ಮಕ್ಕಳ ಜೀವನ ರೂಪಿಸುವುದೇ ಶಿಕ್ಷಕರು: ಬಸವಂತರಾಯಗೌಡ

| Published : Mar 10 2024, 01:47 AM IST

ಸಾರಾಂಶ

ಚನ್ನಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶ್ರೀ ವ್ಹಿ.ವೈ.ಪಾಟೀಲ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತಿ ಸೌರಭ- ಶಾಲಾ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುವ ಸಮಾರಂಭವನ್ನು ಶಿಕ್ಷಣ ಪ್ರೇಮಿ ಬಸವಂತರಾಯಗೌಡ ಪಾಟೀಲ ಉದ್ಘಾಟಿಸಿದರು.

ಇಂಡಿ: ಮಕ್ಕಳ ಜೀವನ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪ್ರಭಾವ ಬೀರುತ್ತಾರೆ. ಅವರು ಜ್ಞಾನ ಮತ್ತು ಮೌಲ್ಯಗಳನ್ನು ನೀಡಿ, ವಿದ್ಯಾರ್ಥಿಗಳ ಬದುಕನ್ನು ಸಂಸ್ಕಾರಯುತವನ್ನಾಗಿಸುತ್ತಾರೆ ಎಂದು ಶಾಸಕರ ಸಹೋದರ, ಶಿಕ್ಷಣ ಪ್ರೇಮಿ ಬಸವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಪಡನೂರ ಗ್ರಾಮದ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶ್ರೀ ವ್ಹಿ.ವೈ.ಪಾಟೀಲ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ''''ಸಂಸ್ಕೃತಿ ಸೌರಭ- ಶಾಲಾ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ಪೂರಕ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳಬೇಕು. ವಿದ್ಯಾವಂತರಾಗಲು ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ವಿದ್ಯಾರ್ಥಿಗಳು ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಎಂದರು.

ಡಾ.ಗುರುಸಿದ್ದಯ್ಯ ಸ್ವಾಮಿ ಮಾತನಾಡಿ, ಬಡತನದಲ್ಲೇ ಹುಟ್ಟಿ ಬೆಳೆದ ಅಬ್ದುಲ್‌ ಕಲಾಂ, ಅಂಬೇಡ್ಕರ್‌, ಸರ್‌.ಎಂ.ವಿಶ್ವೇಶ್ವರಯ್ಯ ಮತ್ತಿತರು ಪರಿಶ್ರಮ ಪಟ್ಟು ಓದಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಅಂತಹ ಸಕಾರಾತ್ಮಕ ಚಿಂತನೆಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಷಡಕ್ಷರಿ ಮೇತ್ರಿ, ಸಂಸ್ಥೆಯ ಕಾರ್ಯದರ್ಶಿ ಕಲ್ಲನಗೌಡ ಬಿರಾದಾರ, ನಿರ್ದೇಶಕ ಸೋಮನಿಂಗ ದುದಗಿ, ಅಂಬಣ್ಣ ಬಂಡಿವಡ್ಡರ, ಮುಖಂಡ ರಾಜು ದುದಗಿ, ಭೀಮಾಶಂಕರ ಭೈರಜಿ, ಕೆ.ಐ.ಉಮರಾಣಿ, ಎಸ್.ಎಸ್.ಅವರಾದಿ, ಪ್ರಾಚಾರ್ಯ ಎಲ್.ಟಿ.ವೀರಶೆಟ್ಟಿ, ಬಸಪ್ಪಗೌಡ ಬಿರಾದಾರ, ಪಿ.ಬಿ.ಅರವತ್ತು, ಎಸ್.ಬಿ.ಪಾಟೀಲ, ಎಸ್.ಎಸ್.ಪೊದ್ದಾರ, ಶಿಕ್ಷಕ ಅಶೋಕ ಮಾಳಗೆ, ಶಿಕ್ಷಕರಾದ ವ್ಹಿ.ಆರ್.ಲಾಳಸೇರಿ, ಅಪ್ಪು ಇಕ್ಕಳಕಿ, ಎ.ಬಿ.ಬಿರಾದಾರ, ಎ.ಬಿ.ಚವ್ಹಾಣ, ಸವಿತಾ ಹಳ್ಳೆರ, ಚಿಕ್ಕಯ್ಯ ಮಠಪತಿ, ರವೀಂದ್ರ ಬಿರಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.