ತರೀಕೆರೆನಮ್ಮ ಮಕ್ಕಳು ಏನಾಗಬೇಕು ಎಂಬುದು ತಾಯಿ ಹೃದಯಕ್ಕೆ ಮಾತ್ರ ಗೊತ್ತಿರುತ್ತದೆ ಎಂದು ರಾಜ್ಯೋತ್ಸವ ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಖ್ಯಾತ ಜಾನಪದ ಕಲಾವಿದೆ ಲಕ್ಷ್ಮಿದೇವಮ್ಮ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ತರೀಕೆರೆ
ನಮ್ಮ ಮಕ್ಕಳು ಏನಾಗಬೇಕು ಎಂಬುದು ತಾಯಿ ಹೃದಯಕ್ಕೆ ಮಾತ್ರ ಗೊತ್ತಿರುತ್ತದೆ ಎಂದು ರಾಜ್ಯೋತ್ಸವ ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಖ್ಯಾತ ಜಾನಪದ ಕಲಾವಿದೆ ಲಕ್ಷ್ಮಿದೇವಮ್ಮ ಹೇಳಿದ್ದಾರೆ.ಪಟ್ಟಣದ ಆರಾಧನಾ ಅಕಾಡೆಮಿಯಿಂದ, ಆರಾಧನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಾನಪದ ಕಲಾ ವೈಭವ. ಶಾಲೆ ವಸ್ತುಪ್ರದರ್ಶನ, ವಾರ್ಷಿಕ ಶಾಲಾ ಕ್ರೀಡೋತ್ಸವ ಆರಾಧನಾ ವೈಭವದಲ್ಲಿ ಮಾತನಾಡಿದರು. ಆರಾಧನಾ ಎಂಬ ಪದದಲ್ಲೇ ಉತ್ತಮ ಅರ್ಥ ಇದೆ. ಶಾಲೆ ದೇವಸ್ಥಾನ ಇದ್ದ ಹಾಗೆ, ಹುಟ್ಟಿನಿಂದ ಹಿಡಿದು, ಮದುವೆ, ರಂಗೋಲಿ ಬಿಡುವುದು, ಕೃಷಿಗೆ ಸಂಬಂಧಿಸಿದಂತೆ ಜಾನಪದ ಹಾಡುಗಳಿವೆ. ಜಾನಪದಕ್ಕೆ ಒಂದು ಮಹತ್ವ ಇದೆ, ಕಷ್ಟ ಸುಖಗಳನ್ನು ದೇವರಿಗೆ ಒಪ್ಪಿಸಬೇಕು. ನಿಷ್ಠೆ ಇರಬೇಕು, ಮಕ್ಕಳು ಸುಸಂಸ್ಕೃತರಾಗಬೇಕು ಎಂದು ಹೇಳಿದರು.ಆರಾಧನಾ ಹಿರಿಯ ಪ್ರಾಥಮಿಕ ಶಾಲೆ ಪ್ರಿನ್ಸಿಪಾಲ್ ಡಾ.ಮೋಕ್ಷ ಮಾತನಾಡಿ ನಮ್ಮ ಮಣ್ಣಿನ ಸುವಾಸನೆ, ನಮ್ಮ ಸಂಸ್ಕೃತಿ ಗೌರವ ಇಂದು ನಮ್ಮ ಆರಾಧನಾ ಶಾಲೆ ಆವರಣದಲ್ಲಿ ಹರಿದುಬರುತ್ತಿದೆ. ಜನಪದ ಕಲಾ ವೈಭವ, ನಮ್ಮ ಪೂರ್ವಜರ ಪರಂಪರೆ, ಕೀರ್ತಿ ಸಂಸ್ಕೃತಿ ಇವೆಲ್ಲ ಜೀವಂತವಾಗಿಸುವ ಜನಪದ ಕಲೆಗಳಿಗೆ ನನ್ನ ಹೃತ್ಪೂರ್ವಕ ನಮನ ಎಂದು ಹೇಳಿದರು. ಆರಾಧನಾ ಕಲಾ ವೈಭವ, ಜಾನಪದ ಕಲಾ ಪ್ರಕಾರಗಳ ಅನಾವರಣ, ವಿವಿಧ ಭಾಷೆಗಳು, ವಿಷಯಗಳ ವೈವಿಧ್ಯಮಯ ವಸ್ತುಪ್ರದರ್ಶನ, ನಾಟಕಗಳು ಹೀಗೆ ಆರಾಧನಾ ಶಾಲೆ ಇತಿಹಾಸದಲ್ಲೇ ಮೊದಲಬಾರಿಗೆ ವೈವಿದ್ಯಮಯ ಸಮಾರಂಭಗಳ ಸಮ್ಮಿಲನ ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದರು.ಆರಾಧಾನ ಸಂಸ್ಥೆ ಕೌನ್ಸಿಲರ್ ಬೆಂಗಳೂರು ಸಿಸ್ಟರ್ ಮೋಲಿ ಮಾತನಾಡಿದರು. ಪುರಸಭೆ ಸದಸ್ಯ ಅನಿಲ್ ಮೇನೇಜಸ್, ಶಾಲೆ ವ್ಯವಸ್ಥಾಪಕರಾದ ಸಿಸ್ಟರ್ ಶೀಲಾ, ಶಿಕ್ಷಕರಾದ ಸೋಮ್ಲಾನಾಯಕ್, ಹೊನ್ನಮ್ಮ, ಅಣ್ಣಯ್ಯ, ಗಿರೀಶ್, ಮಣಿಕಂಠ, ಶೈಲಿ, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರರು ಭಾಗವಹಿಸಿದ್ದರು.-
29ಕೆಟಿಆರ್.ಕೆ.6ಃ ತರೀಕೆರೆಯಲ್ಲಿ ಆರಾಧನಾ ಆಕಾಡೆಮಿಯಿಂದ ನಡೆದ ಜಾನಪದ ಕಲಾ ವೈಭವದಲ್ಲಿ ಕಲಾವಿದೆ ಲಕ್ಷ್ಮಿದೇವಮ್ಮ, ಪುರಸಭೆ ಸದಸ್ಯ ಅನಿಲ್ ಮೇನೇಜಸ್, ಶಾಲೆ ಪ್ರಿನ್ಸಿಪಾಲ್ ಡಾ.ಮೋಕ್ಷ ಮತ್ತಿತರರು ಭಾಗವಹಿಸಿದ್ದರು.