ಬಾರಿಯೂ ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕು: ಹಾಲೇಶ್ ಕೆ.ಟಿ.

| Published : Jul 21 2025, 12:00 AM IST

ಬಾರಿಯೂ ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕು: ಹಾಲೇಶ್ ಕೆ.ಟಿ.
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮಕ್ಕಳು ಶಿಕ್ಷಕರು ಹೇಳುವ ಎಲ್ಲ ಕಿವಿಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು, ಚೆನ್ನಾಗಿ ಓದಿ ಈ ಬಾರಿಯೂ ಉತ್ತಮ ಫಲಿತಾಂಶ ಪಡೆಯಬೇಕೆಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಹಾಲೇಶ್ ಕೆ.ಟಿ.ಹೇಳಿದರು.

ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳು ಮತ್ತು ಪೋಷಕರ ಸಭೆ,

ಕನ್ನಡಪ್ರಭ ವಾರ್ತೆ ತರೀಕೆರೆ

ಮಕ್ಕಳು ಶಿಕ್ಷಕರು ಹೇಳುವ ಎಲ್ಲ ಕಿವಿಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು, ಚೆನ್ನಾಗಿ ಓದಿ ಈ ಬಾರಿಯೂ ಉತ್ತಮ ಫಲಿತಾಂಶ ಪಡೆಯಬೇಕೆಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಹಾಲೇಶ್ ಕೆ.ಟಿ.ಹೇಳಿದರು.

ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರ ಸಭೆಯಲ್ಲಿ

ಮಾತನಾಡಿದರು. ಶಾಲೆಯ ಎಲ್ಲ ಶಿಕ್ಷಕರು ತಾವು ಬೋಧಿಸುತ್ತಿರುವ ವಿಷಯದ ಉತ್ತಮ ಫಲಿತಾಂಶಕ್ಕಾಗಿ ಅವರು ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು.

ಮಕ್ಕಳು ಶಿಕ್ಷಕರು ಹೇಳುವ ಎಲ್ಲ ಕಿವಿಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು, ಚೆನ್ನಾಗಿ ಓದಿ ಈ ಬಾರಿಯೂ ಉತ್ತಮ ಫಲಿತಾಂಶ ಪಡೆಯಬೇಕು. ಅಲ್ಲದೆ ಮಕ್ಕಳ ಕಲಿಕೆ ಹೇಗೆ ತಾಯಿ ಗರ್ಭದಿಂದ ಆರಂಭವಾಗುತ್ತದೆ ಎಂಬುದನ್ನು ಅಭಿಮನ್ಯುವಿನ ಕಥೆ ಹೇಳುವ ಮೂಲಕ ಚಕ್ರವ್ಯೂಹ ಭೇದಿಸುವ ಪ್ರಯತ್ನವನ್ನು ಅವನು ಮಾಡಿದ ಬಗ್ಗೆ ತಿಳಿಸಿ, ಮಕ್ಕಳೂ ಕೂಡ ಶಿಕ್ಷಕರು ಹೇಳುವ ಪಾಠಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡು ಮನನ ಮಾಡಿಕೊಳ್ಳಬೇಕೆಂದು ತಿಳಿಸಿದರು. ಮಕ್ಕಳು ಚೆನ್ನಾಗಿ ಓದಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳುವಂತೆ ತಿಳಿಸಿದರು.

ಶಾಲೆಯ ಸ್ಥಳೀಯ ಸಲಹಾ ಸಮಿತಿ ಸದಸ್ಯ ಪುಟ್ಟಪ್ಪ. ಟಿ/. ಮಾತನಾಡಿ, ಮಕ್ಕಳು ಅವರ ಪೋಷಕರು ಅನುಭವಿಸುತ್ತಿರುವ ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡು, ತಾವು ಹಾಗೆ ಮುಂದೆ ಕಷ್ಟಪಡಬಾರದು ಎಂದರೆ ಚೆನ್ನಾಗಿ ಓದಬೇಕು, ಈಗ ಚೆನ್ನಾಗಿ ಓದಿದರೆ ಮುಂದೆ ಉತ್ತಮ ಜೀವನ ನಿರ್ವಹಿಸಬಹುದು ಎಂದು ತಿಳಿಸಿದರು. ಶಾಲೆ ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ ಮಾತನಾಡಿ, ಮಕ್ಕಳು ಏನೆಲ್ಲಾ ಕಷ್ಟಪಟ್ಟು ದಾನಿಗಳಿಂದ ದೇಣಿಗೆ ಸಂಗ್ರಹಿಸಿ, ಇಲ್ಲಿ ನೀಡುತ್ತಿರುವ ಸೌಲಭ್ಯ ಬಳಸಿಕೊಂಡು ಚೆನ್ನಾಗಿ ಓದುವಂತೆ ಹೇಳಿದರು. ಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಮಾತನಾಡಿದರು. ಈ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಮಕ್ಕಳ ಮೊದಲ ಪೋಷಕರ ಸಭೆಯಲ್ಲಿ ಹಲವಾರು ಪೋಷಕರು ಪಾಲ್ಗೊಂಡು, ಶಾಲೆ ಮತ್ತು ಹಾಸ್ಟೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳೂ ಕೂಡ ತಮ್ಮ ಓದಿನ ಬಗ್ಗೆ ಅನುಭವ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಸ್ಥಳೀಯ ಸಲಹಾ ಸಮಿತಿ ಪದಾಧಿಕಾರಿಗಳಾದ ಓಂಕಾರಣ್ಣ, ಸಮತಳದ ಮಲ್ಲೇಶಪ್ಪ, ಪಾರ್ವತಮ್ಮ ಕೆ ಬಿ, ಶಿಕ್ಷಕರಾದ ಖಿಜರ್‌ಖಾನ್, ಮಂಜಳ ಮಲ್ಲಿಗವಾಡ, ಶಿಕ್ಷಕಿ ಸವಿತಮ್ಮ ಬಿ.ಲೇಖನ ಸಂಗಡಿಗರು ಭಾಗವಹಿಸಿದ್ದರು.20ಕೆಟಿಆರ್.ಕೆ.8ಃ

ತರೀಕೆರೆಯ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಡಶಾಲೆಯಿಂದ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರಸಬೆ ನಡೆಯಿತು. ---------------------