ಮಕ್ಕಳು ಅಕ್ಷರದಿಂದ ವಂಚಿತರಾಗಬಾರದು: ಎನ್‌. ಮಹೇಶ್

| Published : Mar 07 2025, 11:46 PM IST

ಸಾರಾಂಶ

Children should not be deprived of literacy: N. Mahesh

-ಶ್ರೀರಕ್ಷಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಶಿಕ್ಷಣ ಮನುಷ್ಯನ ಮೂಲಭೂತ ಹಕ್ಕಾಗಿದೆ. ಪ್ರತಿಯೊಂದು ಮಗು ಸಹ ಅಕ್ಷರದಿಂದ ವಂಚಿತರಾಗಬಾರದು ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ಮುಖಂಡ ಎನ್. ಮಹೇಶ ತಿಳಿಸಿದರು.

ಮಾತಾ ಮಾಣಿಕೇಶ್ವರಿ ನಗರದಲ್ಲಿ ಶ್ರೀರಕ್ಷಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಶ್ರೀರಕ್ಷಾ ಶಿಕ್ಷಣ ಸಂಸ್ಥೆಯಲ್ಲಿನ ಮಕ್ಕಳು ಸಂವಿಧಾನದ ಪೀಠಿಕೆಯನ್ನು ಉತ್ಸಾಹದಿಂದ ಹೇಳುವುದು ಕಂಡರೆ, ಖಂಡಿತಾ ಈ ಸಂಸ್ಥೆ ಭವಿಷ್ಯದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆಯಲಿದೆ ಎಂದರು.

ಜಾಗತೀಕರಣದ ಇಂದಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರ ವ್ಯಾಪಾರೀಕರಣವಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ. ಶಿಕ್ಷಣ ಸಂಸ್ಥೆಗಳು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಹಿಂದ ಹಿರಿಯ ಮುಖಂಡ ಮೌಲಾಲಿ ಅನುಪುರ ಮಾತನಾಡಿ, ನಮ್ಮ ಭಾಗ ಶೈಕ್ಷಣಿಕ ಹಿಂದುಳಿದ ಹಣೆಪಟ್ಟಿ ಕಳಚಿಕೊಳ್ಳಬೇಕಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.

ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ ಮಾತನಾಡಿ, ನಮ್ಮ ಬದುಕಿನಲ್ಲಿ ಎಲ್ಲಕ್ಕಿಂತ ನಾವು ಸಂಪಾದಿಸುವ ಜ್ಞಾನ ಅತೀ ಮುಖ್ಯ, ಜ್ಞಾನ ಯಾರೂ ಕಸಿಯದಂತಹ ಶ್ರೇಷ್ಠ ಆಸ್ತಿಯಾಗಿದೆ. ಶಿಕ್ಷಕರು ಮಕ್ಕಳಲ್ಲಿ ವಿಷಯ ಬೋಧನೆ ಜೊತೆಯಲ್ಲಿ ಉತ್ತಮ ಸಂಸ್ಕಾರವನ್ನು ಹೇಳಿಕೊಡಬೇಕೆಂದು ಸಲಹೆ ನೀಡಿದರು.

ಸಂಸ್ಥೆಯ ಸಂಸ್ಥಾಪಕ ಡಾ. ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನಿಧ್ಯವನ್ನು ಮಹಲ್‌ ರೋಜಾ ಮಲ್ಲಿಕಾರ್ಜುನ ಮುತ್ಯಾ ವಹಿಸಿದ್ದರು. ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಪಾಟೀಲ್ ಕೌಳೂರು, ಮರೆಪ್ಪ ಚೆಟ್ಟೇರಕರ, ಹಣಮಂತ್ರಾವ್ ಕುಲಕರ್ಣಿ, ಮುಖ್ಯಗುರು ಶಶಿಕಲಾ ಕೃಷ್ಣಮೂರ್ತಿ, ಶಿಕ್ಷಕರಾದ ಗೌರಮ್ಮ ಮಗ್ಗಾ, ಕ್ರಿಸ್ಟಿನಾ, ಭಾವನಾ ಬಳಕೇರಿ, ಸ್ವಾತಿ ಕುಲಕರ್ಣಿ, ಜ್ಯೋತಿ ಪಾಟೀಲ್, ಮೈತ್ರೇಯಿ, ನಂದಿನಿ, ರೂಪಾ ಪುಲ್ಸೆ, ವಿಜಯಲಕ್ಷ್ಮಿ, ಮಹೇಶ್ ಕುಮಾರ್ ಶಿರವಾಳ, ಸಿಬ್ಬಂದಿಯಾದ ನಾಗಮ್ಮ ನಾಯಕ್ ಮಾಳಮ್ಮ ಪೂಜಾರಿ ಇದ್ದರು. ನಂತರ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

----

7ವೈಡಿಆರ್1:ಯಾದಗಿರಿಯ ಮಾತಾ ಮಾಣಿಕೇಶ್ವರಿ ನಗರದಲ್ಲಿ ಶ್ರೀರಕ್ಷಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭವನ್ನು ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ಮುಖಂಡ ಎನ್. ಮಹೇಶ ಉದ್ಘಾಟಿಸಿದರು.