ಜ್ಞಾನಾರ್ಜನೆಗೆ ಮಕ್ಕಳ ಸಂತೆ ಉತ್ತಮ ವೇದಿಕೆ: ಶೈಲಾ ಮಹೇಶ್

| Published : Jan 07 2024, 01:30 AM IST

ಜ್ಞಾನಾರ್ಜನೆಗೆ ಮಕ್ಕಳ ಸಂತೆ ಉತ್ತಮ ವೇದಿಕೆ: ಶೈಲಾ ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಶೆಟ್ಟಿಕೊಪ್ಪದ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಉದ್ಘಾಟಿಸಿದ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾಮಹೇಶ್ ಮಕ್ಕಳ ಜ್ಞಾನಾರ್ಜನೆಗೆ ಹಾಗೂ ವ್ಯಾವಹಾರಿಕ ಜ್ಞಾನಕ್ಕೆ ಮಕ್ಕಳ ಸಂತೆ ಉತ್ತಮ ವೇದಿಕೆಯಾಗಿದೆ. ಶಿಕ್ಷಣಕ್ಕಿಂತ ಹೊರ ಜಗತ್ತಿನ ವ್ಯಾವಹಾರಿಕ ಜ್ಞಾನ ಮುಖ್ಯವಾಗಿದೆ ಎಂದರು.

ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಕ್ಕಳ ಜ್ಞಾನಾರ್ಜನೆಗೆ ಹಾಗೂ ವ್ಯಾವಹಾರಿಕ ಜ್ಞಾನಕ್ಕೆ ಮಕ್ಕಳ ಸಂತೆ ಉತ್ತಮ ವೇದಿಕೆಯಾಗಿದೆ ಎಂದು ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾಮಹೇಶ್ ಹೇಳಿದರು.

ಶನಿವಾರ ತಾಲೂಕಿನ ಶೆಟ್ಟಿಕೊಪ್ಪದ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿ, ನಾಲ್ಕು ಗೋಡೆಗಳ ಮೂಲಕ ಕಲಿಯುವ ಶಿಕ್ಷಣಕ್ಕಿಂತ ಹೊರ ಜಗತ್ತಿನ ವ್ಯಾವಹಾರಿಕ ಜ್ಞಾನ ಮುಖ್ಯವಾಗಿದೆ. ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.

ತಾಲೂಕು ಕಸಾಪ ನಿಕಟಪೂರ್ವಾಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಮಕ್ಕಳಿಗೆ ಇಂತಹ ಅರ್ಥಪೂರ್ಣ ಹಾಗೂ ಉಪಯುಕ್ತ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಮಕ್ಕಳು ಮನೆಯಲ್ಲಿಯೇ ಬೆಳೆದ ತರಕಾರಿ ಸೊಪ್ಪುಗಳನ್ನು ತಂದು ಮಾರಾಟ ಮಾಡುತ್ತಿರುವುದು ಸಂತಸ ತಂದಿದೆ. ಮಕ್ಕಳಲ್ಲೂ ವ್ಯಾವಹಾರಿಕ ಜ್ಞಾನ ವೃದ್ಧಿಯಾಗಲಿದೆ ಎಂದರು.

ಶಾಲೆ ಮುಖ್ಯ ಶಿಕ್ಷಕಿ ಪುಟ್ಟಮ್ಮ ಮಾತನಾಡಿ, ಮಕ್ಕಳ ಅನುಭವಾತ್ಮಕ ಕಲಿಕೆ ದೃಷ್ಠಿಯಿಂದ ಸರ್ಕಾರ ಈ ಮಕ್ಕಳ ಸಂತೆ ಯನ್ನು ಆಯೋಜಿಸಲು ಆದೇಶಿಸಿದೆ. ಇದು ಮಕ್ಕಳಿಗೆ ಅತ್ಯಂತ ಉಪಕಾರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ್ ವಹಿಸಿದ್ದರು.ಈ ಸಂದರ್ಭದಲ್ಲಿ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಸಂಕೇತ್, ರೇಷ್ಮ, ರಂಜಿತ್, ಕುಮಾರ, ಜಯಲಕ್ಷ್ಮಿ, ತಾಹೀರಾ, ಚಂದ್ರಕಲಾ, ಶಿಕ್ಷಕರಾದ ಮಲ್ಲಿಕಾರ್ಜುನ, ಶುಭ, ಅರುಣಕುಮಾರ್ ಮತ್ತಿತರರು ಉಪಸ್ಥಿತರಿದ್ದರು.