ಮಕ್ಕಳು ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯಬೇಕು: ಲೋಕೇಶಪ್ಪ

| Published : Aug 15 2025, 01:00 AM IST

ಮಕ್ಕಳು ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯಬೇಕು: ಲೋಕೇಶಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂದು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ಎಚ್.ಲೋಕೇಶಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಮಕ್ಕಳು ಗ್ರಂಥಾಲಯದಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂದು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಡಾ.ಎಚ್.ಲೋಕೇಶಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಡಿಜಿಟಲ್ ಯುಗದಲ್ಲಿ ಗ್ರಂಥಾಲಯ ಸಂಪ್ರದಾಯ ಮತ್ತು ತಂತ್ರಜ್ಞಾನ ಬೆಸುಗೆ ಎಂಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು,

ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಮಯವನ್ನು ಕಳೆಯಬೇಕು. ನಿರಂತರವಾಗಿ ಓದುವುದರ ಮೂಲಕ ತಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಬೇಕು. ಆಧುನಿಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ತುಂಬಾ ವೇಗವಾಗಿ ಬೆಳೆಯುತ್ತಾ ಇದೆ. ಅಂಗೈಯಲ್ಲಿ ವಿಶ್ವಕೋಶದಂತಿರುವ ಮೊಬೈಲ್ ನಲ್ಲಿ ಜಗತ್ತಿನ ಎಲ್ಲಾ ಜ್ಞಾನಗಳು ದೊರೆಯುತ್ತವೆ. ಈಗಿನ ಈ ಲೈಬ್ರರಿ ಹಾಗೂ ಸಾಂಪ್ರದಾಯಿಕ ಗ್ರಂಥಾಲಯದ ಬಳಕೆಯಿಂದ ನಿಮ್ಮ ಸುಂದರವಾದ ಬದುಕು ರೂಪಿಸಿಕೊಳ್ಳಬಹುದು. ಗ್ರಂಥಾಲಯಗಳು ಮನುಷ್ಯನ ಹೃದಯದ ಆತ್ಮವಿದ್ದಂತೆ. ಹೊಸ ಹೊಸ ಪುಸ್ತಕಗಳನ್ನು ಓದುವುದರ ಮೂಲಕ ನಮ್ಮ ಆಲೋಚನೆಗಳನ್ನ ಬದಲಾಯಿಸಿಕೊಳ್ಳಬಹುದು. ಜೊತೆಗೆ ನಾವು ಅಂದುಕೊಂಡ ಉದ್ಯೋಗವನ್ನು ಪಡೆಯಬಹುದು ಎಂದರು.

ಈ ಕಾರ್ಯಕ್ರಮದಲ್ಲಿ ಆನವಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಖಂಡೋಜಿ ಟಿ ಲಮಾಣಿ, ಡಾ.ಭಾರತಿ ದೇವಿ, ಡಾ.ಎಸ್.ರಾಜುನಾಯ್ಕ, ಡಾ. ನಾಗರಾಜ್ ನಾಯ್ಕ, ಡಾ.ಸಂಗೀತ ಬಗಲಿ, ಕೆ.ದೀಪ, ಎಚ್.ರುದ್ರಮುನಿ ವಿಶ್ವನಾಥ್, ಉಮೇಶ್, ಜಯಪ್ಪ, ರಾಜಶೇಖರ್, ಮಂಜುಳಾ ಹಾಗೂ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.