ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯೊಂದಿಗೆ ಭೀಕರ ಪರಿಣಾಮ ಬೀರಬಹುದಾದ ಈ ಮಾರಕ ರೋಗ ತಡೆಗಟ್ಟಲು ಪೋಲಿಯೊ ಲಸಿಕೆ ಮಕ್ಕಳಿಗೆ ಹಾಕಿಸಬೇಕು
ಕುಕನೂರು: ದೇಶದಲ್ಲಿ ೫ ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ರೋಗ ತಡೆಗಟ್ಟಬೇಕೆಂದು ಸಮುದಾಯ ಆರೋಗ್ಯ ಕೇಂದ್ರದ ಡಾ.ಮಮತಾ ಇಲಕಲ್ ಹೇಳಿದರು.
ಪಟ್ಟಣದ ಶ್ರೀಚಳ್ಳೇಶ್ವರ ದೇವಸ್ಥಾನದಲ್ಲಿ ಹಾಗೂ ೧೫ನೇ ವಾರ್ಡ್‌ನ ಜವಳದ ಕಾಲನಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಹಾಕಿ ಮಾತನಾಡಿದ ಅವರು, ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು ೧೯೯೪ ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಯೋಜನೆಯಿಂದ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯೊಂದಿಗೆ ಭೀಕರ ಪರಿಣಾಮ ಬೀರಬಹುದಾದ ಈ ಮಾರಕ ರೋಗ ತಡೆಗಟ್ಟಲು ಪೋಲಿಯೊ ಲಸಿಕೆ ಮಕ್ಕಳಿಗೆ ಹಾಕಿಸಬೇಕೆಂದರು. ಡಾ.ಜಂಬಣ್ಣ ಅಂಗಡಿ, ಅಂದಪ್ಪ ಹಾಳಕೇರಿ, ಅಂಗನವಾಡಿ ಕಾರ್ಯಕರ್ತೆ ಶಾಂತಾ ಶಿವಸಿಂಪರ್, ಶಾರಾದಾ ಬೆದವಟ್ಟಿ, ಆರೋಗ್ಯ ಇಲಾಖೆಯ ಕಳಕಪ್ಪ ಕುಂಬಾರ, ಶಶಿಕಲಾ, ವೀರುಪಾಕ್ಷಿ, ಅಂಗನವಾಡಿ ಸಿಬ್ಬಂದಿ ಮಂಜುಳಾ ಮರಡಿ ಇತರರು ಇದ್ದರು.