ಸಾರಾಂಶ
ಮಕ್ಕಳ ಸಾಹಿತಿ ಹ.ಮ. ಪೂಜಾರಗೆ ಕರದಳ್ಳಿ ಸದ್ಭಾವನಾ ಪ್ರಶಸ್ತಿ
ಸಿಂದಗಿ: ಶಹಾಪುರದ ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನದಿಂದ ಕೊಡಮಾಡುವ ಕರದಳ್ಳಿ ಸದ್ಭಾವನಾ ಪುರಸ್ಕಾರಕ್ಕೆ 2023ನೇ ಸಾಲಿಗೆ ಸಿಂದಗಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಕರದಳ್ಳಿ ತಿಳಿಸಿದ್ದಾರೆ.
ಆಯ್ಕೆ ಸಮಿತಿಯಲ್ಲಿ ವಿಮರ್ಶಕ ಸಿ.ಎಸ್. ಭೀಮರಾಯ, ಸಾಹಿತಿ ದೊಡ್ಡಬಸಪ್ಪ ಬಳೂರಗಿ ಹಾಗೂ ಪತ್ರಕರ್ತ ರವಿ ಹಿರೇಮಠ ಇದ್ದರು. ಡಿ.19 ರಂದು ಶಹಾಪುರ ಪಟ್ಟಣದಲ್ಲಿ ಜರಗುವ ಲಿಂ.ಚಂದ್ರಕಾಂತ ಕರದಳ್ಳಿ ನಾಲ್ಕನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಗುವುದು. ಪ್ರಶಸ್ತಿ ಪತ್ರ, ಸ್ಮರಣಿಕೆ ಜತೆ ನಗದು ₹ 5000 ನೀಡಿ ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.