್ಲಾಪೂರ, ತಿಕೋಟಾ ತಾಪಂ ಇಒ ಪ್ರವೀಣ್ ಕುಮಾರ್ ಸಾಲಿ, ಉಪಾಧ್ಯಕ್ಷ ಈರಣಗೌಡ ರುದ್ರಗೌಡ್ರ, ಅಶೋಕಗೌಡ್ರ ಐ ರುದ್ರಗೌಡ್ರ, ಶೋಭಾ ಸೀಳಿನ, ರೇಣುಕಾ ಆರ್ ಸೊಲ್ಲಾಪುರ, ಸುಮಾ ಚೌಧರಿ, ಮಂಜುನಾಥ ಯ ಹೊನಕಟ್ಟಿ, ಯಲ್ಲಾಲಿಂಗ ಹೊನವಾಡ, ಜೋತಿಂದ್ರ ಆಯತವಾಡ, ಅಕ್ಬರ ಮುಲ್ಲಾ, ಜಿ.ಟಿ.ಕಾಗವಾಡ, ಬಿ.ಎಸ್.ಕುಮಠಗಿ, ಎಲ್.ಟಿ.ಮುಲ್ಲಾ, ಎಸ್.ಆಯ್.ಬಾಗಲಕೋಟ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ನಂದಾ.ಎಸ್.ತಿಕೋಟಿ, ಎಮ್.ಎಸ್.ಮಠಪತಿ, ರಮೇಶ ಎಂ ಅರಕೇರಿ, ಎಮ್ ವೈ ಧನಗೊಂಡ, ಕಾರ್ಯಕ್ರಮದ ಸಂಯೋಜಕ ಭೀರಪ್ಪ ಖಂಡೇಕಾರ ಉಪಸ್ತಿತರಿದ್ದರು.ಮುಖ್ಯ ಗುರು ಐ.ಎ.ತೇಲಿ ಸ್ವಾಗತಿಸಿದರು, ಶಿಕ್ಷಕ ಎಂ ಐ ಮುಲ್ಲಾ ವಂದಿಸಿದರು, ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ ಸಾವಳಗಿ ಮತ್ತು ಸ್ವಾತಿ ಐಗಳಿ ನಿರೂಪಿಸಿದರು.